fbpx
ಸಮಾಚಾರ

ಉತ್ತರ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಒಂದೇ ದಿನದಲ್ಲಿ 1.74 ಲಕ್ಷ ಮಂದಿಗೆ ಕೊರೊನ ಸೋಂಕು!

ಉತ್ತರ ಕೊರಿಯಾ ದಲ್ಲಿ ಇಲ್ಲಿಯವರೆಗೂ ಒಂದು ಕೋವಿಡ್ ಪ್ರಕರಣಗಳು ಸಹ ಕಂಡಿರಲಿಲ್ಲ. ಆದರೆ ಇದೀಗ ಕೇವಲ ಒಂದು ಪ್ರಕರಣ ಪತ್ತೆಯಾಗುತ್ತಿದ್ದಂತೆ ರಾಷ್ಟೀಯ ತುರ್ತು ಪರಿಸ್ಥಿಯನ್ನು ಘೋಷಿಸಿದ್ದರು ಕಿಮ್ ಜೊಂಗ್-ಉನ್. ಇದಾದ ನಂತರ ಇದೀಗ ಒಂದೇ ದಿನ 1.74 ಲಕ್ಷ ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದ್ದು ಒಂದೇ ದಿನ 27 ಮಂದಿ ಮೃತಪಟ್ಟಿದ್ದಾರೆ.

ಇದರಿಂದ ಮೃತಪಟ್ಟವರು ಕೊರೊನ ದಿಂದಲೇ ಮೃತಪಟ್ಟರು ಎಂಬುದು ಇನ್ನು ದೃಢಪಟ್ಟಿಲ್ಲ. ಇನ್ನು ಮೇ ತಿಂಗಳಲ್ಲಿ 5,24,440 ಮಂದಿಗೆ ಜ್ವರ ಬಂದಿದ್ದು ಅದರಲ್ಲಿ 2,43,630 ಮಂದಿ ಚೇತರಿಸಿಕೊಂಡರು. ಆದರೆ ಜ್ವರ ಬಂದ ವ್ಯಕ್ತಿಗಳಿಗೆ ಕೊರೊನ ದೃಢಪಟ್ಟಿರುವುದು ಇನ್ನು ತಿಳಿದು ಬಂದಿಲ್ಲ.

ಇನ್ನು ಇದರ ಕುರಿತು ಅಲ್ಲಿರುವ ಅರೋಗ್ಯ ತಜ್ಞರು ಮತ್ತು ಮೂಲ ಸೌಕರ್ಯಗಳ ಕೊರತೆ ಕೂಡ ಮುಖ್ಯ ಕಾರಣವಾಗಿದೆ. ಇದಲ್ಲದೆ ಇಲ್ಲಿವರೆಗೂ ಉತ್ತರ ಕೊರಿಯಾದ ಮಂದಿ ಲಸಿಕೆ ಪಡೆಯದೇ ಇರುವುದು ಪ್ರಕರಣ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಇದರಿಂದ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಅಲ್ಲಿನ ಸರ್ಕಾರ ವಿಫಲವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top