fbpx
ಸಮಾಚಾರ

ಓಲಾ ಎಲೆಕ್ಟ್ರಿಕ್ ಸ್ಕೂಟರ್ ರಿವರ್ಸ ಗೇರ್ ಮಾಡಿದ ಎಡವಟ್ಟು- ವೃದ್ಧನ ತಲೆಗೆ 10 ಒಲಿಗೆ!

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ಇದರ ಮದ್ಯೆ ಜನರು ಪೆಟ್ರೋಲ್ ವೆಹಿಕಲ್ ಬಳಸುವ ಬದಲು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ಉಪಯೋಗಿಸಲು ಆಸಕ್ತಿಯನ್ನು ತೋರುತ್ತಿದ್ದಾರೆ. ಆದರೆ ಓಲಾ ಕಂಪನಿಯ ಎಲೆಕ್ಟ್ರಿಕ್ ವೆಹಿಕಲ್ ಮಾಡಿದ ಎಡವಟ್ಟಿನಿಂದ ವೃದ್ಧನ ತಲೆಗೆ 10 ಒಲಿಗೆ ಹಾಕಲಾಗಿದ್ದು ಇದೀಗ ಎಲೆಕ್ಟ್ರಿಕ್ ಸ್ಕೂಟರ್ ತೊಗೊಬೇಕೊ ಬೇಡವೋ ಎಂಬ ಗೊಂದಲದಲ್ಲಿದ್ದಾರೆ.

ನಾವು 2 ವೀಲರ್ ಓಡಿಸಬೇಕಾದರೆ ಮುಂದಕ್ಕೆ ಓಡುಸುತ್ತೇವೆ. ಅದೇ ಹಿಂದಕ್ಕೆ ಓಡಿಸಬೇಕಾದರೆ ಅದನ್ನು ತಳ್ಳಬೇಕು ಇಲ್ಲ ಇನ್ನೊಬ್ಬರ ಸಹಾಯದಿಂದ ಎಳೆಯಬೇಕು. ಆದರೆ ಓಲಾ ಸ್ಕೂಟರ್ ನಲ್ಲಿ ಈತರ ಕಷ್ಟ ಪಡುವ ಅವಶ್ಯಕತೆಯೇ ಇರುವುದಿಲ್ಲ. ಏಕೆಂದರೆ ಇದರಲ್ಲಿರುವ ಒಂದು ಬಟನ್ ಒತ್ತಿದರೆ ನೀವು ಮುಂದಕ್ಕೆ ಚಲಿಸುವ ರೀತಿಯಲ್ಲೇ ಗಾಡಿಯನ್ನು ಹಿಂದಕ್ಕೆ ಚಲಿಸಬಹುದು. ಇದಕ್ಕೆ ಯಾರ ಸಹಾಯವು ಬೇಡ. ಆದರೆ ಇಂದು ಓಲಾ ಸ್ಕೂಟರ್ ನ ಈ ವಿಶೇಷವಾದ ಫೀಚರ್ ವೃದ್ಧನ ತಲೆಗೆ ಒಲಿಗೆ ಆಕಿಸಿಕೊಳ್ಳುವಂತೆ ಮಾಡಿದೆ.

ರಿವರ್ಸ ಗೇರ್ ನಲ್ಲಿ ಸ್ಕೂಟರ್ ಅತಿವೇಗವಾಗಿ ಚಲಿಸಿದೆ. ಇದರಿಂದ ವೃದ್ಧ ಆಯತಪ್ಪಿ ಕೆಳಗೆ ಬಿದ್ದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಇವರ ತಲೆಗೆ 10 ಒಲಿಗೆಯನ್ನು ಹಾಕಲಾಗಿದೆ. ‘ಓಲಾ ಎಲೆಕ್ಟ್ರಕ್‌ ಸ್ಕೂಟರ್‌ನ ತಂತ್ರಜ್ಞಾನದ ಸಮಸ್ಯೆಯಿಂದಾಗಿ ಹಿಮ್ಮುಖವಾಗಿ ವೇಗವಾಗಿ ಚಲಿಸಿದ್ದರಿಂದ ನನ್ನ ತಂದೆಗೆ ಗಂಭೀರ ಗಾಯವಾಗಿದೆ. ಅವರ ಎಡಭುಜ ಮುರಿದುಹೋಗಿದೆ’ ಎಂದು ಅವರ ಮಗ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top