fbpx
ಸಮಾಚಾರ

ಡ್ರೈವಿಂಗ್​​ ವೇಳೆ ಮೊಬೈಲ್​​ ಬಳಸುತ್ತೀರಾ? ಹಾಗಾದ್ರೆ ಈ ಸುದ್ದಿ ಓದ್ಲೇ ಬೇಕು: ಇನ್ಮೇಲೆ ಮೊಬೈಲ್​ಗಿಂತಾ ದಂಡವೇ ದುಬಾರಿ!

ಇನ್ಮೇಲೆ ಡ್ರೈವಿಂಗ್ ವೇಳೆ ಮೊಬೈಲ್ ಬಳಸುವ ಮುನ್ನ ನೂರು ಬಾರಿ ಯೋಚಿಸಬೇಕು. ಏಕೆಂದರೆ ಡ್ರೈವಿಂಗ್ ವೇಳೆ ಮೊಬೈಲ್ ಬಳಸಿದರೆ ನಮ್ಮ ಜೇಬಿನ ಕತ್ತರಿ ಬೀಳುವುದು ಪಕ್ಕಾ. ದಂಡ ಕಟ್ಟದೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ತಾವು ಬಳಸುವ ಮೊಬೈಲ್ ಗಿಂತ ತಾವು ಕಟ್ಟುವ ದಂಡವೇ ಹೆಚ್ಚು ದುಬಾರಿಯಾಗಬಹುದು.

ಇತ್ತೀಚಿಗೆ ಹೊರಡಿಸಿರುವ ಪರಿಷ್ಕೃತ ಆದೇಶದ ಪ್ರಕಾರ ದಂಡವನ್ನು 1500 ರೂ.ಇಂದ 10 ಸಾವಿರ ರೂ. ವರೆಗೂ ಹೆಚ್ಚಿಸಲಾಗಿದೆ.

ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಮೊದಲ ಹಾಗು ಎರಡನೆಯ ಬಾರಿ ರೂಲ್ಸ್ ಬ್ರೇಕ್ ಮಾಡಿದರೆ 1500 ರೂ. ದಂಡವನ್ನು ಕಟ್ಟಬೇಕು ಮತ್ತು ಮೂರನೆಯ ಬಾರಿ ತಪ್ಪನ್ನು ಮಾಡಿದರೆ ಬರೋಬರಿ 10000 ದಂಡವನ್ನು ಕಟ್ಟಬೇಕಾಗುವ ಪರಿಸ್ಥಿತಿ ಬರುತ್ತದೆ.

ಇನ್ನು ಕಾರುಗಳಿಗೆ ಸಂಬಂಧಿಸಿದಂತೆ ಮೊದಲ ಹಾಗು ಎರಡನೆಯ ಬಾರಿ ರೂಲ್ಸ್ ಬ್ರೇಕ್ ಮಾಡಿದರೆ 3000 ರೂ. ದಂಡವನ್ನು ಕಟ್ಟಬೇಕು ಮತ್ತು ಮೂರನೆಯ ಬಾರಿ ತಪ್ಪನ್ನು ಮಾಡಿದರೆ ಬರೋಬರಿ 10000 ದಂಡವನ್ನು ಕಟ್ಟಬೇಕಾಗುವ ಪರಿಸ್ಥಿತಿ ಬರುತ್ತದೆ.

ಇನ್ನು ಬಸ್ಸು, ಲಾರಿ ಮತ್ತು ಲಘು ವಾಹನಗಳಿಗೆ ಸಂಬಂಧಿಸಿದಂತೆ ಮೊದಲ ಹಾಗು ಎರಡನೆಯ ಬಾರಿ ರೂಲ್ಸ್ ಬ್ರೇಕ್ ಮಾಡಿದರೆ 4000 ರೂ. ದಂಡವನ್ನು ಕಟ್ಟಬೇಕು ಮತ್ತು ಮೂರನೆಯ ಬಾರಿ ತಪ್ಪನ್ನು ಮಾಡಿದರೆ ಬರೋಬರಿ 10000 ದಂಡವನ್ನು ಕಟ್ಟಬೇಕಾಗುವ ಪರಿಸ್ಥಿತಿ ಬರುತ್ತದೆ.

ಆದ್ದರಿಂದ ಇನ್ನು ಮುಂದೆ ಗಾಡಿ ಓಡಿಸುವ ವೇಳೆ ಮೊಬೈಲ್ ಬಳಸದೇ ಇರುವುದು ಉತ್ತಮ. ಇಲ್ಲವೆಂದರೆ ನಾವೇ ನಮ್ಮ ಜೇಬಿಗೆ ಕತ್ತರಿ ಹಾಕಿಸಿಕೊಂಡಂತಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top