fbpx
ಸಮಾಚಾರ

ಚೇತನಾ ಸಾವು ಪ್ರಕರಣ- ಯುವ ನಟಿಗೆ ನಡೆದ ಆಪರೇಷನ್ ಯಾವುದು ಗೊತ್ತಾ? ಅದನ್ನ ಹೇಗೆ ಮಾಡ್ತಾರೆ? ಇಲ್ಲಿದೆ ಮಾಹಿತಿ

ಚಿತ್ರರಂಗದಲ್ಲಿ ಮಿಂಚಬೇಕು, ಹೆಸರು ಗಳಿಸಬೇಕು ಎಂಬ ಮಹದಾಸೆ ಹೊಂದಿದ್ದ 22ರ ಹರೆಯದ ನಟಿ ಚೇತನಾ ರಾಜ್ ನೆನ್ನೆ ನಿಧನರಾಗಿದ್ದು ದುಃಖದ ಸಂಗತಿ. ಅವರು ಫ್ಯಾಟ್​ ಸರ್ಜರಿ ಮಾಡಿಸಲು ಹೋಗಿ ಚಿಕಿತ್ಸೆ ಫಲಕಾರಿಯಾಗದೆ ಶಸ್ತ್ರಚಿಕಿತ್ಸೆಯ ವೈಪಲ್ಯದದಿಂದ ಸಾವನ್ನಪ್ಪಿದ್ದರು.

ಫ್ಯಾಟ್ ಸರ್ಜರಿ ಇಂದಾಗಿ ಉಂಟಾದ ಉಸಿರಾಟದ ಸಮಸ್ಯೆ ಎದುರಾಗಿ ಕಿರುತರೆ ನಟಿ ಚೇತನ ರಾಜ್ ಮೃತಪಟ್ಟಿದ್ದರು. ಈ ಸಾವಿನ ಸುತ್ತ ಹಲವಾರು ಅನುಮಾನಗಳು ಸೃಷ್ಟಿಯಾಗಿರುವುದು ಸುಳ್ಳಲ್ಲ. ಅನುಮಾನಗಳು ಹುಟ್ಟಿಕೊಂಡಿರುವ ಕಾರಣ ಪೊಲೀಸರು ಪ್ರಕರಣ ಧಾಖಲಿಸಿ ಪ್ರಾರ್ಥಮಿಕ ತನಿಖೆ ನಡೆಸಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಕೆಲವು ಸತ್ಯಾಂಶಗಳು ತಿಳಿದು ಬಂದಿದೆ.

ಆಪರೇಷನ್ ಯಾವುದು? ಹೇಗೆ ಮಾಡ್ತಾರೆ?
ಪೊಲೀಸ್ ತನಿಖಾ ತಂಡದಿಂದ ಲಭ್ಯವಾದ ಮಾಹಿತಿಯ ಪ್ರಕಾರ ಚೇತನಾಗೆ ನಡೆದಿರೋದು ಲಿಪೊಸಕ್ಷನ್ ಆಪರೇಷನ್. ಆ ಚಿಕಿತ್ಸೆಯಲ್ಲಿ ಇದರಲ್ಲಿ ಫ್ಯಾಟನ್ನು ಇಂಜೆಕ್ಷನ್ ಕೊಟ್ಟು ಬ್ಲಂಟ್ ಕ್ಯಾನುಲಾ ಮೂಲಕ ಕರಗಿಸುತ್ತಾರೆ. ಇದು ದೇಹದ ಫ್ಯಾಟ್ ಕರಗಿಸಲು ಮಾಡುವ ಒಂದು ವಿಧಾನ ಅಷ್ಟೇ. ಸಾಮಾನ್ಯವಾಗಿ ಇದು ಡೇ ಕೇರ್ ಪ್ರೊಸೀಜರ್ ಆಗಿರುತ್ತೆ, ಅಂದರೆ ಬೆಳಗೆ ಆಪರೇಷನ್ ಮಾಡಿ ಸಂಜೆ ಒಳಗೆ ಮನೆಗೆ ಕಳಿಸುತ್ತಾರೆ. ಹೀಗಾಗಿ ಸದ್ಯದ ಮಾಹಿತಿ ಪ್ರಕಾರ ಚೇತನಾಗೆ ಮಾಡಿರೋದು ಲಿಪೊಸಕ್ಷನ್ ಆಪರೇಷನ್ ಎಂದು ತಿಳಿದುಬಂದಿದೆ.

ಪೊಲೀಸರಿಗೆ ಇರುವ ಅನುಮಾನಗಳು:
1. ಫ್ಯಾಟ್ ಬರ್ನ್ ಆದಾಗ ರಕ್ತನಾಳದಲ್ಲಿ ಏರ್ ಎಂಬೋಲಿಸಂ ಆಗಿರುವ ಸಾಧ್ಯತೆಗಳಿರುತ್ತವೆ. ಇದು ಆಪರೇಷನ್ ಆದ 72 ಘಂಟೆಗಳಲ್ಲಿ ಯಾವಾಗ ಬೇಕಾದರೂ ಆಗಬಹುದು.

2. ಎರಡನೆಯದಾಗಿ ಫ್ಯಾಟ್ ಎಂಬೋಲಿಸಂ ಆಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಏಕೆಂದರೆ ಆಪರೇಷನ್ ವೇಳೆ ಫ್ಯಾಟ್ ಸೆಮಿ ಸೋಲಿದ ಆಗಿರುತ್ತೆ. ಇದು ಕೂಡ ಆಪರೇಷನ್ ಆದ 72 ಘಂಟೆಗಳಲ್ಲಿ ಯಾವಾಗ ಬೇಕಾದರೂ ಆಗಬಹುದು.

3. ಬ್ಲಂಟ್ ಕ್ಯಾನುಲಾ ಮೂಲಕ ಲಿಪೊಸಕ್ಷನ್ ಆಪರೇಷನ್ ಮಾಡುವ ವೇಳೆ ಲಂಗ್ಸ್ ಗೆ ಚುಚ್ಚಿರಬಹುದು. ಇದರಿಂದ ಲಂಗ್ಸ್ ಡ್ಯಾಮೇಜ್ ಆಗಿ ಸೆಮಿ ಲಿಕ್ವಿಡ್ ಫ್ಯಾಟ್ ತುಂಬಿರುವ ಸಾಧ್ಯತೆಗಳಿರುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top