fbpx
ಸಮಾಚಾರ

ಓಂ‌ ಚಿತ್ರಕ್ಕೆ 26 ವರ್ಷ: ಕ್ಲೈಮ್ಯಾಕ್ಸ್​ನಲ್ಲಿ ಬರೋ ಇಬ್ಬರು ಮಕ್ಕಳು ಯಾರು ಅಂತ ಗುರುತಿಸಿ.

ಕನ್ನಡ ಚಿತ್ರರಂಗದಲ್ಲಿ ಉಪೇಂದ್ರ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ “ಓಂ” ಬಹುದೊಡ್ದ ಯಶಸ್ವಿ ಚಿತ್ರ. ಚಿತ್ರರಂಗದ ಅದುವರೆಗಿನ ಎಲ್ಲಾ ಎಣಿಕೆಗಳನ್ನು ಮೀರಿ ಹೊಸತನದ ಹಾದಿ ತೋರಿದ ಚಿತ್ರವೆಂದರೆ ತಪ್ಪಲ್ಲ. ಅಂತಹಾ ಸೆನ್ಸೇಷನ್ ಚಿತ್ರ ಬಿಡುಗಡೆಯಾಗಿ ಇಂದಿಗೆ (ಮೇ 19) ಗೆ 25 ವರ್ಷ ತುಂಬಿದೆ.

ಓಂ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನಾಯಕ ಸತ್ಯ ಪಾತ್ರ ಮಾಡಿರುವ ಶಿವಣ್ಣ ರೌಡಿಸಂ ಬಿಟ್ಟು ಮಕ್ಕಳೊಟ್ಟಿಗೆ ಚಿಕ್ಕ ಜೋಪಡಿ ಅಂಗಡಿಯಲ್ಲಿ ಜೀವನ ಸಾಗಿಸುತ್ತಾರೆ. ಅವರಿಂದ ಪ್ರಭಾವಿತರಾಗಿ ರಿಯಲ್ ರೌಡಿಗಳಾದ ಜೇಡರಹಳ್ಳಿ ಕೃಷ್ಣಪ್ಪ, ಕೊರಂಗು ಕೃಷ್ಣ, ತನ್ವೀರ್-ಮೂವರು ನಾವೂ ರೌಡಿಸಂ ಬಿಡ್ತೀವಿ ಎಂದು ಹೇಳುತ್ತಾರೆ.

 

 

ಈ ದೃಶ್ಯದಲ್ಲಿ ಶಿವಣ್ಣ ಮತ್ತು ಪ್ರೇಮ ಅವರ ಜೊತೆ ಇಬ್ಬರು ಪುಟ್ಟ ಮಕ್ಕಳು ಇರುತ್ತಾರೆ. ಅಂದ್ಹಾಗೆ ಆ ಮಕ್ಕಳು ಬೇರಾರೂ ಅಲ್ಲ. ರಾಘವೇಂದ್ರ ರಾಜ್​ಕುಮಾರ್ ಪುತ್ರರಾದ ವಿನಯ್ ರಾಜ್​ಕುಮಾರ್ ಮತ್ತು ಯುವರಾಜ್ ಕುಮಾರ್. ಈ ಸಿನಿಮಾದಲ್ಲೇ ಇಬ್ಬರು ಸಹೋದರರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಡಾ.ರಾಜ್ – ಅಂಬಿ ನಟನೆಯ ಒಡಹುಟ್ಟಿದವರು ಸಿನಿಮಾದಲ್ಲೂ ವಿನಯ್ ರಾಜ್​ಕುಮಾರ್ ನಟಿಸಿದ್ದರು.

ಅಂದಹಾಗೆ, ‘ಓಂ’ ಚಿತ್ರವನ್ನು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. ಹಂಸಲೇಖ ಸಂಗೀತ ಸಂಯೋಜನೆ ಮಾಡಿದ್ದರೆ, ಬಿ.ಸಿ. ಗೌರಿಶಂಕರ್ ಛಾಯಾಗ್ರಹಣದ ಹೊಣೆ ಹೊತ್ತಿದ್ದರು. ಬಿಡುಗಡೆಯಾಗಿ ವರ್ಷಗಳೇ ಕಳೆದರೂ ತನ್ನ ಬೇಡಿಕೆಯನ್ನು ಮಾತ್ರ ಕಡಿಮೆ ಮಾಡಿಕೊಳ್ಳದೆ ಐನೂರಕ್ಕೂ ಅಧಿಕ ಭಾರಿ ರೀ-ರಿಲೀಸ್ ಆಗಿರುವ ಓಂ ಚಿತ್ರದ ಬಿಡುಗಡೆಯಾಗಿ ನೆನ್ನೆ ಸರಿಯಾಗಿ 25 ವರ್ಷಗಳು ಕಳೆದು ಹೋಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top