fbpx
ಸಮಾಚಾರ

ಐಪಿಎಲ್ ನ ಚೊಚ್ಚಲ ಹರಾಜಿನಲ್ಲಿ ಮೊದಲು ಹರಾಜಾದ ಆಟಗಾರ ಯಾರು ಗೊತ್ತಾ? ಇಲ್ಲಿದೆ ಕುತೂಹಲಕಾರಿ ಸಂಗತಿ

2022 ರ IPL ಹರಾಜಿಗೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಭಾರತ ಸೇರಿದಂತೆ ವಿಶ್ವದ 590 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ವರ್ಷದಂತೆ, ಪಂದ್ಯಾವಳಿಯ ಮೊದಲು ನಡೆಯಲಿರುವ ಹರಾಜಿನ ಬಗ್ಗೆ ಅಭಿಮಾನಿಗಳು ಹೆಚ್ಚು ಕುತೂಹಲ ವಿರುವುದು ಸಹಜ. ಅಭಿಮಾನಿಗಳ ಕಾತುರತೆಯನ್ನು ಹೆಚ್ಚಿಸುವಂತಹ ಒಂದು ವಿಶೇಷ ಸುದ್ದಿಯೊಂದನ್ನು ನಾವೀಗ ನಿಮಗೆ ತಿಳಿಸುತ್ತೇವೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಐಪಿಎಲ್ ನ ಮೊದಲ ಹರಾಜಿನ ಪ್ರಕ್ರಿಯೆ ಶುರುವಾಗಿದ್ದು 2008 ರಲ್ಲಿ. ಐಪಿಎಲ್ ಪಂದ್ಯಾವಳಿ ಪ್ರಾರಂಭವಾದಾಗ ಹರಾಜಿನ ವೇಳೆ ಮೊದಲು ಯಾವ ಆಟಗಾರರನನ್ನು ಹರಾಜು ಹಾಕಲಾಯಿತು ಎಂಬುದರ ಬಗ್ಗೆ ತಮಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

 

 

ಆಟಗಾರರ ಹರಾಜಿನ ಪ್ರಕ್ರಿಯೆಯು ಫೆಬ್ರವರಿ 2008 ರಂದು ನಡೆಯಿತು. ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪ್ರವೇಶ ಪಡೆದ ಆಟಗಾರರು ಮಾತ್ರ ಹರಾಜಿನಲ್ಲಿ ಭಾಗವಹಿಸಿದ್ದರು. ಹರಾಜಿನ ಪ್ರಕ್ರಿಯೆ ಶುರು ವಾಗಿದ್ದು ಹರಾಜಿನಲ್ಲಿ ಮೊದಲು ಪ್ರಕಟಿಸಿದ್ದ ಹೆಸರೇ “ಶೇನ್ ವಾರ್ನ್”.
ಹೌದು, ರಾಜಸ್ಥಾನ್ ರಾಯಲ್ಸ್ ತಂಡವು ಶೇನ್ ವಾರ್ನ್ ಅವರನ್ನು 4 ಲಕ್ಷ 50 ಸಾವಿರ ಯುಎಸ್ ಡಾಲರ್ಗಳ ಬಿಡ್ನೊಂದಿಗೆ ಖರೀದಿಸಿತು. ಜೊತೆಗೆ ವಾರ್ನ್ ಅವರನ್ನು ರಾಜಸ್ತಾನ ತಂಡದ ನಾಯಕನನ್ನಾಗಿ ಮಾಡಿತು.

ಐಪಿಎಲ್ ನ ಮೊದಲ ಸೀಸನ್ ನಲ್ಲಿ ರಾಜಸ್ಥಾನ್ ತಂಡವನ್ನು ಅತ್ಯಂತ ದುರ್ಬಲ ತಂಡ ಎಂದು ಪರಿಗಣಿಸಲಾಗಿತ್ತು. ವಾರ್ನ್, ಸ್ಮಿತ್ ಮತ್ತು ವಾಟ್ಸನ್ ಬಿಟ್ಟರೆ ಅಂತಹ ಪರಿಣಾಮಕಾರಿ ಆಟಗಾರರು ಯಾರು ಇಲ್ಲ ಎಂದು ತಿಳಿದುಕೊಂಡಿದ್ದಾರೆ. ಆದರೆ ತಂಡದ ಶಿಸ್ತಿನ ಪರಿಶ್ರಮದಿಂದ ಫೈನಲ್ ಪ್ರವೇಶಿಸಿ ಐಪಿಎಲ್ ನಲ್ಲಿ ಅತ್ಯಂತ ಬಲಿಷ್ಠವಾದ ತಂಡ ಎಂದೇ ಪ್ರಖ್ಯಾತರಾಗಿರುವ ಸಿ.ಎಸ್.ಕೆ ತಂಡವನ್ನು ಮಣಿಸಿ ಮೊದಲ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top