fbpx
ಸಮಾಚಾರ

ಲಕ್ನೋ V/S ಕೊಲ್ಕತ್ತಾ ಪಂದ್ಯದಲ್ಲಿ ಯಾರು ಗೆದ್ದರೆ RCBಗೆ ಅನುಕೂಲ? ಇಲ್ಲಿದೆ RCB ಲೆಕ್ಕಾಚಾರ

ಐಪಿಎಲ್ ನಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇಂದಿನ ಪಂದ್ಯ ಆರ್ ಸಿ ಬಿ ಪಾಲಿಗೆ ಅತಿ ಮುಖ್ಯವಾದದ್ದು. ಏಕೆಂದರೆ ಇಂದಿನ ಪಂದ್ಯದಲ್ಲಿ ಲಕ್ನೋ ಸೋತರೆ ಆರ್ ಸಿ ಬಿ ಗೆ ಪ್ಲಸ್ ಪಾಯಿಂಟ್ ಆಗಲಿದೆ.

ಪ್ರಸ್ತುತ ಲಕ್ನೋ ತಂಡ 16 ಪಾಯಿಂಟ್ಸ್ ನೊಂದಿಗೆ ಅಂಕಪಟ್ಟಿಯಲ್ಲಿ 3 ನೆೇ ಸ್ಥಾನದಲ್ಲಿದೆ. ಆದರೆ ಲಕ್ನೋ ರನ್ ರೇಟ್ ಕೇವಲ 0.262 ಮಾತ್ರ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಲಕ್ನೋ ಹೀನಾಯವಾಗಿ ಸೋತರೆ ಇದರ ರನ್ ರೇಟ್ ನಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಅದು ಮೈನಸ್ ಸಹ ಹೋಗಬಹುದು. ಇದೆಲ್ಲ ಆಗಬೇಕಾದರೆ ಲಕ್ನೋ ಇಂದು ಸುಮಾರು 80 ರನ್ ಗಳ ಅಂತರದಿಂದ ಸೋಲಬೇಕು.

ಆರ್ ಸಿ ಬಿ ನಾಳೆ ಗುಜರಾತ್ ವಿರುದ್ಧ ನಡೆಯುವ ಪಂದ್ಯದಲ್ಲಿ 70 ರನ್ ಗಳಿಗಿಂತ ಅಧಿಕ ರನ್ ಅಂತರದಿಂದ ಗೆಲ್ಲಬೇಕು. ಆಗ ರನ್ ರೇಟ್ ಹೆಚ್ಚಳವಾಗುತ್ತದೆ. ಒಂದು ವೇಳೆ ಮುಂಬೈ ವಿರುದ್ಧ ಡೆಲ್ಲಿ ಗೆದ್ದರು ಉತ್ತಮ ರನ್ ರೇಟ್ ಸಹಾಯದಿಂದ ಪ್ಲೇಆಫ್ ತಲುಪಬಹುದು. ಹೀಗಾಗಿ ಇಂದಿನ ಪಂದ್ಯ ಆರ್ ಸಿ ಬಿ ಪಾಲಿಗೆ ಮಹತ್ವವಾದದ್ದು.

ಒಂದು ವೇಳೆ ಇಂದು ಲಕ್ನೋ ಗೆದ್ದರೆ ಆರ್ ಸಿ ಬಿ ಗುಜರಾತ್ ವಿರುದ್ಧ ಬಾರಿ ಅಂತರದಿಂದ ಗೆಲ್ಲಬೇಕು ಮತ್ತು ಶನಿವಾರ ನಡೆಯುವ ಪಂದ್ಯದಲ್ಲಿ ಡೆಲ್ಲಿ ಮುಂಬೈ ವಿರುದ್ಧ ಸೋಲಬೇಕು. ಆಗ ಮಾತ್ರ ಆರ್ ಸಿ ಬಿ ಪ್ಲೇ ಆಫ್ ತಲುಪಬಹುದು. ಒಂದು ವೇಳೆ ಆರ್ ಸಿ ಬಿ ಗುಜರಾತ್ ವಿರುದ್ಧ ಸೋತರೆ ನೇರವಾಗಿ ಮನೆಗೆ ಹೋಗಬೇಕಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top