ಮೇ 20, 2022 ಶುಕ್ರವಾರ
ವರ್ಷ : 1944, ಶೋಭಾಕೃತ
ತಿಂಗಳು : ವೈಶಾಖ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ಪಂಚಮೀ : May 19 08:24 pm – May 20 05:29 pm; ಷಷ್ಠೀ : May 20 05:29 pm – May 21 02:59 pm
ನಕ್ಷತ್ರ : ಉತ್ತರಾಷಾಢ: May 20 03:17 am – May 21 01:18 am; ಶ್ರವಣ: May 21 01:18 am – May 21 11:46 pm
ಯೋಗ : ಶುಭ: May 19 02:58 pm – May 20 11:25 am; ಶುಕ್ಲ: May 20 11:25 am – May 21 08:11 am
ಕರಣ : ಕುಲವ: May 19 08:24 pm – May 20 06:54 am; ತೈತುಲ: May 20 06:54 am – May 20 05:29 pm; ಗರಿಜ: May 20 05:29 pm – May 21 04:11 am; ವಾಣಿಜ: May 21 04:11 am – May 21 02:59 pm
Time to be Avoided
ರಾಹುಕಾಲ : 10:41 AM to 12:16 PM
ಯಮಗಂಡ : 3:25 PM to 5:00 PM
ದುರ್ಮುಹುರ್ತ : 08:28 AM to 09:19 AM, 12:41 PM to 01:31 PM
ವಿಷ : 05:03 AM to 06:33 AM
ಗುಳಿಕ : 7:31 AM to 9:06 AM
Good Time to be Used
ಅಮೃತಕಾಲ : 07:26 PM to 08:54 PM
ಅಭಿಜಿತ್ : 11:50 AM to 12:41 PM
Other Data
ಸೂರ್ಯೋದಯ : 5:57 AM
ಸುರ್ಯಾಸ್ತಮಯ : 6:35 PM
ಮೇಷ (Mesha)
ಆರ್ಥಿಕವಾಗಿ ನಾನಾ ರೀತಿಯ ಸಂಪತ್ತಿನ ಗಳಿಕೆಯಿಂದ ಎಲ್ಲಾ ರೀತಿಯಲ್ಲಿ ಕಾರ್ಯಾನುಕೂಲಕ್ಕೆ ಪೂರಕವಾಗುತ್ತದೆ. ನಿರುದ್ಯೋಗಿಗಳು, ಅವಿವಾಹಿತರು ಬಂದ ಅವಕಾಶಗಳನ್ನು ಸದುಪಯೋಗಿಸಿಕೊಂಡಲ್ಲಿ ಮುನ್ನಡೆಗೆ ಸಾಧ್ಯವಾಗಲಿದೆ. ಆರೋಗ್ಯದ ಬಗ್ಗೆ ಮಾತ್ರ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವೆನಿಸಲಿದೆ. ವಿದ್ಯಾರ್ಥಿಗಳು ಪ್ರಯತ್ನಬಲಕ್ಕೆ ಹೆಚ್ಚಿನ ಒತ್ತು ನೀಡಬೇಕು.
ವೃಷಭ (Vrushabh)
ಆರ್ಥಿಕವಾಗಿ ಅನಿರೀಕ್ಷಿತ ರೂಪದಲ್ಲಿ ನಾನಾ ರೀತಿಯಲ್ಲಿ ಧನವ್ಯಯ ವಾಗಲಿದೆ. ಆದರೂ ಅದೇ ರೀತಿಯಲ್ಲಿ ಧನಾಗಮನದಿಂದ ತೊಂದರೆ ಇರಲಾರದು. ಸಾಂಸಾರಿಕ ಸಮಸ್ಯೆಯನ್ನು ಹಿರಿಯರ ಸಮಕ್ಷಮದಲ್ಲಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿರಿ. ಕಾರ್ಯಕ್ಷೇತ್ರದ ಒತ್ತಡದಿಂದ ಮಾನಸಿಕ, ದೈಹಿಕ ಪರಿಣಾಮ ತಂದೀತು.
