fbpx
ಸಮಾಚಾರ

ಸೈಮಂಡ್ಸ್ ವೃತ್ತಿ ಜೀವನದಲ್ಲಿ ಸುತ್ತ ಸುತ್ತುವರಿದ ವಿವಾದಗಳು ಇವು?

ಶನಿವಾರ ನಡೆದ ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಆಂಡ್ರೂ ಸೈಮಂಡ್ಸ್ ಮೃತಪಟ್ಟಿದ್ದರು. ಇವರ ನಿಧನಕ್ಕೆ ಅಭಿಮಾನಿಗಳಿಂದ ಇಡಿದ ಇಡೀ ಕ್ರಿಕೆಟ್ ಜಗತ್ತಿನ ದಿಗ್ಗಜರು ಸಂತಾಪ ಸೂಚಿಸಿದರು. ಇವರು ತಮ್ಮ ವೃತ್ತಿ ಬದುಕಿನಲ್ಲಿ ಕೆಲವು ವಿವಾದಗಳನ್ನು ಸಹ ತಮ್ಮ ಮೈ ಮೇಲೆ ಎಳೆದುಕೊಂಡಿದ್ದರು.

ಆಂಡ್ರೂ ಸೈಮಂಡ್ಸ್ ಎಂದಾಕ್ಷಣ ಭಾರತೀಯರಿಗೆ ನೆನಪಿಗೆ ಬರೋದು “ಮಂಕಿ ಗೇಟ್” ಪ್ರಕರಣ. ಈ ಘಟನೆ ನಡೆದಿದ್ದು 2008 ರ ಸಿಡ್ನಿ ಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದಲ್ಲಿ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತ ತಂಡವನ್ನು ತೆಗಳಲು ಶುರುಮಾಡಿದರು. ಇದು ಯಾವಾಗ ವಿಕೋಪಕ್ಕೆ ಏರಿತ್ತೋ ಅವಾಗ ಹರ್ಭಜನ್ ಸಿಂಗ್ ಮದ್ಯ ಪ್ರವೇಶಿಸಿದರು. ನಂತ್ರ ಹರ್ಭಜನ್ ಸಿಂಗ್ ಮತ್ತು ಸೈಮಂಡ್ಸ್ ನಡುವೆ ಜಗಳ ತಾರಕಕ್ಕೇರಿತ್ತು. ಇದರಿಂದ ಕೋಪ ಗೊಂಡ ಭಜ್ಜಿ ಸೈಮಂಡ್ಸ್ ಅವರನ್ನು “ಮಂಕಿ” ಎಂದು ನಿಂದಿಸಿದರು. ಇದು ಜನಾಂಗೀಯ ನಿಂದನೆ ಎಂದು ರಿಕಿ ಪಾಂಟಿಂಗ್ ದೂರು ನೀಡಿದ್ದರು. ಇದು ಬಹಳ ದೊಡ್ಡ ವಿವಾದಕ್ಕೆ ತಿರುಗಿತ್ತು.

ಮತ್ತೊಂದು ಪ್ರಕರಣ ಎಂದರೆ ಸೈಮಂಡ್ಸ್ ಮದ್ಯಪ್ರಿಯರು. ಇವರಿಗೆ ದೊಡ್ಡ ಸ್ನೇಹ ಬಳಗವೇ ಇದೆ. ಇವರನ್ನು ಸ್ನೇಹಿತರು ರಾಯ್ ಎಂದು ಕರೆಯುತ್ತಾರೆ. ಮದ್ಯಪ್ರಿಯರಾದ ಇವರು 2005ರಲ್ಲಿ ಕಾರ್ಡಿಫ್‌ನಲ್ಲಿ ತ್ರಿಕೋನ ಸರಣಿ ನಡೆದ ಸಂದರ್ಭದಲ್ಲಿ ಬಾಂಗ್ಲಾ ವಿರುದ್ಧ ನಡೆಯುವ ಪಂದ್ಯದ ಹಿಂದಿನ ದಿನ ಮದ್ಯ ಸೇವಿಸಿದ್ದರು. ಇದೇ ಕಾರಣಕ್ಕಾಗಿ ಇವರನ್ನು ಅಂದಿನ ಪಂದ್ಯದಲ್ಲಿ ಅಮಾನತ್ತು ಮಾಡಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top