fbpx
ಸಮಾಚಾರ

ಆಂಡ್ರೂ ಸೈಮಂಡ್ಸ್ ಅವರ ತುಟಿ ಸದಾ ಬಿಳಿ ಬಣ್ಣದಿಂದ ಕೂಡಿರಲು ಕಾರಣವೇನು ಗೊತ್ತಾ?

ಶನಿವಾರ ನಡೆದ ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಆಂಡ್ರೂ ಸೈಮಂಡ್ಸ್ ಮೃತಪಟ್ಟಿದ್ದರು. ಇವರ ನಿಧನಕ್ಕೆ ಅಭಿಮಾನಿಗಳಿಂದ ಇಡಿದು ಇಡೀ ಕ್ರಿಕೆಟ್ ಜಗತ್ತಿನ ದಿಗ್ಗಜರು ಸಂತಾಪ ಸೂಚಿಸಿದರು. ಆಂಡ್ರೂ ಸೈಮಂಡ್ಸ್ ಅವರನ್ನು ನೋಡಿದ ತಕ್ಷಣ ಅವರ ತುಟಿ ಏಕೆ ಬಿಳಿ ಬಣ್ಣದಲ್ಲಿದೆ ಎಂಬ ಅನುಮಾನ ಬರುವುದು ಸಹಜ. ಇದಕ್ಕೆ ಒಂದು ಕಾರಣ ವಿದೆ.

ಆಂಡ್ರೆ ಸೈಮಂಡ್ಸ್ ಅವರ ತುಟಿಗಳು ಬಿಳಿಯಾಗಿರುತ್ತವೆ ಏಕೆಂದರೆ ಅವರು ಝಿಂಕ್ ಕ್ರೀಮ್ ಅನ್ನು ಉಪಯೋಗಿಸುತ್ತಾರೆ. ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಕ್ರಿಕೆಟಿಗರು ಹೆಚ್ಚಿನ ಸಮಯ ಬಿಸಿಲಿನಲ್ಲಿ ಮೈದಾನದಲ್ಲಿ ಆಡುವ ಕಾರಣ ಅವರನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಈ ಕ್ರೀಮ್ ಅನ್ನು ಬಳಸುತ್ತಾರೆ.

ಕ್ರಿಕೆಟ್ ನೋಡುವ ಅನೇಕರಿಗೆ ಕೆನ್ನೆ ಮತ್ತು ತುಟಿಗಳ ಮೇಲೆ ಹೆಚ್ಚಾಗಿ ಹಚ್ಚುವ ಬಿಳಿ ಕ್ರೀಮ್ ಬಗ್ಗೆ ಅನುಮಾನವಿರುತ್ತದೆ. ಹೆಚ್ಚಿನ ತಾಪಮಾನ ಇರುವ ದೇಶಗಳಾದ ಆಸ್ಟ್ರೇಲಿಯಾದಲ್ಲಿ ಬಿಸಿಲಿನಿಂದ ಆಗುವ ಅನಾಹುತದಿಂದ ತಪ್ಪಿಸಿಕೊಳ್ಳಲು ಇದನ್ನು ಬಳಸುತ್ತಾರೆ. ಬೌಲರ್ ಗಳಲ್ಲದೆ ಬ್ಯಾಟ್ಸಮನ್ ಸಹ ಈ ಕ್ರೀಮ್ ಅನ್ನು ಬಳಸುತ್ತಾರೆ.

ಆದರೆ ಸೈಮಂಡ್ಸ್ ಅವರು ತುಟಿಗಳಿಗೆ ಈ ಕ್ರೀಮ್ ಅನ್ನು ಹಚ್ಚಿಕೊಳ್ಳುತ್ತಿದ್ದರು. ಇದು ನೋಡಲು ವಿಚಿತ್ರವೆನಿಸಿದರೂ ಆನಂತರ ಅದೊಂತರ ಟ್ರೆಂಡ್ ಆಗಿ ಬದಲಾಗಿತ್ತು. ಸೈಮಂಡ್ಸ್ ಅಭಿಮಾನಿಗಳು ಕೂಡ ತುಟಿಗೆ ಬಿಳಿ ಕ್ರೀಮ್ ಹಚ್ಚಿಕೊಂಡು ಸ್ಟೇಡಿಯಂಗೆ ಬರುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top