ಮಿಥುನ (Mithuna)
ದಾಂಪತ್ಯದಲ್ಲಿ ಆಗಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಂದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ಅವಿವಾಹಿತರ ಸಂಬಂಧಗಳ ಅಲೆದಾಟ ಸಾಕೆನಿಸಲಿದೆ, ವ್ಯಾಪಾರ, ವ್ಯವಹಾರಗಳಲ್ಲಿ ಹೂಡಿಕೆ, ವಿಸ್ತರಣೆಗೆ ಸಕಾಲ.ಹೆಚ್ಚಿನ ಲಾಭದಾಯಕ ಆದಾಯದಿಂದ ಕಾರ್ಯಾನುಕೂಲವಾಗಲಿದೆ. ಸಾಮಾಜಿಕವಾಗಿ ಯೋಗ್ಯಜನರ ಸ್ನೇಹಚಾರದಿಂದ ಪ್ರತಿಷ್ಠೆ ಹೆಚ್ಚಾಗಲಿದೆ.
ಕರ್ಕ (Karka)
ಸದುಪಯೋಗಿಸಿಕೊಳ್ಳಿರಿ. ವಿದ್ಯಾರ್ಥಿಗಳು, ನಿರುದ್ಯೋಗಿ ಹಾಗೂ ಅವಿವಾಹಿತರಿಗೆ ಉತ್ತಮ ಅಭಿವೃದ್ಧಿದಾಯಕ ವಾತಾವರಣ ಮುನ್ನಡೆಗೆ ಸಾಧಕವಾದರೂ ಪ್ರಯತ್ನಬಲ ಬೇಕೇ ಬೇಕು, ಕೆಲವೊಂದು ಸಮಸ್ಯೆಗಳನ್ನು ವೈಯಕ್ತಿಕವಾಗಿ ಪರಾಮರ್ಶಿಸಲೇಬೇಕಾದ ಸಮಯ ಬರುವುದು.
ಸಿಂಹ (Simha)
ಅಧಿಕ ತಿರುಗಾಟವಿದ್ದರೂ ಆದಾಯ ಹೆಚ್ಚಲಿದೆ. ನಾನಾ ರೀತಿಯಲ್ಲಿ ಧನ ಸಂಪಾದನೆ ಇದೆ. ಪಾಲುಗಾರಿಕೆಯಲ್ಲಿ ಒಮ್ಮತ ಮಾಡದೆ ಹಿಂದೆ ಸರಿಯಬೇಕಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಿ.
ಕನ್ಯಾರಾಶಿ (Kanya)
ವಾರಾಂತ್ಯದಲ್ಲಿ ಮನೆಯಲ್ಲಿನ ಬಿಗು ವಾತಾವರಣ ತಿಳಿಯಾಗಿ ಮನಸ್ಸಿಗೆ ಸಮಾಧಾನ ತಂದೀತು. ಹಾಗೂ ನಿಮ್ಮ ಆರ್ಥಿಕ ಸ್ಥಿತಿಗತಿಗಳು ಬಲಗೊಳ್ಳಲಿವೆ. ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸದಿಂದ ಪ್ರಗತಿ ಸಾಧಿಸಬಹುದು. ಮುನ್ನಡೆಯಿರಿ.
ತುಲಾ (Tula)
ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟಿನ ವರ್ತನೆ ಇರಲಿ. ಹಂತ ಹಂತವಾಗಿ ವೈಯಕ್ತಿಕ ಹಾಗೂ ವೈವಾಹಿಕ ಸಮಸ್ಯೆಗಳು ಬಗೆಹರಿದು ಮನಸ್ಸಿಗೆ ನೆಮ್ಮದಿ ತಂದೀತು. ಆದರೂ ಇತರರ ಕಷ್ಟನಷ್ಟಗಳಿಗೆ ನೆರವಾಗುವ ನಿಮ್ಮ ಮನೋಧರ್ಮ ಕಷ್ಟಕ್ಕೀಡಾಗಲಿದೆ.
ವೃಶ್ಚಿಕ (Vrushchika)
ಸಾಂಸಾರಿಕವಾಗಿ ಭಿನ್ನಾಭಿಪ್ರಾಯ ತಿಳಿಯಾಗಿ ಪರಸ್ಪರ ಪ್ರೀತಿ, ವಿಶ್ವಾಸ ವೃದ್ಧಿಸಲಿದೆ. ಕೃಷಿ ಕಾರ್ಯಗಳು ಸುಗಮವಾಗಿ ನಡೆಯಲಿದೆ. ವಾಹನ, ಮನೆ ಖರೀದಿಯ ಚಿಂತನೆ ಕಾರ್ಯಗತವಾಗಲಿದೆ, ಸಾಂಸಾರಿಕವಾಗಿ ಹಿತಶತ್ರುಗಳ ಸಮಯ ಸಾಧಕತನದಿಂದ ವ್ಯಾಕುಲಗೊಳ್ಳದಿರಿ. ತಾಳ್ಮೆ ಇರಲಿ.
