fbpx
ಸಮಾಚಾರ

16 ಮೇ : ಇಂದಿನ ಪಂಚಾಂಗ ಮತ್ತೆ ಭವಿಷ್ಯ

ಮೇ 16, 2022 ಸೋಮವಾರ
ವರ್ಷ : 1944, ಶೋಭಾಕೃತ
ತಿಂಗಳು : ವೈಶಾಖ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಪೂರ್ಣಿಮಾ : May 15 12:46 pm – May 16 09:44 am; Krishna Paksha ಪ್ರತಿಪತ್ : May 16 09:44 am – May 17 06:25 am
ನಕ್ಷತ್ರ : ವಿಶಾಖೆ: May 15 03:35 pm – May 16 01:18 pm; ಅನುರಾಧ: May 16 01:18 pm – May 17 10:46 am
ಯೋಗ : ವಾರಿಯ: May 15 09:49 am – May 16 06:17 am; ಪರಿಘ: May 16 06:17 am – May 17 02:31 am; ಶಿವ: May 17 02:31 am – May 17 10:37 pm
ಕರಣ : ಬಾವ: May 15 11:17 pm – May 16 09:44 am; ಬಾಲವ: May 16 09:44 am – May 16 08:06 pm; ಕುಲವ: May 16 08:06 pm – May 17 06:25 am

Time to be Avoided
ರಾಹುಕಾಲ : 7:32 AM to 9:06 AM
ಯಮಗಂಡ : 10:41 AM to 12:16 PM
ದುರ್ಮುಹುರ್ತ : 12:41 PM to 01:31 PM, 03:12 PM to 04:02 PM
ವಿಷ : 04:52 PM to 06:18 PM
ಗುಳಿಕ : 1:50 PM to 3:25 PM

Good Time to be Used
ಅಮೃತಕಾಲ : 01:28 AM to 02:54 AM
ಅಭಿಜಿತ್ : 11:50 AM to 12:41 PM

Other Data
ಸೂರ್ಯೋದಯ : 5:57 AM
ಸುರ್ಯಾಸ್ತಮಯ : 6:34 PM

 

 

 
 

ಮೇಷ (Mesha)

 

ನಿಮ್ಮ ನಡೆನುಡಿಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಜನರೊಡನೆ ಸಂಪರ್ಕಿಸುವ ಮತ್ತು ಸಂವಹನ ನಡೆಸುವ ಕ್ರಿಯೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ.

ವೃಷಭ (Vrushabh)


ನಿಮ್ಮ ಅನೇಕ ರೀತಿಯ ತಾಂತ್ರಿಕ ಪರಿಜ್ಞಾನವು ಪರಿಪಕ್ವವಾಗುತ್ತಿರುವ ಈ ಸಂದರ್ಭದಲ್ಲಿ ನೀವು ಅದನ್ನು ನಿಭಾಯಿಸಲು ಹಣದ ಅಡಚಣೆ ಆಗುವುದು. ನಿಮ್ಮ ಆಪ್ತ ಗೆಳೆಯರೆ ನಿಮಗೆ ಇಂದು ಸಹಾಯ ಮಾಡಲು ಹಿಂಜರಿಯುವರು.

ಮಿಥುನ (Mithuna)


ಒಂಟಿತನ ನಿಮ್ಮನ್ನು ಕಾಡುವುದು. ಒಂದು ರೀತಿಯ ಕೆಲಸ ಕಾರ್ಯಗಳಲ್ಲಿನ ಹಿನ್ನಡೆಯಿಂದಾಗಿ ಮನೆಯಿಂದ ಹೊರಗೆ ಹೋಗಲಾರದೆ ಗೃಹಬಂಧನಕ್ಕೆ ಒಳಪಟ್ಟಂತೆ ಆಗುವುದು. ನಿಮ್ಮ ಯೋಜನೆಗಳ ಬಗ್ಗೆ ಪುನರ್‌ ಪರಿಶೀಲಿಸುವುದು ಒಳ್ಳೆಯದು.

