fbpx
ಸಮಾಚಾರ

ಬಹುಭಾಷಾ ಚಿತ್ರನಟ ಕ್ಯಾಪ್ಟನ್ ಚಲಪತಿ ಚೌದ್ರಿ ವಿಧಿವಶ

ಅನಾರೋಗ್ಯದ ಹಿನ್ನೆಲೆ ಬಹುಭಾಷಾ ಚಿತ್ರನಟ ಕ್ಯಾಪ್ಟನ್ ಚಲಪತಿ ಚೌದ್ರಿ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಇವರ ಆರೋಗ್ಯದಲ್ಲಿ ತೀವ್ರವಾದ ಏರುಪೇರುಗಳಿದ್ದು ಇವರನ್ನು ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.

ಕನ್ನಡ, ತೆಲುಗು, ಹಿಂದಿ ಹೀಗೆ ಹತ್ತು ಹಲವಾರು ಭಾಷೆಗಳಲ್ಲಿ ಅಭಿನಯ ಮಾಡಿದ್ದಾರೆ. ಧಾರಾವಾಹಿಗಳಲ್ಲದೆ 100ಕ್ಕೂ ಅಧಿಕ ಸಿನಿಮಗಳಲ್ಲಿ ಅಭಿನಯಿಸಿದ್ದಾರೆ. ಅವರು ಕನ್ನಡದ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ No.1 ಸೊಸೆ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇದಲ್ಲದೆ ಶಿವರಾಜ್ ಕುಮಾರ್, ಬಾಲಕೃಷ್ಣ, ಚಿರಂಜೀವಿ, ನಾಗಾರ್ಜುನ್ ಹೀಗೆ ಹತ್ತು ಹಲವಾರು ಸ್ಟಾರ್ ನಂತರ ಜೊತೆ ಬಣ್ಣ ಹಚ್ಚಿದ್ದಾರೆ.

ಇವರ ಅಂತಿಮ ದರ್ಶನಕ್ಕಾಗಿ ನಗರದ ಕೆ.ಎಂ.ಕಾಲೊನಿಯ ಸ್ವಗೃಹದಲ್ಲಿ ಅವಕಾಶ ಮಾಡಿಕೊಡಲಾಗಿದೆ. ನಗರದ ಬಿ.ಆರ್.ಬಿ ಕಾಲೇಜಿನ ಹತ್ತಿರ ಇರುವ ಮುಕ್ತಿಧಾಮದಲ್ಲಿ ಸಂಜೆ 4:30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರು ಪತ್ನಿ, ಇಬ್ಬರು ಮಕ್ಕಳು, ಮೊಮ್ಮಕ್ಕಳು ಮತ್ತು ಅಪಾರವಾದ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸಿನಿಮಾರಂಗದ ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top