fbpx
ಸಮಾಚಾರ

ತೆಲುಗು ನಟ ಆದಿ ಪಿನಿಶೆಟ್ಟಿ ಜೊತೆ ಸಪ್ತಪದಿ ತುಳಿದ ನಟಿ ನಿಕ್ಕಿ ಗಲ್ರಾನಿ

ನಟಿ ಸಂಜನಾ ಗಲ್ರಾನಿ ಅವರ ಸಹೋದರಿ ನಟಿ ನಿಕ್ಕಿ ಗಲ್ರಾನಿ ಅವರು ತೆಲುಗು ನಟ, ಬಹುಕಾಲದ ಗೆಳೆಯ ಆದಿ ಪಿನಿಶೆಟ್ಟಿ ಅವರೊಟ್ಟಿಗೆ ಚೆನ್ನೈನಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಂದ್ರ ಸಂಪ್ರದಾಯದ ಪ್ರಕಾರ ವಿವಾಹವಾಗಿರುವ ಈ ಜೋಡಿಯ ಅದ್ದೂರಿ ಮದುವೆಯ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

 

 

ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಬುಧವಾರ (ಮೇ 18) ಚೆನ್ನೈನಲ್ಲಿ ಮದುವೆಯಾಗಿದ್ದಾರೆ. ಈ ವಿವಾಹ ಕಾರ್ಯಕ್ರಮಕ್ಕೆ ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತರು ಮಾತ್ರವೇ ಭಾಗವಹಿಸಿದ್ದರು. ತೀರ ಖಾಸಗಿಯಾಗಿ ನಡೆದ ಈ ಮದುವೆ ಅದ್ದೂರಿಯಾಗಿ ನಡೆದಿದೆ ಎಂದು ಅವರು ಆಪ್ತರು ಹೇಳಿದ್ದಾರೆ.

ನಿಕ್ಕಿ ಮತ್ತು ಆದಿ ಈ ಮೊದಲಿನಿಂದಲೂ ಡೇಟಿಂಗ್ ಮಾಡುತ್ತಿದ್ದರು. ಆದರೆ, ಈ ವಿಚಾರವನ್ನು ಒಪ್ಪಿಕೊಂಡಿರಲಿಲ್ಲ. ಅವರು ಆಗಾಗ ಒಟ್ಟಾಗಿ ಸುತ್ತಾಡುತ್ತಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು. ಮಾರ್ಚ್​ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹೊಸ ಜೀವನ ಆರಂಭಿಸಲು ಮುನ್ನುಡಿ ಬರೆದಿದ್ದರು. ಇದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಈಗ ಸದ್ದಿಲ್ಲದೆ ಇಬ್ಬರೂ ಹಸೆಮಣೆ ಏರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top