ಭಾರತೀಯ ಚಿತ್ರರಂಗದಲ್ಲಿ ಹತ್ತಾರು ಹೊಸ ದಾಖಲೆ ನಿರ್ಮಾಣ ಮಾಡಿರುವ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಪ್ರೇಕ್ಷಕರಿಗೆ ಇದೀಗ ಮತ್ತೊಂದು ಗುಡ್ನ್ಯೂಸ್ ನೀಡಿದೆ. ಈ ಚಿತ್ರವನ್ನ ಅಮೆಜಾನ್ ಪ್ರೈಮ್ನಲ್ಲೂ ವೀಕ್ಷಣೆ ಮಾಡಲು ಅವಕಾಶ ಮಾಡಿ ಕೊಡಲಾಗಿದೆ. ಈ ಸಿನಿಮಾ ವೀಕ್ಷಣೆಗೆ ಒಂದು ಷರತ್ತು ಇದೆ. ಅದೇನೆಂದರೆ ನೀವು ಈ ಚಿತ್ರವನ್ನು ರೆಂಟ್ ಪಡೆದು ಈ ವೀಕ್ಷಿಸಬಹುದು.
thrill ×2 | craziness ×2 | K.G.F ×2 💥#EarlyAccessOnPrime, rent now pic.twitter.com/FDtYdtro0l
— amazon prime video IN (@PrimeVideoIN) May 16, 2022
‘ಕೆಜಿಎಫ್ 2’ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಬಿಡುಗಡೆ ಆಗಿತ್ತು. ಈಗ ಒಟಿಟಿಯಲ್ಲೂ ಐದೂ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾವನ್ನು ನೀವು ರೆಂಟ್ ಪಡೆಯಬಹುದು. ಇದಕ್ಕೆ 199 ರೂಪಾಯಿ ಪಾವತಿಸಬೇಕು. ಹಾಗಿದ್ದರೆ ಮಾತ್ರ ನೀವು ‘ಕೆಜಿಎಫ್ 2’ ವೀಕ್ಷಿಸಬಹುದು.
ಅಮೆಜಾನ್ ಪ್ರೈಮ್ನಲ್ಲಿ ನೀವು ಮೆಂಬರ್ಶಿಪ್ ಹೊಂದಿದ್ದರೂ ಹೆಚ್ಚುವರಿ 199 ರೂ. ಹಣವನ್ನು ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಬಾಡಿಗೆಗೆ ಪಡೆಯಬೇಕು. ಬಾಡಿಗೆಗೆ ಪಡದು ಸಿನಿಮಾ ವೀಕ್ಷಿಸಲು ಆರಂಭಿಸಿದ ಸಮಯದಿಂದ ಒಟ್ಟು 48 ಗಂಟೆಗಳವರೆಗೆ ಮಾತ್ರ ನೀವಿ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಅಮೆಜಾನ್ ಪ್ರೈಮ್ನಲ್ಲಿ ವೀಕ್ಷಿಸಬಹುದು.. ಒಂದೊಮ್ಮೆ ನೀವು ಸಿನಿಮಾ ರೆಂಟ್ಗೆ ಪಡೆದು ವೀಕ್ಷಿಸದೆ ಇದ್ದರೆ ಹಣ ಪಾವತಿಸಿದ ಸಮಯದಿಂದ 30 ದಿನಗಳ ಕಾಲ ಇದರ ವ್ಯಾಲಿಡಿಟಿ ಇರಲಿದೆ. ಈ ಅವಧಿಯಲ್ಲಿ ಯಾವಾಗ ಬೇಕಾದರೂ ಸಿನಿಮಾ ವೀಕ್ಷಿಸಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
