fbpx
ಸಮಾಚಾರ

ಟಗರು-2 ಸಿನಿಮಾದಲ್ಲಿ ಅಪ್ಪು ಮತ್ತು ಶಿವಣ್ಣ ಒಟ್ಟಿಗೆ ನಟಿಸಬೇಕಿತ್ತು!

ಹ್ಯಾಟ್ರಿಕ್ ಹೀರೋ ಶಿವ್ ರಾಜಕುಮಾರ್ ಅವರ ಟಗರು ಚಿತ್ರ ಬಿಡುಗಡೆ ಯಾಗಿ ಸಕತ್ ಸೌಂಡ್ ಮಾಡಿತ್ತು. ಟಗರು ಸಿನಿಮಾದ ಸಕ್ಸಸ್ ನಂತರ ಟಗರು 2 ಸಿನಿಮಾ ಮಾಡುವ ಬಗ್ಗೆ ದುನಿಯಾ ಸೂರಿ ಚಿಂತಿಸಿದ್ದರು ಎಂಬ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇನ್ನು ಅಚ್ಚರಿಯ ವಿಷಯ ವೆಂದರೆ ಈ ಸಿನಿಮಾದಲ್ಲಿ ಅಪ್ಪು ಮತ್ತು ಶಿವಣ್ಣ ಒಟ್ಟಿಗೆ ನಟಿಸುವ ಪ್ಲಾನ್ ಇತ್ತು ಎಂದು ಹೇಳಲಾಗುತ್ತಿದೆ.

ಇನ್ನು ಈ ಚಿತ್ರದ ಕಥೆಯನ್ನು ಅಪ್ಪು ಮತ್ತು ಶಿವಣ್ಣ ಅವರಿಗೆ ದುನಿಯಾ ಸೂರಿ ವಿವರಿಸಿದ್ದರಂತೆ. ಇಬ್ಬರಿಗೂ ಈ ಕಥೆ ಬಹಳ ಇಷ್ಟವಾಗಿತ್ತು. ಆದರೆ ಆಗಿದ್ದೆ ಬೇರೆ.

ಕಥೆಯ ಪ್ರಕಾರ ಈ ಚಿತ್ರದಲ್ಲಿ ಅಪ್ಪು ಮತ್ತು ಶಿವಣ್ಣ ಅವರನ್ನು ಅಭಿಮಾನಿಗಳು ಪೊಲೀಸ್ ಗೆಟಪ್ ನಲ್ಲಿ ನೋಡಬಹುದಿತ್ತು. ಇದು ಆಕ್ಷನ್ ಸಿನಿಮಾವಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಕೆಲಸ ಶುರುವಾಗಿ ಅಭಿಮಾನಿಗಳು ಇಬ್ಬರು ರಾಜರಥರನ್ನು ಪೊಲೀಸ್ ಗೆಟಪ್ ನಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದಿತ್ತು. ಆದರೆ ವಿಧಿ ಬೇರೆ ಆಟವನ್ನೇ ಆಡಿತ್ತು. ಇದೀಗ ಶಿವಣ್ಣನ ಎದುರು ಟಗರು-2 ಸಿನಿಮಾದಲ್ಲಿ ಅಪ್ಪು ಮಾಡಬೇಕಾಗಿದ್ದ ಪಾತ್ರವನ್ನು ಯಾರು ಮಾಡುತ್ತಾರೆ ಎಂಬುದನ್ನು ಸಿನಿಮಾ ತಂಡ ಅಧಿಕೃತ ಮಾಹಿತಿ ನೀಡುವ ತನಕ ಕಾಯಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top