fbpx
ಸಮಾಚಾರ

ಅತ್ಯಾಚಾರ ಪ್ರಕರಣ; ನಟ ವಿಜಯ್ ಬಾಬು ಪಾಸ್‌ಪೋರ್ಟ್ ಜಪ್ತಿ

ಮಾಜಿ ಸಹೋದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕೇರಳದ ನಟ-ನಿರ್ಮಾಪಕ ವಿಜಯ್ ಬಾಬು ಅವರ ಪಾಸ್‌ಪೋರ್ಟನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಕೊಚ್ಚಿ ನಗರ ಪೊಲೀಸರು ಕೇಂದ್ರಕ್ಕೆ ಸಲ್ಲಿಸಿದ ಮನವಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

 

 

ವಿಜಯ್ ಬಾಬು ಹೆಸರಿನಲ್ಲಿರುವ ಎಲ್ಲಾ ದೇಶದ ವೀಸಾಗಳು ಈಗ ಅಮಾನ್ಯವಾಗಿದೆ. ಅವರು ಬೇರೆ ದೇಶಕ್ಕೆ ಹೋಗುವ ಸೂಚನೆಯಿದ್ದು, ವಿಜಯ್ ವಿರುದ್ಧ ನ್ಯಾಯಾಲಯದ ವಾರೆಂಟ್ ಇದೆ ಎಂದು ತಿಳಿದು ಬಂದಿದೆ. ಮಲಯಾಳಂ ನಟ ವಿಜಯ್ ಬಾಬು ಪಾಸ್‌ಪೋರ್ಟ್ ಜಪ್ತಿಯ ಹಿನ್ನೆಲೆ ಮೇ.24 ರಂದು ವಿಜಯ್ ಬಾಬು ಕಚೇರಿಗೆ ಹಾಜರಾಗದಿದ್ದರೆ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಮಲಯಾಳಂ ನಟ ಹಾಗೂ ನಿರ್ದೇಶಕ ವಿಜಯ್ ಬಾಬು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಸಿನಿಮಾಗಳಲ್ಲಿ ನಟಿಸುವ ಅವಕಾಶ ನೀಡುವುದಾಗಿ ಭರವಸೆ ನೀಡಿ ಎರನಾಕುಲಂ ಫ್ಲ್ಯಾಟ್ ಒಂದರಲ್ಲಿ ಹಲವು ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದು ಯುವತಿ ಒಬ್ಬರು ದೂರು ದಾಖಲಾಗಿದೆ. ಕೋಯಿಕ್ಕೋಡ್ ನಿವಾಸಿಯಾಗಿರುವ ಸಂತ್ರಸ್ತ ಯುವತಿ ಎರ್ನಾಕುಲಂ ಸೌತ್ ಪೊಲೀಸರ್ ಸ್ಟೇಷನ್ ನಲ್ಲಿ ಏಪ್ರಿಲ್ 22ರಂದು ದೂರು ನೀಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top