ಕರ್ಕ (Karka)


ವ್ಯಕ್ತಿಯ ಪೂರ್ವಾಪರ ವಿಚಾರ ತಿಳಿದುಕೊಳ್ಳದೆ ಹಣಕಾಸಿನ ಸಹಾಯ ಮಾಡದಿರಿ. ಕೊಟ್ಟ ಹಣ ನಿಮಗೆ ವಾಪಸ್ಸು ಬರದೇ ಹೋಗುವ ಸಾಧ್ಯತೆ ಇರುತ್ತದೆ. ಯಾವುದಕ್ಕೂ ಸಂಗಾತಿಯ ಸಲಹೆಯನ್ನು ಈ ವಿಷಯದಲ್ಲಿ ಕೇಳಿ ಪಡೆಯಿರಿ.

ಸಿಂಹ (Simha)


ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಆಗಬೇಕೆಂಬ ದಿಶೆಯಲ್ಲಿ ನೀವು ಹಲವು ಷೇರು ವ್ಯವಹಾರಗಳಲ್ಲಿ ಹಣ ಹೂಡುವಿರಿ. ನಿಮ್ಮ ದೂರದೃಷ್ಟಿಯಂತೆ ಖರೀದಿಸಿದ ಷೇರುಗಳ ಮೌಲ್ಯ ಹೆಚ್ಚಾಗುವ ಸಂಭವವಿರುತ್ತದೆ.

ಕನ್ಯಾರಾಶಿ (Kanya)


ಪದೇ ಪದೇ ಬರುವ ನಿಮ್ಮ ಮುಂಗೋಪದಿಂದಾಗಿ ನಿಮ್ಮ ಸಂಗಾತಿಯ ಜೊತೆಯಲ್ಲಿ ಘರ್ಷಣೆ ಉಂಟಾಗುವುದು. ನಂತರ ಅದು ಮನಃಸ್ತಾಪಕ್ಕೆ ತಿರುಗುವುದು. ಸಿಟ್ಟು ಮನುಜನ ಮೊದಲ ಶತ್ರು. ಅದರಿಂದ ಅನೇಕ ಅನಾಹುತಗಳು ಆಗದಂತೆ ಎಚ್ಚರ ವಹಿಸಿ.

ತುಲಾ (Tula)


ಉದ್ಯೋಗವನ್ನು ಉಳಿಸಿಕೊಳ್ಳುವ ಸಲುವಾಗಿ ಅನೇಕ ರೀತಿಯ ಕಸರತ್ತುಗಳನ್ನು ನಡೆಸುವಿರಿ. ಇದರಿಂದ ಕೊಂಚಮಟ್ಟಿನ ಪ್ರಯೋಜನ ಕಂಡುಬರುವುದು. ಇನ್ನು ಸ್ವಲ್ಪ ಕಾಲ ಇದ್ದ ಸ್ಥಳದಲ್ಲಿಯೇ ಕೆಲಸವನ್ನು ಮುಂದುವರೆಸುವಿರಿ.

ವೃಶ್ಚಿಕ (Vrushchika)


ನಿಮ್ಮದೇ ಆದ ಯೋಜನೆಗಳಿಗೆ ಅರ್ಥಪೂರ್ಣ ಸಿದ್ಧಿ ಇದೆಯಾದರೂ ಹಿರಿಯರ ಸಲಹೆಗಳನ್ನು ಪಾಲಿಸಿದಲ್ಲಿ ಇನ್ನು ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ಎಲ್ಲರಿಗೂ ಒಳ್ಳೆಯವರಾಗುವುದು ಅಷ್ಟು ಸುಲಭವಲ್ಲ, ನಿಮ್ಮ ಅನುಭವದ ಹಿನ್ನೆಲೆಯಲ್ಲಿ ಬಂದ ಜನರಿಗೆ ಸಾಂತ್ವನ ನೀಡುತ್ತಾ ಬಂದಿರುವ ನೀವು ನಿಮ್ಮನ್ನು ಪುನರೂಪಿಸಿಕೊಳ್ಳುತ್ತ ಬರುವಿರಿ.

