fbpx
ಸಮಾಚಾರ

ಚೇತನಾ ರಾಜ್ ಸಾವಿನ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ತಂದೆ: ಮಾಡಿರುವ ಆರೋಪ ಏನು ಗೊತ್ತಾ?

ಫ್ಯಾಟ್ ಸರ್ಜರಿ ಎಡವಟ್ಟಿನಿಂದ ಕಿರುತರೆ ನಟಿ ಚೇತನಾ ರಾಜ್ ಮೃತಪಟ್ಟಿದ್ದರು. ಇವರ ಸಾವಿನ ಕುರಿತು ಹಲವಾರು ಅನುಮಾನಗಳು ವ್ಯಕ್ತವಾಗಿದ್ದವು. ಪೊಲೀಸರು ಪ್ರಕರಣ ಧಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಮೊದಲ ಬಾರಿಗೆ ಚೇತನ ಅವರ ತಂದೆ ವರದ ರಾಜ್ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.

ಮಧ್ಯಾಹ್ನ ಎರಡೂವರೆಗೆ ಮುಗಿಯಬೇಕಾದ ಸರ್ಜರಿ ಸಂಜೆ ಆದರೂ ಮುಗಿದಿರಲಿಲ್ಲ. ಯಾಕೆ ಎಂದು ಪ್ರಶ್ನಿಸಿದಾಗ ಅಬ್ಸರ್ವೇಷನ್ ನಲ್ಲಿ ಇಟ್ಟಿದೀವಿ ಎಂದು ಹೇಳಿದರು. ನಂತರ ಉಸಿರಾಟದ ಸಮಸ್ಯೆ ಆಗಿದೆ ಎಂದು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ನನ್ನ ಮಗಳು ಮೃತಪಟ್ಟಿರುವುದಾಗಿ ತಿಳಿಸಿದರು.

ನಿನ್ನೆ ನಾನು ಕೆಲಸಕ್ಕೆ ಹೋಗಿದ್ದೆ. ಕೆಲಸ ಮುಗಿಸಿ ಮನೆಗೆ ಬರೋಷ್ಟರಲ್ಲಿ ರಾತ್ರಿ 9 ಗಂಟೆ ಆಗಿತ್ತು. ಮನೆಗೆ ಬಂದಾಗ್ಲೇ ಮಗಳ ಸಾವಿನ ಬಗ್ಗೆ ವಿಷಯ ಗೊತ್ತಾಗಿದ್ದು. ಈ ಮೊದಲು ನಮ್ಮ ಬಳಿ ಫ್ಯಾಟ್ ಸರ್ಜರಿ ಮಾಡಿಸುವುದಾಗಿ ಕೇಳಿದಳು, ಆದರೆ ನಾವು ಬೇಡ ಎಂದು ಹೇಳಿದ್ವಿ. ಆದರೂ ಅವಳು ಹೋಗಿದ್ದಾಳೆ.

ಸರ್ಜರಿ ಮಾಡುವ ಬಗ್ಗೆ ಆಸ್ಪತ್ರೆಯವರು ಸಹ ನಮಗೆ ವಿಷಯ ತಿಳಿಸಿಲ್ಲ. ಅವಳಿಗೆ ಯಾವುದೇ ಅರೋಗ್ಯ ಸಮಸ್ಯೆ ಇರಲಿಲ್ಲ. ಬೆಳಗೆ ಕಾಲ್ ಮಾಡಿದಾಗ್ಲೂ ಸಹ ಸರ್ಜರಿ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಮಾತನಾಡಲಿಲ್ಲ. ನನ್ನ ಮಗಳ ಸಾವಿಗೆ ಆಸ್ಪತ್ರೆಯ ವೈದ್ಯರೇ ಮುಖ್ಯ ಕಾರಣ. ಈಗಾಗಲೇ ಇವರ ವಿರುದ್ಧ ದೂರನ್ನು ನೀಡಿರುವುದಾಗಿ ತಿಳಿಸುತ್ತಾ ತಮ್ಮ ಅಳಲನ್ನು ತೋಡಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top