ಬಹುತೇಕ 15ನೇ ಅವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿರುವ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ದಿಢೀರ್ ಎನ್ನುವಂತೆ ನಾಯಕ ಕೇನ್ ವಿಲಿಯಮ್ಸನ್ ತಂಡವನ್ನು ತೊರೆದಿದ್ದಾರೆ. ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಇನ್ನೊಂದು ಪಂದ್ಯ ಆಡುವುದು ಬಾಕಿ ಉಳಿದಿದೆ. ಹೀಗಿರುವಾಗಲೇ ವಿಲಿಯಮ್ಸನ್ ತವರಿಗೆ ವಾಪಸ್ಸಾಗಿದ್ದಾರೆ.
:
Our skipper Kane Williamson is flying back to New Zealand, to usher in the latest addition to his family.
Here's everyone at the #Riser camp wishing Kane Williamson and his wife a safe delivery and a lot of happiness!#OrangeArmy #ReadyToRise pic.twitter.com/3CFbvN60r4
— SunRisers Hyderabad (@SunRisers) May 18, 2022
ಕೇನ್ ವಿಲಿಯಮ್ಸನ್ ಎರಡನೇ ಬಾರಿಗೆ ತಂದೆಯಾಗುತ್ತಿದ್ದು, ಈ ಕಾರಣದಿಂದಾಗಿ ಅವರು ನ್ಯೂಜಿಲೆಂಡ್ಗೆ ಮರಳಿದ್ದಾರೆ ಎಂದು ಎಸ್ಆರ್ಹೆಚ್ ಫ್ರಾಂಚೈಸ್ ತಿಳಿಸಿದೆ. ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ 3 ರನ್ಗಳಿಂದ ರೋಚಕ ಗೆಲುವು ಸಾಧಿಸಿತ್ತು. ಈ ಗೆಲುವಿನ ಬೆನ್ನಲ್ಲೇ ವಿಲಿಯಮ್ಸನ್ ತಾಯ್ನಾಡಿಗೆ ಮರಳಲು ನಿರ್ಧರಿಸಿದ್ದಾರೆ.
“ತಮ್ಮ ಕುಟುಂಬದ ನೂತನ ಸದಸ್ಯರ ಆಗಮನದಿಂದಾಗಿ ನಮ್ಮ ನಾಯಕ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ಗೆ ಹಿಂತಿರುಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡದ ಪ್ರತಿಯೊಬ್ಬರು ವಿಲಿಯಮ್ಸನ್ ಹಾಗೂ ಅವರ ಪತ್ನಿಗೆ ಶುಭ ಹಾರೈಸಿದ್ದಾರೆ ಹಾಗೂ ತಂಡದಲ್ಲಿ ಸಾಕಷ್ಟು ಸಂತೋಷವಿದೆ,” ಎಂದು ಸನ್ರೈಸರ್ಸ್ ಹೈದರಾಬಾದ್ ಬುಧವಾರ ಟ್ವೀಟ್ ಮಾಡಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
