fbpx
ಸಮಾಚಾರ

ನಾಯಿಯ ಕೆಚ್ಚಲಿನ ಹಾಲನ್ನು ಕುಡಿದ ಕರು! ವೈರಲ್

ಜಗತ್ತಿನಲ್ಲಿ ಅದೆಷ್ಟೂ ಚಿತ್ರ ವಿಚಿತ್ರವಾದ ಘಟನೆಗಳು ನಡೆಯುತ್ತಿರುತ್ತವೆ. ಕೆಲವು ಘಟನೆಗಳನ್ನು ನೋಡಿದರೆ ಒಂದು ಕ್ಷಣ ಆಶ್ಚರ್ಯವಾಗುತ್ತದೆ. ಇನ್ನು ಕೆಲವು ಘಟನೆಗಳನ್ನು ನೋಡಿದರೆ ಇದು ನಡೆಯಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಅಂತದ್ದೇ ಒಂದು ಘಟನೆ ತುಮಕೂರಿನ ಕುಂದೂರಿನಲ್ಲಿ ನಡೆದಿದೆ.

 

 

ಜಗತ್ತಿನಲ್ಲಿ ತಾಯಿ ಪ್ರೀತಿಗೆ ಬೆಲೆ ಕಟ್ಟಲಾಗದು. ಆದರೆ ನಾಯಿ ಒಂದು ಕರುವಿಗೆ ತನ್ನ ಕೆಚ್ಚಲಿನ ಹಾಲನ್ನು ಕುಡಿಸುತ್ತಿದೆ ಎಂದರೆ ನಂಬಲು ಅಸಾಧ್ಯ ಆದರೆ ಇದು ಸತ್ಯ. ತುಮಕೂರಿನ ಕುಂದೂರಿನಲ್ಲಿ ಕರುವೊಂದು ನಾಯಿಯ ಕೆಚ್ಚಲಿಗೆ ಬಾಯಿ ಇಟ್ಟು ಹಾಲು ಕುಡಿತಿರುವುದು ನೋಡಿ ಗ್ರಾಮಸ್ಥರೇ ಒಂದು ಕ್ಷಣ ಆಶ್ಚರ್ಯಚಕಿತರಾದರು.

ಈ ನಾಯಿ ಮತ್ತು ಕರು ಕುಂದೂರಿನ ಬಸವರಾಜ-ಗೀತಾ ದಂಪತಿಯ ಸಾಕು ಪ್ರಾಣಿಗಳು. ಕರು ನಾಯಿಯ ಕೆಚ್ಚಲಿಗೆ ಹಾಲು ಕುಡಿಯಲು ಬಾಯಿಡುತ್ತಿದ್ದಂತೆ ನಾಯಿ ತಾಯಿಯ ಮಮತೆಯಿಂದ ಅದನ್ನು ಸವರುತ್ತಿತ್ತು. ಇದನ್ನು ವೀಕ್ಷಿಸಿದ ಗ್ರಾಮಸ್ಥರು ಇದರ ಪ್ರೀತಿ ನೋಡಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top