fbpx
ಸಮಾಚಾರ

ಸೀಮಂತ ಸಂಭ್ರಮದಲ್ಲಿ ನಟಿ ಪ್ರಣೀತಾ: ಇಲ್ಲಿವೆ ಸುಂದರ ಕ್ಷಣದ ಫೋಟೋಗಳು

ಬಹುಬಾಷಾ ನಾಯಕ ನಟಿ ಪ್ರಣೀತಾ ಸುಭಾಷ್ ಸದ್ಯ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಪ್ರಣೀತಾ ಇದೀಗ ಹಿಂದೂ ಸಂಪ್ರದಾಯದಂತೆ ಸೀಮಂತವನ್ನು ಆಚರಿಸಿದ್ದಾರೆ. ಕುಟುಂಬಸ್ಥರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಸಮಾರಂಭ ನಡೆಯಿತು. ಹಳದಿ ಪಚ್ಚೆ ರೇಷ್ಮೆ ಸೀರೆಯಲ್ಲಿ ಪ್ರಣೀತಾ ಕಂಗೊಳಿಸಿದ್ದಾರೆ.

 

 

ಸೀಮಂತ ಫೋಟೋಗಳನ್ನು ಪ್ರಣಿತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ನಟಿಯ ಸೀಮಂತ ಫೋಟೋಗಳ ಕೆಳಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

 

 

ಅಂದಹಾಗೇ, ಪ್ರಣೀತಾ ಅವರು 2021ರ ಮೇ 31ರಂದು ಬೆಂಗಳೂರಿನ ಉದ್ಯಮಿ ನಿತಿನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೊರೊನಾ ತೀವ್ರತೆ ಕಾರಣದಿಂದ ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈ ಹಿಂದೆ ಪ್ರಣೀತಾ ತಮ್ಮ ಮದುವೆ ವಿಷಯವನ್ನು ತಡವಾಗಿ ತಿಳಿಸಿದ್ದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.

 

 

ಈ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ ನಟಿ ಪ್ರಣೀತಾ, ” ಕೊರೊನಾ ನಿಯಮ ಪಾಲನೆ ಮಾಡಿ ಮದುವೆಯಾದೆವು. ಮದುವೆಯ ಹಿಂದಿನ ದಿನದವರೆಗೂ ಮದುವೆ ನಡೆಯುವ ಬಗ್ಗೆ ನಮಗೇ ಖಾತ್ರಿ ಇರಲಿಲ್ಲ. ಹೀಗಾಗಿ ಎಲ್ಲರನ್ನು ಮದುವೆಗೆ ಕರೆಯಲು ಆಗದ್ದಕ್ಕೆ ಕ್ಷಮೆ ಕೇಳುತ್ತೇನೆ, ಇನ್ನು ಹೆಚ್ಚಾಗಿ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಲು ಇಷ್ಟವಿಲ್ಲ” ಎಂದು ಹೇಳಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top