fbpx
ಸಮಾಚಾರ

ತನ್ನ ಹುಟ್ಟುಹಬ್ಬ ಆಚರಿಸಿದ್ದ ಮಂಡ್ಯ ಹುಡ್ಗರಿಗೆ ಸನ್ನಿ ಹೇಳಿದ್ದೇನು ಗೊತ್ತಾ?

ನಟಿ ಸನ್ನಿ ಲಿಯೋನ್ ಮೇ 13ರಕ್ಕೆ 41ನೇ ವಸಂತಕ್ಕೆ ಕಾಲಿಟ್ಟಿದ್ದರು. ಸನ್ನಿ ಲಿಯೋನ್ ಮಾತ್ರ ತಮ್ಮ ಹುಟ್ಟು ಹಬ್ಬ ಆಚರಿಸುವುದಲ್ಲ, ನೆಚ್ಚಿನ ನಟಿಯ ಬರ್ತಡೇಯನ್ನು ಮಂಡ್ಯ ಜಿಲ್ಲೆಯ ಕೊಮ್ಮೇರಹಳ್ಳಿ ಸನ್ನಿ ಲಿಯೋನ್ ಬಳಗ ಕೂಡ ಅದ್ದೂರಿಯಾಗಿ ಆಚರಿಸಿತ್ತು. ಇದೀಗ ವಿಷ್ಯ ತಿಳಿದ ನಟಿ ಸನ್ನಿ ಮಂಡ್ಯ ಹುಡುಗರ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ.

ಸನ್ನಿ ಬರ್ತಡೇ ಆಚರಿಸದ ಸುದ್ದಿ ಎಲ್ಲೆಡೆ ವೈರಲ್‌ ಆಗಿತ್ತು. ಅನೇಕ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಿದ್ದವು. ಈ ವಿಚಾರ ಸನ್ನಿ ಲಿಯೋನ್‌ ಅವರ ಕಿವಿಗೆ ಬೀಳುತ್ತಿದ್ದಂತೆ ಟ್ವೀಟ್‌ ಮೂಲಕ ಧನ್ಯವಾದ ಹೇಳಿರುವ ಅವರು, ” ನಿಜವಾಗಿಯೂ ನೀವೆಲ್ಲರೂ ನನಗೆ ತುಂಬಾ ವಿಶೇಷವಾದ ಭಾವನೆ ಮೂಡಿಸಿದ್ದೀರಿ” ಎಂದು ಬರೆದುಕೊಂಡಿದ್ದಾರೆ.

 

 

ಸನ್ನಿ ಟ್ವೀಟ್ ಈ ರೀತಿ ಇದೆ:
‘’ಓ ಮೈ ಗಾಡ್.. ಇದನ್ನ ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ನಿಮ್ಮೆಲ್ಲರಿಗೆ ಗೌರವ ಸಲ್ಲಿಸುವ ಸಲುವಾಗಿ ನಾನೂ ಹೋಗಿ ರಕ್ತದಾನ ಮಾಡುತ್ತೇನೆ. ನಿಮ್ಮೆಲ್ಲರಿಗೂ ಧನ್ಯವಾದಗಳು. ನೀವೆಲ್ಲರೂ ನಿಜವಾಗಿಯೂ ನನಗೆ ತುಂಬಾ ವಿಶೇಷವಾದ ಭಾವನೆ ಮೂಡಿಸಿದ್ದೀರಿ. ನಿಮ್ಮೆಲ್ಲರನ್ನೂ ನಾನು ಪ್ರೀತಿಸುತ್ತೇನೆ’’ ಎಂದು ನಟಿ ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಕೊಮ್ಮೇರಹಳ್ಳಿಯ ಜೀವಧಾರೆ ಟ್ರಸ್ಟ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ 40 ಮಂದಿ ಯುವಕರು ರಕ್ತದಾನ ಮಾಡುವ ಮೂಲಕ ನೆಚ್ಚಿನ ನಟಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮದಲ್ಲಿ ಸನ್ನಿ ಲಿಯೋನ್‌ ಅವರ ಬೃಹತ್‌ ಫ್ಲೆಕ್ಸ್‌ ಅಳವಡಿಕೆ ಮಾಡಿ ʼಅನಾಥ ಮಕ್ಕಳ ತಾಯಿ. ಅಭಿಮಾನಿಗಳ ದೇವತೆʼ ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ. ಜೊತೆಗೆ ಹುಟ್ಟುಹಬ್ಬದ ಕೇಕ್‌ ಕತ್ತರಿಸಿದ ಅಭಿಮಾನಿಗಳು ಸಾರ್ವಜನಿಕರಿಗೆ ಬಿರಿಯಾನಿ ಮತ್ತು ಸಿಹಿತಿಂಡಿಯನ್ನು ವಿತರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top