fbpx
ಸಮಾಚಾರ

SSLCಯಲ್ಲಿ ಶೇ.99 ಅಂಕ ಪಡೆದ ‘ಗಟ್ಟಿಮೇಳ’, ‘ಡ್ರಾಮಾ ಜೂನಿಯರ್ಸ್’ ಖ್ಯಾತಿಯ ನಟಿ: ಯಾವ್ಯಾವ ಸಬ್ಜೆಕ್ಟ್ ಎಷ್ಟೆಷ್ಟು ಮಾರ್ಕ್ಸ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಡ್ರಾಮಾ ಜ್ಯೂನಿಯರ್ಸ್​’ ಮೂಲಕ ಖ್ಯಾತಿಯಾಗಿದ್ದ ಮಹತಿ ವೈಷ್ಣವಿ ಭಟ್ ಸದ್ಯ, ಧಾರಾವಾಹಿ ಕೆಲಸದಲ್ಲಿ ಅವರು ಬ್ಯುಸಿ ಇದ್ದಾರೆ.ಹೀಗಿದ್ದರೂ ಅವರು ಶಿಕ್ಷಣದ ಕಡೆಗೆ ಗಮನ ಹರಿಸುವುದನ್ನು ನಿಲ್ಲಿಸಿಲ್ಲ.. ಈ ನಟಿ ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದರು ನೆನ್ನೆ ಬಂದ ಫಲಿತಾಂಶದಲ್ಲಿ ನಟಿ ಪಾಸ್​ ಆಗಿದ್ದಾರೆ. ಅದೂ ಶೇ.99 ಅಂಕ ಗಳಿಸಿ ಅನ್ನೋದು ವಿಶೇಷ.

 

 

‘ಗಟ್ಟಿಮೇಳ’ ಖ್ಯಾತಿಯ ಮಹತಿ ವೈಷ್ಣವಿ ಭಟ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 619 ಅಂಕಗಳನ್ನು ಪಡೆದಿದ್ದಾರೆ. 99.04% ಪಡೆದಿದ್ದಾರೆ ನಟಿ ಮಹತಿ ವೈಷ್ಣವಿ ಭಟ್. ಕನ್ನಡದಲ್ಲಿ 124, ಇಂಗ್ಲೀಷ್ ಭಾಷೆಯಲ್ಲಿ 100, ಹಿಂದಿಯಲ್ಲಿ 99, ಗಣಿತದಲ್ಲಿ 100, ವಿಜ್ಞಾನದಲ್ಲಿ 97, ಸಮಾಜ ವಿಜ್ಞಾನದಲ್ಲಿ 99 ಅಂಕಗಳನ್ನು ಗಳಿಸಿದ್ದಾರೆ ಮಹತಿ ವೈಷ್ಣವಿ ಭಟ್. ಈ ಬಗ್ಗೆ ಮಹತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮಹತಿ, ‘ಫಲಿತಾಂಶ ಬಂದಿದೆ. ನಿಜಕ್ಕೂ ಸಂತೋಷವಾಗಿದೆ. ಶೇ. 99.04 ಆಗಿದೆ. ಅಮ್ಮ, ಅಪ್ಪ, ಅಣ್ಣ, ಅಮ್ಮಮ್ಮ, ತಾತಯ್ಯ ನಿಮ್ಮ ಬೆಂಬಲಕ್ಕೆ ಧನ್ಯವಾದ. ನನ್ನನ್ನು ಬೆಂಬಲಿಸಿದ ಶಿಕ್ಷಕರಿಗೆ ಧನ್ಯವಾದ. ‘ಗಟ್ಟಿಮೇಳ’ ತಂಡ ಮತ್ತು ಜೀ ಅವರು ನೀಡಿದ ಬೆಂಬಲಕ್ಕಾಗಿ ತುಂಬ ಧನ್ಯವಾದಗಳು. ಲವ್​ ಯು ಆಲ್​. ನೀವು ಇಲ್ಲದೆ ಇದು ಅಸಾಧ್ಯ. ನನ್ನ ಇನ್​ಸ್ಟಾ ಕುಟುಂಬಕ್ಕೆ ವಿಶೇಷ ಥ್ಯಾಂಕ್ಸ್​ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top