fbpx
ಸಮಾಚಾರ

ಆಕ್ಸೆಲ್ ಕಟ್ಟಾಗಿ ಅಡ್ಡಾದಿಡ್ಡಿ ಸಂಚರಿಸಿದ ಬಿಎಂಟಿಸಿ ಬಸ್

ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್ ಅಪಘಾತಗಳ ಪ್ರಕರಣಗಳು ತುಂಬಾನೇ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಬಿಎಂಟಿಸಿ ಬಸ್ ಒಂದು ಬೆಂಕಿಗೆ ಆಹುತಿಯಾಗಿದ್ದು ನಾವು ನೋಡಿದ್ದೇವೆ. ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ನಗರದ ಓಕಳಿಪುರಂ ಉಂಡೇರ್ಪಸ್ ನಲ್ಲಿ ಬಿಎಂಟಿಸಿ ಬಸ್ ಒಂದರ ಆಕ್ಸಲ್ ರಾಡ್ ತುಂಡಾಗಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸಿದೆ. ಕೆಎ-01-ಎಫ್-4659 ನಂಬರ್‌ನ ಬಸ್ ಮೆಜೆಸ್ಟಿಕ್ ಇಂದ ಪೀಣ್ಯ ಕಡೆಗೆ ಸಂಚರಿಸುತ್ತಿತ್ತು, ಓಕಳಿಪುರಂ ಅಂಡರ್ ಪಾಸ್ ಪ್ರವೇಶಿಸುತ್ತಿದ್ದಂತೆ ಬಸ್ ನ ಆಕ್ಸಲ್ ರಾಡ್ ತುಂಡಾಗಿದೆ. ಪರಿಣಾಮ ಬಸ್ ಅಡ್ಡಾದಿಡ್ಡಿ ಚಲಿಸಿ ಡಿವೈಡರ್ ಮೇಲೆ ಅತ್ತಿ ನಿಂತುಕೊಂಡಿದೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ವಾಗಿಲ್ಲ. ಚಾಲಕನ ಸಮಯಪ್ರಜ್ಞೆಯಿಂದ ಒಂದು ದೊಡ್ಡ ಅನಾಹುತ ತಪ್ಪಿದೆ. ಘಟನೆ ನಡೆದ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಮತ್ತು ಬಿಎಂಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top