fbpx
ಸಮಾಚಾರ

ದಿನಾ ರಾತ್ರಿ ಮಲಗುವಾಗ ಏರ್ ಕಂಡೀಷನರ್ ಬಳಸುತ್ತಿದ್ದೀರಾ? ಹಾಗಿದ್ದರೆ ಹುಷಾರ್! ಗಂಭೀರವಾದ ಅರೋಗ್ಯ ಸಮಸ್ಯೆಯನ್ನು ನೀವು ಎದುರಿಸಬೇಕಾಗುತ್ತದೆ

ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲಿ ಎಸಿ (Air Conditioner) ಇರುವುದನ್ನು ನೋಡಿರುತ್ತೇವೆ. ಜನರು ಇದಕ್ಕೆ ಎಷ್ಟು ಅಟ್ಯಾಚ್ ಆಗಿದ್ದಾರೆ ಎಂದರೆ ಎಸಿ ಇಲ್ಲದೆ ಇದ್ದರೆ ಬದುಕಲು ಸಾಧ್ಯವೇ ಇಲ್ಲ ವೆನ್ನುವಷ್ಟು. ಆದರೆ ವಿಪರೀತ ಎಸಿ ಬಳಕೆಯಿಂದ ಜೀವನಕ್ಕೆ ಆಗುವ ತೊಂದರೆಗಳು ಏನೆಂಬುದನ್ನು ಅವರು ಅರಿತಿಲ್ಲ. ವಿಪರೀತ ಎಸಿ ಉಪಯೋಗಿಸುವುದರಿಂದ ಆಗುವ ಸಮಸ್ಯೆಗಳು ಇಲ್ಲಿವೆ.

ಉಸಿರಾಟದ ಸಮಸ್ಯೆ:
ಅತಿಯಾದ ಎಸಿ ಉಪಯೋಗದಿಂದ ಉಸಿರಾಟದ ಸಮಸ್ಯೆ ಎದುರಾಗಬಹುದು. ಗಂಟಲು ಒಣಗುವುದು, ರೈನೈಟಿಸ್‌ ಅಥವಾ ಮೂಗು ಕಟ್ಟುವ ಸಮಸ್ಯೆ ಕಾಡಬಹುದು. ರೈನೈಟಿಸ್‌ ಎಂದರೆ, ಮೂಗಿನಲ್ಲಿರುವ ಮ್ಯೂಕಸ್‌ ಮೆಂಬ್ರೇನ್​ನಲ್ಲಿ ಸೋಂಕು ಉಂಟಾಗಬಹುದು. ಅಥವಾ ಅಲ್ಲಿ ಮೊದಲೇ ಸೋಂಕಿದ್ದರೆ ಅದನ್ನು ಹೆಚ್ಚಿಸಬಲ್ಲದು. ಇದು ವೈರಲ್‌ ಸೋಂಕು ಅಥವಾ ಅಲರ್ಜಿಗೂ ಕಾರಣವಾಗಬಲ್ಲದು.

ಅಸ್ತಮಾ ಮತ್ತು ಅಲರ್ಜಿ:
ಅಸ್ತಮಾ ಮತ್ತು ಅಲರ್ಜಿಇಂದ ಬಳಲುತ್ತಿರುವವರು ಹೆಚ್ಚಾಗಿ ಎಸಿ ಇಂದ ದೂರ ಉಳಿಯುವುದು ಉತ್ತಮ. ಏಕೆಂದರೆ ಇದು ನಿಮ್ಮ ಆರೋಗ್ಯದ ಮೇಲೆ ಬಹಳ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ಎಸಿ ಸ್ವಚ್ಛವಾಗಿಲ್ಲದಿದ್ದರು ಕೂಡ ಈ ರೀತಿಯ ಕಾಯಿಲೆಗಳು ಹರಡುವ ಸಾಧ್ಯತೆಗಳಿರುತ್ತವೆ.

ಬೆನ್ನು ನೋವು, ತಲೆ ನೋವು ಇತ್ಯಾದಿ ಸಮಸ್ಯೆ:
ರಾತ್ರಿ ಪೂರ್ತಿ ಎಸಿ ಯಲ್ಲಿ ಮಲಗಿದರೆ ಬೆನ್ನು ನೋವು, ತಲೆ ನೋವು ಹೀಗೆ ಹತ್ತು ಹಲವಾರು ಸಮಸ್ಯೆಗಳು ಬರುತ್ತದೆ. ಶುದ್ಧ ಗಾಳಿಯ ಕೊರತೆಯಿಂದ ನಿಮಗೆ ವಿಪರೀತ ತಲೆ ನೋವು ಬರುವ ಸಾಧ್ಯತೆಗಳಿರುತ್ತವೆ. ಇದಲ್ಲದೆ ಇಡೀ ದಿನ ಎಸಿ ಯಲ್ಲಿ ಮಲಗಿ ಬೆಳಗೆ ಎದ್ದರೆ ಕೆಲವರಿಗೆ ಶೀತ ನೆಗಡಿ ಸಮಸ್ಯೆಯು ಉಂಟಾಗುತ್ತದೆ. ಏಕೆಂದರೆ ಎಸಿಯಲ್ಲಿ ತೀರಾ ಕಡಿಮೆ ತಾಪಮಾನ ಇಟ್ಟುಕೊಂಡು ಮಲಗಿರುತ್ತಾರೆ. ಇದರಿಂದ ಆರೋಗ್ಯದ ಮೇಲು ಗಂಭೀರವಾದ ಪರಿಣಾಮವು ಬೀರಬಹುದು.

ಇವೆಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಸಿಯಲ್ಲಿ ಮಲಗುವ ಬದಲು ಶುದ್ಧವಾದ ಗಾಳಿಯಲ್ಲಿ ಅಂದರೆ ಫ್ಯಾನ್ ಅಥವಾ ಕಿಟಕಿಗಳನ್ನು ತೆಗೆದು ಮಲಗಬಹುದು. ಇದರಿಂದ ನಿಮಗೆ ನಿದ್ದೆಯು ಬರುತ್ತದೆ ಮತ್ತು ಎಸಿ ಇಂದ ಆಗುವ ಅನಾಹುತಗಳನ್ನು ಸಹ ತಪ್ಪಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top