fbpx
ಸಮಾಚಾರ

RCB ಮುಂದೆ ಮುಳ್ಳಿನ ಹಾದಿ: ಪ್ಲೇ ಆಫ್ ತಲುಪಲು ಇರುವ ಲೆಕ್ಕಾಚಾರಗಳು ಇವು!

ಐಪಿಎಲ್ 2022 ಇದೀಗ ರೋಚಕತೆಯಿಂದ ಕೂಡಿದೆ. ಪ್ಲೇ ಆಫ್ ತಲುಪಲು ತಂಡಗಳು ಸೆಣೆಸಾಟ ನಡೆಸುತ್ತಿವೆ. ಈಗಾಗಲೇ ಗುಜರಾತ್ ತಂಡ ಪ್ಲೇಆಫ್ ತಲುಪಿದೆ. ಇನ್ನು ಉಳಿದ 3 ಸ್ಥಾನಕ್ಕಾಗಿ 7 ತಂಡಗಳು ಸೆಣೆಸಾಡುತಿದ್ದು, ಮುಂದಿನ ಎಲ್ಲ ಪಂದ್ಯಗಳು ಬಹಳ ರೋಚಕತೆಯಿಂದ ಕೂಡಿರುತ್ತದೆ. ಇದೆಲ್ಲದರ ಮದ್ಯೆ RCB ಪ್ಲೇಆಫ್ ತಲುಪಲು ಇರುಕ ಲೆಕ್ಕಾಚಾರ ಏನೆಂಬುದು ಬಹಳ ಚರ್ಚೆಯಾಗುತ್ತಿದೆ. ಅದರ ಕುರಿತು ಒಂದು ಲೆಕ್ಕಾಚಾರ ಇಲ್ಲಿದೆ.

ಈಗಾಗಲೇ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಮುಂಬೈ ಮತ್ತು ಚೆನ್ನೈ ಪ್ಲೇಆಫ್ ರೇಸ್ ನಿಂದ ಹೊರಗುಳಿದಿದ್ದಾರೆ. ಉಳಿದಂತೆ ಲಕ್ನೋ ಮತ್ತು ರಾಜಸ್ಥಾನ್ ಪ್ಲೇ ಆಫ್ ತಲುಪೋದು ಬಹುತೇಕ ಖಚಿತವಾಗಿದೆ. ಹೀಗಾಗಿ ಇನ್ನು ಉಳಿದಿರುವ ಒಂದು ಸ್ಥಾನಕ್ಕಾಗಿ ಹೈದರಾಬಾದ್ ಸನ್‌ರೈಸರ್ಸ್ (10 ಅಂಕ), ಪಂಜಾಬ್ ಕಿಂಗ್ಸ್ (12 ಅಂಕ), ಕೋಲ್ಕತ್ತಾ ನೈಟ್ ರೈಡರ್ಸ್ (12 ಅಂಕ), ಡೆಲ್ಲಿ ಕ್ಯಾಪಿಟಲ್ಸ್ (12 ಅಂಕ) ಮತ್ತು RCB (14 ಅಂಕ) ತಂಡಗಳು ಸೆಣಸಾಡುತ್ತಿವೆ.

ಸನ್‌ರೈಸರ್ಸ್ ಹೈದರಾಬಾದ್:
ಆಡಿರುವ 12 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 10 ಅಂಕ ಗಳಿಸಿರುವ ಹೈದರಾಬಾದ್ ತಂಡ -270 ರನ್ ರೇಟ್ ಹೊಂದಿದೆ. ಹೀಗಾಗಿ ಚೆನ್ನೈ ವಿರುದ್ಧ ನಡೆಯುವ ಪಂದ್ಯದಲ್ಲಿ ಸೋಲಬೇಕು ಮತ್ತು ಭಾನುವಾರ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಗೆಲ್ಲಬೇಕು. ಆಗ ಹೈದರಾಬಾದ್ ತಂಡದ ಒಟ್ಟು ಅಂಕ 12 ಆಗಿರುತ್ತೆ ಇದು ಪ್ರಸ್ತುತ RCB ಕ್ಕಿಂತ ಕಡಿಮೆ.

