fbpx
ಸಮಾಚಾರ

ಆಂಡ್ರೂ ಸೈಮಂಡ್ಸ್ ಬಗ್ಗೆ ತಿಳಿದೇ ಇರುವ ಕೆಲವು ಅಚ್ಚರಿಯ ಸಂಗತಿಗಳು!

ಶನಿವಾರ ನಡೆದ ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಆಂಡ್ರೂ ಸೈಮಂಡ್ಸ್ ಮೃತಪಟ್ಟಿದ್ದರು. ಇವರ ನಿಧನಕ್ಕೆ ಅಭಿಮಾನಿಗಳಿಂದ ಇಡಿದ ಇಡೀ ಕ್ರಿಕೆಟ್ ಜಗತ್ತಿನ ದಿಗ್ಗಜರು ಸಂತಾಪ ಸೂಚಿಸಿದರು. ನಮಗೆಲ್ಲರಿಗೂ ಸೈಮಂಡ್ಸ್ ಕ್ರಿಕೆಟ್ ಆಟಗಾರ ಎಂದು ಗೊತ್ತು. ಇದಲ್ಲದೆ ಅವರ ಬಗ್ಗೆ ಕೆಲವು ಇಂಟೆರೆಸ್ಟಿಂಗ್ ವಿಚಾರಗಳು ಸಹ ಇವೆ.

ಸೈಮಂಡ್ಸ್ ಹುಟ್ಟಿದ್ದು ವೆಸ್ಟ್ ಇಂಡೀಸ್ ನಲ್ಲಿ. ಆದರೆ ಇಂಗ್ಲೆಂಡ್ ದಂಪತಿಗಳು ಅವರನ್ನು ದತ್ತು ಪಡೆದ ಕಾರಣ ಅವರಿಗೆ ಬ್ರಿಟಿಷ್ ಪೌರತ್ವವನ್ನು ನೀಡಲಾಯಿತು. ಯುವಕರಾಗಿದ್ದಾಗ ಅವರು ಆಸ್ಟ್ರೇಲಿಯಾಗೆ ತೆರಳಿದ ಕಾರಣ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡು ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ.

ಕ್ರಿಕೆಟ್ ಆಡಲು ಸೈಮಂಡ್ಸ್ ಆಸ್ಟ್ರೇಲಿಯಾ ಬದಲು ಇಂಗ್ಲೆಂಡ್ ತಂಡವನ್ನು ಆಯ್ಕೆ ಮಾಡಿಕೊಂಡಿದ್ದರು. 1995 ರಲ್ಲಿ ಇಂಗ್ಲೆಂಡ್‌ನ ಎ ತಂಡದಲ್ಲಿ ಸೈಮಂಡ್ಸ್ ಅವರಿಗೆ ಸ್ಥಾನ ನೀಡಲಾಗಿತ್ತು ಆದರೆ ಅವರು ಹೇಳಿಕೊಳ್ಳುವಂತಹ ಪ್ರದರ್ಶನ ಏನು ತೋರಿರಲಿಲ್ಲ. ನಂತರ ಅವರು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ತಂಡಕ್ಕೆ ಆಯ್ಕೆಯಾದರು. ಇಂಗ್ಲೆಂಡ್ ವಿರುದ್ಧ ಅವರು ಸಿಡಿಸಿದ 108 ರನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು ಗಳಿಸಿದ ಮೊದಲ ಶತಕವಾಗಿತ್ತು.

ಸೈಮಂಡ್ಸ್ ಆಸ್ಟ್ರೇಲಿಯಾ ತಂಡವನ್ನು ಸೇರಿದ್ದಾಗ ಅವರ ವಯಸ್ಸು 23 ಆಗಿತ್ತು. ಸುಮಾರು 5 ವರ್ಷಗಳ ಕಾಲ ಆಸ್ಟ್ರಿಯಾ ತಂಡದ ಪರ ಆಡಿದರು. ಆದರೆ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾದ ಕಾರಣ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಕ್ರಿಕೆಟ್ ತಮ್ಮ ವೃತಿ ಬದುಕಿಗೆ ಹೆಚ್ಚಿನ ಸಹಾಯ ಮಾಡೋದಿಲ್ಲ ಎಂದು ಗೊತ್ತಾಗಿ ಸೈಮಂಡ್ಸ್ 2003 ರಲ್ಲಿ ರಬ್ಬಿ ಸೇರಿಕೊಂಡರು. ಸ್ಬೇನ್ ಬ್ರಾಂಕೋಸ್ ರಗ್ಬಿ ತಂಡದೊಂದಿಗೆ ತರಬೇತಿಯನ್ನೂ ಸೈಮಂಡ್ಸ್ ಪ್ರಾರಂಭಿಸಿದ್ದರು. ಆದರೆ ಅಚ್ಚರಿಯ ರೀತಿಯಲ್ಲಿ 2003 ವಿಶ್ವಕಪ್​ನಲ್ಲಿ ಆಯ್ಕೆ ಆಗಿ ಅದ್ಬುತ ಪ್ರದರ್ಶನ ನೀಡಿದರು. ಅಲ್ಲಿಂದ ಅವರು ಆಸ್ಟ್ರೇಲಿಯಾ ತಂಡವನ್ನು ಸತತವಾಗಿ ಪ್ರತಿನಿದಿಸಿದರು.

ಇದೆಲ್ಲದರ ನಡುವೆ ಅವರಿಗೆ ಮೀನುಗಾರಿಕೆಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಮ್ಯಾಥ್ಯೂ ಹೇಡನ್ ಜತೆಗೂ ಮೀನು ಹಿಡಿಯಲು ಸೈಮಂಡ್ಸ್ ಒಮ್ಮೆ​ ತೆರಳಿದ್ದರು. ಆಸ್ಟ್ರೇಲಿಯಾ ಆಟಗಾರರು ಸೈಮಂಡ್ಸ್​​ರನ್ನು ಪ್ರೀತಿಯಿಂದ ರಾಯ್ ಎಂದು ಕರೆಯುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top