fbpx
ಸಮಾಚಾರ

ಯುವ ನಟಿ ಚೇತನಾ ಸಾವಿನ ಪ್ರಕರಣ: ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?

ಚಿತ್ರರಂಗದಲ್ಲಿ ಯಶಸ್ಸು ಗಳಿಸಬೇಕು ಎಂಬ ಕನಸು ಹೊತ್ತಿದ್ದ 22ರ ಹರೆಯದ ನಟಿ ಚೇತನಾ ರಾಜ್ ನೆನ್ನೆ ನಿಧನರಾಗಿದ್ದು ದುಃಖದ ಸಂಗತಿ. ಅವರು ಫ್ಯಾಟ್​ ಸರ್ಜರಿ ಮಾಡಿಸಲು ಹೋಗಿ ಚಿಕಿತ್ಸೆ ಫಲಕಾರಿಯಾಗದೆ ಶಸ್ತ್ರಚಿಕಿತ್ಸೆಯ ವೈಪಲ್ಯದದಿಂದ ಸಾವನ್ನಪ್ಪಿದ್ದರು. ಈ ಘಟನೆ ಕುರಿತು ನಟಿ ಪ್ರಿಯಾಂಕಾ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ

‘ಚೇತನಾ ನಿಧನದ ಸುದ್ದಿ ನನಗೂ ಶಾಕಿಂಗ್‌ ಆಗಿತ್ತು. ನಟಿಯರ ದೇಹದ ಬಗ್ಗೆ ಸೋಷಿಯಲ್‌ ಮೀಡಿಯಾಗಳಲ್ಲೂ ಮನಸ್ಸಿಗೆ ಬಂದಂತೆ ಕಮೆಂಟ್‌ ಮಾಡುತ್ತಾರೆ. ಇದು ನಟಿಯರ ಆತ್ಮವಿಶ್ವಾಸ ತಗ್ಗಿಸುತ್ತದೆ. ನನ್ನ ದೇಹ ಚೆನ್ನಾಗಿಲ್ಲ. ಸರ್ಜರಿ ಮಾಡಿಸ್ಕೊಳ್ಳಬೇಕು ಎಂಬಂಥಾ ಯೋಚನೆ ಬರುತ್ತವೆ. ಚಿಕ್ಕ ವಯಸ್ಸಿನ ನಟಿಯರು ಈ ಚಿಕಿತ್ಸೆ, ಸರ್ಜರಿಗಳ ಸೈಡ್‌ ಎಫೆಕ್ಟ್ಗಳ ಬಗ್ಗೆ ಯೋಚಿಸದೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದು ಕೆಲವೊಮ್ಮೆ ಅವರ ಪ್ರಾಣಕ್ಕೇ ಅಪಾಯ ತರುತ್ತದೆ. ಎಲ್ಲ ನಟಿಯರಲ್ಲಿ ನಾನು ಹೇಳೋದು, ದಯಮಾಡಿ ಸೋಷಿಯಲ್‌ ಮೀಡಿಯಾ ಕಮೆಂಟ್ಸ್‌, ನಿಮ್ಮ ದೇಹದ ಬಗ್ಗೆ ಇತರರು ಮಾಡುವ ಕಮೆಂಟ್ಸ್‌ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪ್ರತಿಭೆಯ ಮೂಲಕ ಮುಂದೆ ಬನ್ನಿ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಹೊಸ ಕಲಾವಿದರು ಸೈಜ್ ಜೀರೋ ಬಗ್ಗೆ ಬಹಳ ತಲೆಕೆಡಿಸಿಕೊಳ್ಳಬಾರದು. ಸಿನಿಮಾ ಮತ್ತು ಸೀರಿಯಲ್ ಮೇಕರ್ಸ್ ಬಾಡಿ ಬಗ್ಗೆ ಕಾಮೆಂಟ್ ಮಾಡಬಾರದು. ಆದರೆ ಸಿನಿಮಾರಂಗದಲ್ಲಿ ಬಹಳಷ್ಟು ಜನರಿಗೆ ಈ ರೀತಿಯ ತೊಂದರೆ ಆಗುತ್ತಿದೆ. ಸೋಷಿಯಲ್ ಮೀಡಿಯಾ ಕಾಮೆಂಟ್‌ಗೆ ಬಹಳಷ್ಟು ಜನ ತಲೆಕಡಿಸಿಕೊಳ್ತಾರೆ ಅದನ್ನು ಮೊದಲು ಬಿಡಬೇಕು ಎಂದು ಪ್ರಿಯಾಂಕ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top