fbpx
ಸಮಾಚಾರ

ಮೇ 15 ರಂದು ಹುಬ್ಬಳ್ಳಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ!

ಹುಬ್ಬಳಿಯ ಬೈರಿದೇವರಕೊಪ್ಪದಲ್ಲಿ ಈಶ್ವರಿ ವಿಶ್ವವಿದ್ಯಾಲಯ ನಿರ್ಮಿಸಿರುವ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕ ಮ್ಯುಸಿಯಂ ಮೇ 15 ರಂದು ಲೋಕಾರ್ಪಣೆಗೊಳ್ಳಲಿದೆ. ಇದನ್ನು ಐದೂವರೆ ಎಕೆರೆಯಲ್ಲಿ ನಿರ್ಮಿಸಿದ್ದು ಮ್ಯೂಸಿಯಂ ನಲ್ಲಿ 36/13 ಅಳತೆಯ 114 ಕೋಣೆಗಳಿವೆ.

ಈ ಕೋಣೆಯಲ್ಲಿ ಎಲ್ಲರಿಗು ಅರ್ಥ ಆಗುವ ರೀತಿಯಲ್ಲಿ ಭಗವದ್ಗೀತೆ ಶ್ಲೋಕಗಳ ಸಾರಾಂಶವನ್ನು ಬರೆದಿದ್ದಾರೆ. ಇನ್ನು ಇದರ ಕುರಿತು ಸಂಸ್ಥೆಯ ಸಂಚಾಲಕಿಯಾದ ಬ್ರಹ್ಮಕುಮಾರಿ ನಿರ್ಮಲಾದೇವಿಯವರು “ಒಟ್ಟು 1500 ಸಾಮರ್ಥ್ಯವಿರುವ ಆಧ್ಯಾತ್ಮಿಕ ತರಬೇತಿ ಸಭಾಂಗಣ ಮತ್ತು ಆದ್ಯಾತ್ಮಿಕ ಯೋಗ ತರಬೇತಿಯನ್ನು ನೀಡಲಾಗುತ್ತದೆ. ಇದಲ್ಲದೆ 200 ಜನರಿಗೆ ಅನುಕೂಲವಾಗುವಂತೆ ವಸತಿ ಸೌಲಭ್ಯವನ್ನು ಸಹ ನಿರ್ಮಿಸಲಾಗಿದೆ” ಎಂದು ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು.

ಇದರ ಉದ್ಘಾಟನಾ ಸಮಾರಂಭವು ಇದೆ ತಿಂಗಳ May 15 ರಂದು ನಡೆಯಲಿದ್ದು ಸನ್ಮಾನ್ಯ ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಇನ್ನು ಇವರ ಜೊತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಸೇರಿ ವಿವಿಧ ಸಚಿವರು ಹಾಗೂ ಈಶ್ವರಿ ವಿವಿಯ ರಾಜ ಋಷಿಗಳು ಪಾಲ್ಗೊಳ್ಳಲಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top