fbpx
ಸಮಾಚಾರ

ಫ್ಯಾಟ್ ಸರ್ಜರಿಯಿಂದ ಮೃತಪಟ್ಟ ಕಿರುತರೆ ನಟಿ ಚೇತನಾ ರಾಜ್- ಸಾವಿನ ರಹಸ್ಯ ಬಿಚ್ಚಿಟ್ಟ ಕುಟುಂಬ !

ಖ್ಯಾತ ಕಿರುತಾರೆ ನಟಿ ಚೇತನಾ ರಾಜ್ ನೆನ್ನೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಸೊಂಟ ದಪ್ಪಗಿದೆ ಎಂಬ ಕಾರಣಕ್ಕೆ ಫ್ಯಾಟ್ ಸರ್ಜರಿ ಮಾಡಿಸಿಕೊಂಡ ನಟಿ ವೈದ್ಯರ ನಿರ್ಲಕ್ಸದಿಂದ ಸಾವನ್ನಪ್ಪಿದ್ದರು. ಇದೀಗ ಈಕೆಯ ಕುಟುಂಬ ಈ ಘಟನೆಯ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಕುಟುಂಬದ ಪ್ರಕಾರ ಚೇತನಾ ದಪ್ಪಗಿರಲಿಲ್ಲ. ಆಕೆಯ ತಲೆ ಕೆಡಿಸಿದವರು ಯಾರು ಎಂದು ನಮಗೆ ಗೊತ್ತಿಲ್ಲ. ಆದರೆ ಫ್ಯಾಟ್ ಸರ್ಜರಿ ಮಾಡಿಸಲು ಹೋದ ಮಗಳು ವಾಪಸ್ ಬರಲೇ ಇಲ್ಲ ಎಂದು ಚೇತನ ಸ್ನೇಹಿತರು ಆತಂಕ ವ್ಯಕ್ತಪಡಿಸಿದರು.

ಇನ್ನು ಇದರ ಕುರಿತು ಮೊದಲ ಬಾರಿಗೆ ಮಾಧ್ಯಮದ ಜೊತೆಗೆ ಮಾತನಾಡಿದ ಚೇತನ ತಂದೆ “ನಮ್ಮ ಮಗಳು ಕಾಸ್ಮೆಟಿಕ್ ಸುರ್ಜರಿಗೆ ಒಳಗಾಗುತ್ತಿದ್ದಾರೆ ಎಂದು ನಮಗೆ ತಿಳಿದಿರಲಿಲ್ಲ. ಈ ವಿಷವನ್ನು ನಮ್ಮ ಮಗಳಾಗಲಿ ಅಥವಾ ಆಸ್ಪತ್ರೆಯವರಾಗಲಿ ನಮಗೆ ತಿಳಿಸಿರಲಿಲ್ಲ.ಯಾರೋ ನಮ್ಮ ಮಗಳಿಗೆ ನೀವು ದಪ್ಪಗಿದ್ದೀರಾ ಎಂದು ಹೇಳಿದ್ದಾರೆ. ಅದಕ್ಕಾಗಿ ಅವಳು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳಲು ಆಸ್ಪತ್ರೆಗೆ ತೆರಳಿದ್ದಾಳೆ. ನನಗೆ ಗೊತ್ತಾಗಿರೋ ಪ್ರಕಾರ, ಆಸ್ಪತ್ರೆಯಲ್ಲಿ ಕೇವಲ ಕೊಬ್ಬು ತಗೆಯುತ್ತೇವೆ ಎಂದು ಹೇಳಿದ್ದರಂತೆ. ಆಮೇಲೆ ಏನಾಯಿತೋ ಗೊತ್ತಿಲ್ಲ. ಅವಳಿಗೆ ಉಸಿರಾಟದ ತೊಂದರೆ ಆಗಿ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ’ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top