ಧನು ರಾಶಿ (Dhanu)


ದೂರದ ಸಂಬಂಧಿಗಳಾಗಲಿ, ಹಳೆಯ ಸ್ನೇಹಿತರಾಗಲಿ ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇರುವುದು. ಅವರಿಗೆ ಅಗತ್ಯವಾದ ಸಲಹೆ-ಸಹಕಾರಗಳನ್ನು ನೀಡಿ ಸಂತೋಷ ಪಡಿಸುವಿರಿ. ಭಗವಂತನ ನಾಮಸ್ಮರಣೆಯೊಂದಿಗೆ ಕಾರ್ಯವನ್ನು ಆರಂಭಿಸಿ ನಿಮ್ಮ ಸದೀಚ್ಛೆಯಂತೆ ಭಗವಂತನು ಕರುಣೆ ತೋರುವರು.

ಮಕರ (Makara)


ಬಹುದಿನಗಳ ಕನಸು ಭಾವನಾತ್ಮಕ ಸಂಬಂಧದಿಂದ ನನಸಾಗುವುದು. ಅನಿರೀಕ್ಷಿತವಾಗಿ ಹೊಸದೇ ಆದ ಆಲೋಚನೆಯು ನಿಮ್ಮನ್ನು ಹೊಸ ಕಾರ್ಯಕ್ಕೆ ಪ್ರೇರೇಪಿಸುವುದು. ಹಣಕಾಸು ಕೂಡಾ ಸೂಕ್ತ ಸಮಯದಲ್ಲಿ ದೊರೆಯುವುದು, ಅನಿರೀಕ್ಷಿತ ಬೆಳವಣಿಗೆಯೊಂದು ನಿಮ್ಮ ದಿನದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ.

ಕುಂಭರಾಶಿ (Kumbha)


ನಿಮ್ಮ ಯೋಜನೆಗಳು ಯಾವಾಗಲೂ ವಿಶೇಷತೆಯಿಂದಲೇ ಕೂಡಿರುತ್ತವೆ. ಹಾಗಾಗಿ ನೀವು ಬೇರೆಯವರಿಗಿಂತ ಬೇಗನೆ ಜಯಶಾಲಿಗಳು ಆಗುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ, ಕೆಲಕಾಲ ನಿಮ್ಮ ಮನಸ್ಸಿನ ಆಲೋಚನೆಗಳನ್ನು ಹೊರಗೆಡಹದಿರಿ.

ಮೀನರಾಶಿ (Meena)


ಲವು ಬಿಕ್ಕಟ್ಟುಗಳನ್ನು ಎದುರಿಸುವಿರಿ. ಇದರಿಂದ ಮಾನಸಿಕವಾಗಿ ಬಳಲುವಿರಿ. ದುರ್ಗಾ ಸ್ತುತಿಯಿಂದ ನಿಮಗೆ ಒದಗುವ ಬಿಕ್ಕಟ್ಟುಗಳಿಂದ ದೂರ ಬರುವಿರಿ. ಮಕ್ಕಳು ನಿಮಗೆ ಸಂತಸವನ್ನುಂಟು ಮಾಡುವರು, ನಂಬಿಸಿ ಕೈ ಕೊಡುವಂತಹ ಜನರು ಬಣ್ಣದ ಮಾತುಗಳಿಂದ ಕನಸು ಬಿತ್ತಲಿದ್ದಾರೆ. ಅದರ ಪ್ರಭಾವಕ್ಕೆ ಒಳಗಾಗಿ ನೀವು ದುಡಿದ ಹಣವನ್ನು ಖರ್ಚು ಮಾಡಿ ಮೋಸಕ್ಕೆ ಒಳಗಾಗುವಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top