fbpx
ಸಮಾಚಾರ

‘ಕರಿಯ’ ಚಿತ್ರ ನಿರ್ಮಾಪಕ ಆನೇಕಲ್‌ ಬಾಲರಾಜ್‌ ನಿಧನ

ಕನ್ನಡ ಚಿತ್ರರಂಗದ ಹಿಟ್ ಚಿತ್ರ `ಕರಿಯಾ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಆನೇಕಲ್ ಬಾಲರಾಜ್ ನಿಧನರಾಗಿದ್ದಾರೆ. 58 ವರ್ಷ ವಯಸ್ಸಿನ ಆನೇಕಲ್ ಬಾಲರಾಜ್ ಅವರು ಭಾನುವಾರ ಬೆಳಿಗ್ಗೆ ಅಪಘಾತದಿಂದ ನಿಧನರಾದರು.

ಅಪಘಾತ ಹೇಗಾಯ್ತು?
ಜೆಪಿ ನಗರದ ತಮ್ಮ ನಿವಾಸದ ಬಳಿ ಬಾಲರಾಜ್ ಅವರು ವಾಕಿಂಗ್ ಮಾಡುವಾಗ ಅಪಘಾತವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.

ಇಡೀ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದ ಕರಿಯಾ ಸಿನಿಮಾ ಕೂಡ ಬಾಲರಾಜ್‌ ಅವರೇ ಬಂಡವಾಳ ಹಾಕಿದ್ದರು. ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಕೂಡ ಇದೀಗ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಪುತ್ರನಿಗಾಗಿ ‘ಕೆಂಪ’, ‘ಜನ್ಮ’, ‘ಗಣಪ’ ಸಿನಿಮಾಗಳನ್ನು ಆನೇಕಲ್ ಬಾಲರಾಜ್ ಸ್ವತಃ ನಿರ್ಮಾಣ ಮಾಡಿದ್ದಾರೆ. ಇನ್ನು, ಗಣಪ ಸಿನಿಮಾದಿಂದ ಸಂತೋಷ್ ಕರಿಯರ್‌ಗೆ ದೊಡ್ಡ ಬ್ರೇಕ್ ನೀಡಿತು. ಅಲ್ಲದೆ, ಪುತ್ರ ಸಂತೋಷ್ ನಾಯಕತ್ವದಲ್ಲಿ ‘ಕರಿಯ 2’ ಸಿನಿಮಾವನ್ನು ಆನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top