ಪಂಜಾಬ್ ಕಿಂಗ್ಸ್:
13 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕ ಗಳಿಸಿರುವ ಪಂಜಾಬ್ ಕಿಂಗ್ಸ್ -0.043 ನೆಟ್ ರನ್ ರೇಟ್ ಹೊಂದಿದೆ. ಡೆಲ್ಲಿ ವಿರುದ್ಧ ಸೋತ ಕಾರಣ ಇದು ಹೈದೆರಾಬಾದ್ ವಿರುದ್ಧ ಗೆದ್ದರೆ ಇದರ ಒಟ್ಟು ಅಂಕ 14 ಆಗುತ್ತದೆ. ಒಂದು ವೇಳೆ ಹೈದೆರಾಬಾದ್ ಎದುರು ಸೋತರೆ ಟೂರ್ನಿ ಇಂದ ಹೊರಬೀಳುತ್ತದೆ. ಆಗ RCB ಸಲೀಸಾಗಿ ಪ್ಲೇ ಆಫ್ ತಲುಪಬಹುದು.

ಕೋಲ್ಕತ್ತಾ ನೈಟ್ ರೈಡರ್ಸ್:
13 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕ ಗಳಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ +160 ನೆಟ್ ರನ್ ರೇಟ್ ಹೊಂದಿದೆ. ತನ್ನ ಕೊನೆಯ ಪಂದ್ಯವನ್ನು ಬುಧವಾರ ಲಕ್ನೋ ಸೂಪರ್ ಜೈಂಟ್ಸ್ ಎದುರು ಆಡಲಿದೆ. ಒಂದು ವೇಳೆ ಆ ಪಂದ್ಯ ಕೋಲ್ಕತ್ತಾ ಸೋತರೆ ನೇರವಾಗಿ ಮನೆಗೆ ಹೋಗಬೇಕಾಗುತ್ತದೆ.

ಡೆಲ್ಲಿ ಕ್ಯಾಪಿಟಲ್ಸ್:
13 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕ ಗಳಿಸಿರುವ ಉತ್ತಮ ಎನ್ನಬಹುದಾದ +0.255 ನೆಟ್ ರನ್‌ರೇಟ್ ಹೊಂದಿದೆ. ಶನಿವಾರ ಮುಂಬೈ ವಿರುದ್ಧ ನಡೆಯುವ ಪಂದ್ಯದಲ್ಲಿ ಡೆಲ್ಲಿ ಸೋತರೆ ಮಾತ್ರ RCB ಪ್ಲೇಆಫ್ ತಲುಪುತ್ತದೆ. ಒಂದು ವೇಳೆ ಡೆಲ್ಲಿ ಮುಂಬೈ ವಿರುದ್ಧ ಗೆದ್ದರೆ ಉತ್ತಮ ರನ್ ರೇಟ್ ಸಹಾಯದಿಂದ ನೇರವಾಗಿ ಪ್ಲೇ ಆಫ್ ತಲುಪುತ್ತದೆ. ಹೀಗಾಗಿ RCB ಟೂರ್ನಿಯಿಂದ ಹೊರಗುಳಿಬೇಕಾಗುತ್ತದೆ. ಹಾಗಾಗಿ ಮುಂದಿನ ಪಂದ್ಯದಲ್ಲಿ ಡೆಲ್ಲಿ ಸೋಲಬೇಕೆಗಿರುವುದು ಅನಿವಾರ್ಯ.

ಇಷ್ಟೆಲ್ಲಾ ಲೆಕ್ಕಾಚಾರಗಳ ಮದ್ಯೆ RCB ತನ್ನ ಮುಂದಿನ ಪಂದ್ಯವನ್ನು ಈಗಾಗಲೇ ಪ್ಲೇಆಫ್ ತಲುಪಿರುವ ಗುಜರಾತ್ ತಂಡದ ವಿರುದ್ಧ ಗುರುವಾರ ಆಡಲಿದೆ. ಅಂದಿನ ಪಂದ್ಯದಲ್ಲಿ RCB ಉತ್ತಮ ರನ್ ರೇಟ್ ನೊಂದಿಗೆ ಗೆಲುವು ಧಾಖಲಿಸಿದರೆ ನೇರವಾಗಿ ಪ್ಲೇ ಆಫ್ ತಲುಪುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top