fbpx
ಸಮಾಚಾರ

ನಡುರಸ್ತೆಯಲ್ಲೇ, ಸಮವಸ್ತ್ರದಲ್ಲೇ ಬೆಂಗಳೂರಿನ ಶಾಲಾ ಬಾಲಕಿಯರ ಮಾರಾಮಾರಿ ಹೊಡೆದಾಟ: ಕಾರಣವೇನು? ವಿಡಿಯೋ ವೈರಲ್

ಬೆಂಗಳೂರಿನ ಶಾಲೆ ಮುಂದೆಯೊಂದರ ಬಾಲಕಿಯರ ಗುಂಪೊಂದು ಪರಸ್ಪರ ಹಲ್ಲೆ ನಡೆಸುತ್ತಿರುವ ಘಟನೆ ನಡೆದಿದೆ. ಹುಡುಗಿಯರು ಪರಸ್ಪರ ಹೊಡೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರು ಶಾಲಾ ಸಮವಸ್ತ್ರದಲ್ಲಿಯೇ ಇದ್ದಂತೆ ವೈರಲ್ ಆಗುತ್ತಿದೆ. ಘಟನೆ ಇಂದು ನಡೆದಿದೆ ಎಂದು ಹೇಳಲಾಗುತ್ತಿದ್ದು. ಹೊಡೆದಾಟಕ್ಕೆ ಕಾರಣವೂ ಅಧಿಕೃತವಾಗಿ ತಿಳಿದುಬಂದಿಲ್ಲ.

 

 

ಜಗಳದಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ಸಮವಸ್ತ್ರವನ್ನು ನೋಡಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಹೊಡೆದಾಟವು ಎರಡು ಶಾಲೆಗಳ ವಿದ್ಯಾರ್ಥಿಗಳ ನಡುವಿನ ಘರ್ಷಣೆಯಂತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವುಗಳಲ್ಲಿ ಬೆಂಗಳೂರಿನ ಪ್ರಸಿದ್ಧ ಬಿಷಪ್ ಕಾಟನ್ ಬಾಲಕಿಯರ ಶಾಲೆ ಒಂದಾಗಿದೆ…

ಹೊಡೆದಾಟಕ್ಕೆ ಕಾರಣವೇನು?
ಗರ್ಲ್ ಫ್ರೆಂಡ್ ಬಿಟ್ಟು ಬೇರೆ ಯುವತಿ ಜೊತೆ ಯುವಕ ಡೇಟಿಂಗ್ ಹೋಗಿದ್ದ. ಇದೇ ವಿಚಾರಕ್ಕೆ ವಿದ್ಯಾರ್ಥಿನಿಯರ ಗುಂಪು ಶಾಲೆಯ ಬಳಿ ಸೇರಿದೆ. ಆದ್ರೆ ಲವ್ ಹಾಗೂ ಡೇಟಿಂಗ್ ವಿಚಾರವನ್ನು ಮಾತ್ರ ವಿದ್ಯಾರ್ಥಿನಿಯರು ಬಾಯಿ ಬಿಡುತ್ತಿಲ್ಲ. ವಿದ್ಯಾರ್ಥಿನಿಯರ ಕೇವಲ ಸೋಶಿಯಲ್ ಮೀಡಿಯಾ ಚಾಟ್ ವಿಚಾರ ಅಂತ ಹೇಳುತ್ತಿದ್ದಾರೆ. ಆದರೆ ಡೇಟಿಂಗ್ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.

 

 

ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗಿಯರು ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡುತ್ತಿರುವುದು ಮತ್ತು ಕೂದಲು ಎಳೆದುಕೊಳ್ಳುವುದನ್ನು ಕಾಣಬಹುದು. ಒಬ್ಬ ಹುಡುಗಿ ಇತರರನ್ನು ಹೊಡೆಯಲು ಕೋಲು ತೆಗೆಯುವುದನ್ನು ಕಾಣಬಹುದು. ಕೆಲವು ಹುಡುಗರು ಕೂಡ ಸ್ಥಳದಲ್ಲಿ ಹಾಜರಿದ್ದರು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top