ಧನು ರಾಶಿ (Dhanu)
ಸದ್ಯದ ಪರಿಸ್ಥಿತಿಯಲ್ಲಿ ದೈವಾನುಗ್ರಹ ಉತ್ತಮವಿದ್ದು ಎಲ್ಲಾ ರೀತಿಯ ಮುನ್ನಡೆಗೆ ಅನುಕೂಲ ತಂದರೂ ಆರ್ಥಿಕವಾಗಿ ಮಾತ್ರ ಅಷ್ಟಕ್ಕಷ್ಟೇ. ವಿದ್ಯಾರ್ಥಿಗಳಿಗೆ ಹೆಚ್ಚಿನ ನಿರೀಕ್ಷೆಯು ಸಾಧ್ಯವಾಗದು. ಹಣಕಾಸು ಕೈಯಲ್ಲಿ ನಿಲ್ಲದು. ದುಡುಕು ನಿರ್ಧಾರಗಳು ಕಾರ್ಯಭಂಗಕ್ಕೆ ಕಾರಣವಾಗಲಿವೆ.
ಮಕರ (Makara)
ನವ ವಿವಾಹಿತರಿಗೆ ಸಂತಾನ ಭಾಗ್ಯದ ಶುಭ ಸಮಾಚಾರವಿರುತ್ತದೆ, ಸಾಂಸಾರಿಕವಾಗಿ ಆಗಾಗ ಅಡಚಣೆ ತೋರಿಬಂದರೂ ತಾಳ್ಮೆ-ಸಮಾಧಾನ ಅಗತ್ಯವಿದೆ, ಕಾರ್ಯಕ್ಷೇತ್ರದಲ್ಲಿ ಮುಖ್ಯ ಗುರಿಯನ್ನು ಪರಾಮರ್ಶಿಸಲು ಸೂಕ್ತ ಸಮಯವಿದು. ಸಮಸ್ಯೆಗೆ ಪರಿಹಾರವಿದೆ.
ಕುಂಭರಾಶಿ (Kumbha)
ರಾಜಕೀಯ ವರ್ಗದವರು ಚುನಾವಣಾ ದೃಷ್ಟಿಯಿಂದ ಹೆಚ್ಚಿನ ಜನರ ಸಂಪರ್ಕ ಇಟ್ಟುಕೊಂಡರೆ ಉತ್ತಮ. ಆರ್ಥಿಕವಾಗಿ ಸಾಲಮಾಡುವುದನ್ನು ಆದಷ್ಟು ತಪ್ಪಿಸಿಕೊಂಡಲ್ಲಿ ಉತ್ತಮ, ಅನಿರೀಕ್ಷಿತ ಧನಾಗಮನದಿಂದ ಕಾರ್ಯಸಿದ್ಧಿಯಾಗಲಿದೆ. ಸಾರ್ವಜನಿಕವಾಗಿ ಜನರೊಂದಿಗೆ ಹೆಚ್ಚಿನ ಸಂಪರ್ಕ ಮುಂದಿನ ಭವಿಷ್ಯಕ್ಕೆ ಫಲಕಾರಿಯಾಗಲಿದೆ.
ಮೀನರಾಶಿ (Meena)
ಆಪ್ತರೊಡನೆ ಮನಬಿಚ್ಚಿ ಮಾತನಾಡುವುದು ಉತ್ತಮ. ವ್ಯಾವಹಾರಿಕ ವಾಗಿ ಕಾರ್ಯಕ್ಷೇತ್ರದಲ್ಲಿನ ಒಪ್ಪಂದದಲ್ಲಿರುವ ಅಂಶಗಳನ್ನು ಬದಲಾವಣೆ ಮಾಡಬೇಕಾದ ಅನಿವಾರ್ಯ ಸ್ಥಿತಿ ಒದಗಿಬಂದೀತು. ಸಾಂಸಾರಿಕವಾಗಿ ಭಿನ್ನಾಭಿಪ್ರಾಯ ಪರಿಹರಿಸಲ್ಪಡುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
