fbpx
ಸಮಾಚಾರ

‘ತಾಯಂದಿರ ದಿನದಂತೆ ಹೆಂಡತಿಯರ ದಿನವನ್ನೂ ಆಚರಿಸಬೇಕು’: ಕೇಂದ್ರ ಸಚಿವ ರಾಮದಾಸ್ ಅಠಾವಳೆ

ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಅವರು ತಾಯಂದಿರ ದಿನದ ಮಾದರಿಯಲ್ಲಿ ‘ಪತ್ನಿಯರ ದಿನ’ವನ್ನು ಆಚರಿಸಬೇಕು ಎಂದು ಭಾನುವಾರ ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ತಾಯಿಯು ಜನ್ಮ ನೀಡಿದರೆ, ಪತ್ನಿಯು ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ತನ್ನ ಪತಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೊಬ್ಬ ಮಹಿಳೆ ಇರುತ್ತಾಳೆ. ಆದ್ದರಿಂದ ನಾವು ಪತ್ನಿಯರ ದಿನವನ್ನು ಆಚರಿಸಬೇಕು ಎಂದು ಹೇಳಿದ್ದಾರೆ.

ಇತ್ತ ಸಚಿವರು ಪತ್ನಿಯರ ದಿನ ಆಚರಿಸಬೇಕು ಎನ್ನುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹಾಸ್ಯ ಶುರು ಮಾಡಿದ್ದಾರೆ. ಒಬ್ಬರು ಪ್ರತಿದಿನವೂ ಪತ್ನಿಯದ್ದೇ ದಿನವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮದುವೆಯಾದ ಯಾವುದೇ ಗಂಡು ಮದುವೆಯ ನಂತರ ಪತ್ನಿಯದಲ್ಲದ ದಿನವನ್ನು ಆಚರಿಸಿರುವುದುಂಟೇ ಎಂದು ಮತ್ತೊಬ್ಬರು ಕೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top