fbpx
ಸಮಾಚಾರ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಂಕಷ್ಟದಲ್ಲಿ ನಟ ಮೋಹನ್ ಲಾಲ್, ED ನೋಟಿಸ್

ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಅವರಿಗೆ ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೋಹನ್ ಲಾಲ್ ಹೆಸರು ತಳುಕು ಹಾಕಿಡೊಂಡಿದ್ದು ಕೊಚ್ಚಿಯ ಜಾರಿ ನಿರ್ದೇಶನಾಲಯ(ED)ನೋಟಿಸ್ ನೀಡಿದೆ. ಮೊಹನ್ ಲಾಲ್ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಜನರಿಗೆ 10 ಕೋಟಿ ರೂ. ವಂಚನೆಗೈದ ಆರೋಪದ ಮೇಲೆ ಕೇರಳ ಪೊಲೀಸರು ಮೋನ್ಸನ್ ನನ್ನು ಬಂಧಿಸಿದ್ದರು. ನಕಲಿ ಪುರಾತನ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಅವರನ್ನು ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ರಾಜ್ಯ ಪೊಲೀಸರು ಬಂಧಿಸಿದ್ದಾರೆ. ಕೇರಳ ಪೊಲೀಸರ ಪ್ರಕಾರ, ಕೇರಳದ ನಿವಾಸಿಯಾದ ಮಾವುಂಕಲ್ ಹಲವಾರು ವರ್ಷಗಳಿಂದ ಕಲಾಕೃತಿಗಳು ಮತ್ತು ಅವಶೇಷಗಳ ಸಂಗ್ರಹಕಾರನಂತೆ ನಟಿಸಿ ಜನರಿಗೆ 10 ಕೋಟಿ ರೂ. ವಂಚಿಸಿದ್ದರು ಎಂದು ತಿಳಿದು ಬಂದಿದೆ.

ಮೋಹನ್​ಲಾಲ್ ಹಾಗೂ ಮಾನ್ಸನ್ ನಡುವೆ ಗೆಳೆತನವಿತ್ತೇ ಎನ್ನುವ ಅನುಮಾನ ಇಡಿ ಅಧಿಕಾರಿಗಳಿಗೆ ಮೂಡಿದೆ. ಏಕೆಂದರೆ ಈ ಮೊದಲು ಮಾನ್ಸನ್​ ಮನೆಗೆ ಮೋಹನ್​ಲಾಲ್ ಅವರು ಒಮ್ಮೆ ಭೇಟಿ ನೀಡಿದ್ದರು. ಈ ಭೇಟಿ ಹಿಂದಿನ ಉದ್ದೇಶ ಗುಟ್ಟಾಗಿಯೇ ಉಳಿದಿದೆ. ಈ ಭೇಟಿ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಹೋಗಿದೆ ಎನ್ನಲಾಗುತ್ತಿದೆ. ವಿಚಾರಣೆ ವೇಳೆ ಮೋಹನ್​ಲಾಲ್ ಯಾವ ರೀತಿಯ ಉತ್ತರ ನೀಡಲಿದ್ದಾರೆ ಎಂಬುದು ಸದ್ಯದ ಕುತೂಹಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top