fbpx
ಸಮಾಚಾರ

ಇನ್ನು ಮುಂದೆ ಹುಡುಗ ಹುಡುಗಿಯರು ಒಟ್ಟಿಗೆ ರೆಸ್ಟೋರೆಂಟ್ ನಲ್ಲಿ ಕುಳಿತುಕೊಳ್ಳುವಂತಿಲ್ಲ, ಪಾರ್ಕಿನಲ್ಲಿ ಸುತ್ತಾಡುವಂತಿಲ್ಲ- ಕಠಿಣ ನಿಯಮ ಜಾರಿಗೆ ತಂದ ತಾಲಿಬಾನ್ ಸರ್ಕಾರ

ನಾವು ಯಾವುದೇ ರೆಸ್ಟೋರೆಂಟ್ ಗೆ ಹೋದರೆ ಅಲ್ಲಿ ಹುಡುಗ ಹುಡುಗಿಯರು ಅಥವಾ ಕುಟುಂಬದವರು ಒಟ್ಟಿಗೆ ಕೂತು ಊಟ ಮಾಡುತ್ತಿರುವುದನ್ನು ನೋಡಿರುತ್ತೇವೆ. ಆದರೆ ತಾಲಿಬಾನ್ ನಂತಹ ದೇಶದಲ್ಲಿ ಇನ್ಮೇಲೆ ಈ ರೀತಿ ನೋಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇನ್ನುಮುಂದೆ ಹುಡುಗ ಹುಡುಗಿ ಒಟ್ಟಿಗೆ ಕೂತುಕೊಳ್ಳುವುದಾಗಲಿ, ಪಾರ್ಕಿನಲ್ಲಿ ಸುತ್ತಾಡುವುದಾಗಲಿ ತಾಲಿಬಾನ್ ಸರ್ಕಾರ ನಿಷೇಧಿಸಿದೆ.

ಪಶ್ಚಿಮ ಆಫ್ಘಾನಿಸ್ತಾನದ ಹೆರಾತ್‌ ನಗರದಲ್ಲಿ ಹುಡುಗ ಹುಡುಗಿಯರು ಒಟ್ಟಿಗೆ ಕೂತು ಊಟ ಮಾಡುವುದಾಗಲಿ, ಒಟ್ಟಿಗೆ ಪಾರ್ಕಿನಲ್ಲಿ ಸುತ್ತುವುದಾಗಲಿ ಮಾಡಬಾರದು. ಆಗಸ್ಟ್‌ನಲ್ಲಿ ತಾಲಿಬಾನ್‌ ಆಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಮರಳಿದ ನಂತರ , ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವ ನಿರ್ಬಂಧಗಳನ್ನು ವಿಧಿಸುತ್ತಿದೆ.

ಹೆರಾತ್‌ನಲ್ಲಿ ಸದ್ಗುಣ ಪ್ರಚಾರ ಮತ್ತು ದುರಾಚಾರ ತಡೆಗಟ್ಟುವಿಕೆ ಸಚಿವಾಲಯದ ತಾಲಿಬಾನ್ ಅಧಿಕಾರಿ ರಿಯಾಜುಲ್ಲಾ ಸೀರತ್, ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ನಿಯಮ ಕೇವಲ ಪುರುಷ ಮತ್ತು ಮಹಿಳೆಯರಿಗಷ್ಟೇ ಅಲ್ಲ, ಗಂಡ-ಹೆಂಡತಿಗೂ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

ಇನ್ನು ಈ ರೀತಿಯ ನೋವನ್ನು ಅನುಭವಿಸಿದ ಮಹಿಳೆಯೊಬ್ಬರು “ಹೆರಾತ್ ರೆಸ್ಟೋರೆಂಟ್‌ನಲ್ಲಿ ನನ್ನ ಮತ್ತು ನನ್ನ ಗಂಡನಿಗೆ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಹೇಳಿದರು” ಎಂದು ತಿಳಿಸಿದರು. ಇನ್ನು ರೆಸ್ಟೋರೆಂಟ್ ನ ಮಾಲಿಕರಾದ ಸಫೀವುಲ್ಲಾ ಅವರು “ತಾಲಿಬಾನ್‌ ಕಠಿಣ ನಿಯಮ ವಿಧಿಸಿರುವುದನ್ನು ಖಚಿತಪಡಿಸಿದ್ದಾರೆ. ನಾವು ಆದೇಶವನ್ನು ಅನುಸರಿಸಬೇಕು. ಆದರೆ ಇದು ನಮ್ಮ ವ್ಯವಹಾರದ ಮೇಲೆ ಬಹಳ ಋಣಾತ್ಮಕ ಪರಿಣಾಮ ಬೀರುತ್ತದೆ” ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top