fbpx
ಸಮಾಚಾರ

ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಲು ಮುಂದಾದ RCB ಫ್ರಾಂಚೈಸ್- RCB ಪರ ಆಯ್ಕೆ ಆದ ಆಟಗಾರರು ಇವರೇ!

2009 ರಿಂದ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕ್ರಿಕೆಟ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದವರಿಗೆ “ಹಾಲ್ ಆಫ್ ಫೇಮ್ ಪ್ರಶಸ್ತಿ” ನೀಡಿ ಗೌರವಿಸುತ್ತಿದೆ. ಇದೀಗ ಇದೇ ಮಾದರಿಯಲ್ಲಿ ಆರ್ ಸಿ ಬಿ ಫ್ರಾಂಚೈಸ್ ಆರ್ ಸಿ ಬಿ ಪರ ಮಹತ್ವದ ಸಾಧನೆ ಮಾಡಿದ ಆಟಗಾರರಿಗೆ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಲು ನಿರ್ಧರಿಸಿದೆ.

 

 

ಇನ್ನು ಈ ಪ್ರಶಸ್ತಿಯನ್ನು ಆರ್ ಸಿ ಬಿ ಯ ಎಲ್ಲಾ ಆಟಗಾರರಿಗೂ ನೀಡುವುದಿಲ್ಲ. ಇದರ ಹೊರತು ಆರ್ ಸಿ ಬಿ ಪರ ಸರ್ವ ಶ್ರೇಷ್ಠ ಸಾಧನೆ ಮಾಡಿದ ಆಟಗಾರರಿಗೆ ಮಾತ್ರ ಸಲ್ಲುತ್ತದೆ. ಇದಲ್ಲದೆ ಕೆಲವು ಷರತ್ತುಗಳನ್ನು ಸಹ ಆರ್ ಸಿ ಬಿ ಸೂಚಿಸಿದೆ.

 

 

ಅದೇನೆಂದರೆ ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಭಾಜನರಾದ ಆಟಗಾರರು ಕನಿಷ್ಠ 3 ವರ್ಷಗಳ ಕಾಲ ಆರ್ ಸಿ ಬಿ ಪರ ಅದಿರಬೇಕು, ಪ್ರಸ್ತುತ ಅವರು ಐಪಿಎಲ್ ನಲ್ಲಿ ಯಾವುದೇ ತಂಡದ ಭಾಗವಾಗಿರಬಾರದು, ಮೈದಾನದಲ್ಲಿ ಮತ್ತು ಹೊರಗೆ ತಮ್ಮ ಪ್ರತಿಭೆಯನ್ನು ಜನ ಎತ್ತಿ ಹಿಡಿಯಬೇಕು. ಇಂತಹ ವ್ಯಕ್ತಿಗಳಿಗೆ ಮಾತ್ರ ಆರ್ ಸಿ ಬಿ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಲಾಗುವುದು.

 

 

ಇವೆಲ್ಲ ಅಂಶಗಳನ್ನು ಪರಿಗಣಿಸಿ ಆರ್ ಸಿ ಬಿ ಫ್ರಾಂಚೈಸ್ ಆಯ್ಕೆ ಮಾಡಿರುವ ಆಟಗಾರರು ಎಂದರೆ ಅದು Mr.360 ಖ್ಯಾತಿಯ ಎಬಿ ಡಿವಿಲಿಯೆರ್ಸ್ ಮತ್ತು ಕ್ರಿಸ್ ಗೇಲ್. ಎಬಿಡಿ ಆರ್​ಸಿಬಿ ಪರ 11 ವರ್ಷಗಳ ಕಾಲ ಆಡಿದ್ದರೆ, ಕ್ರಿಸ್ ಗೇಲ್ 7 ವರ್ಷಗಳ ಕಾಲ ಬ್ಯಾಟ್ ಬೀಸಿದ್ದರು. ಅಷ್ಟೇ ಅಲ್ಲದೆ ಆರ್​ಸಿಬಿ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದರು.

 

 

ಮುಂದಿನ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಅವರಿಗೆ ಹಾಲ್ ಆಫ್ ಫೇಮ್​ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top