fbpx
ಸಮಾಚಾರ

ನಾಯಿಯನ್ನು ಕೇದಾರನಾಥಕ್ಕೆ ಕರೆದೊಯ್ದಿದ್ದ ವ್ಯಕ್ತಿಯ ವಿರುದ್ಧ ಕೇಸ್ ದಾಖಲು

ಕೇದಾರನಾಥ ದೇಗುಲದಲ್ಲಿರುವ ವಿಗ್ರಹವನ್ನು ನಾಯಿಯಿಂದ ಸ್ಪರ್ಶಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನೋಯ್ಡಾದ ವ್ಯಕ್ತಿಯ ವಿರುದ್ಧ ದೇಗುಲ ಸಮಿತಿ ಎಫ್‍ಐಆರ್ ದಾಖಲಿಸಿದೆ.

ವ್ಲಾಗರ್ ಆಗಿರುವ ನೋಯ್ಡಾದ ನಿವಾಸಿ 33 ವರ್ಷದ ವಿಕಾಶ್ ತ್ಯಾಗಿ ಎಂಬವರೇ ಹೀಗೆ ಶ್ವಾನವನ್ನು ಕರೆದೊಯ್ದು ಸಂಕಷ್ಟಕ್ಕೀಡಾದವರು. ದಿ ಫೆಡರಲ್ ವರದಿಯ ಪ್ರಕಾರ ವಿಕಾಶ್ ತ್ಯಾಗಿ ಅವರು ತಮ್ಮ ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ತನ್ನ ಮುದ್ದಿನ ನಾಯಿಯನ್ನು ಪವಿತ್ರ ದೇಗುಲಕ್ಕೆ ಕರೆದೊಯ್ದಿದ್ದರು. ದೇವಸ್ಥಾನದಲ್ಲಿ ಕೈ ಮಗಿದು ಪ್ರಾರ್ಥನೆ ಸಲ್ಲಿಸಿದ ಅವರು ಶ್ವಾನವನ್ನು ಎತ್ತಿಕೊಂಡು ಅದೂ ಕೈ ಮಗಿಯುವಂತೆ ಮಾಡಿದ್ದಾರೆ. ಅದರ ಎರಡು ಕೈಗಳನ್ನು ಎತ್ತಿ ದೇಗುಲದ ಮುಂದಿರುವ ನಂದಿ ವಿಗ್ರಹದ ಮುಂದೆ ಅದು ಪ್ರಾರ್ಥನೆ ಮಾಡುವಂತೆ ಮಾಡುತ್ತಾರೆ.

 

 

ಅಲ್ಲದೇ ಅಲ್ಲಿದ್ದವರೊಬ್ಬರು ಅದರ ಹಣೆಗೂ ತಿಲಕವಿಡುತ್ತಾರೆ. ಆದರೆ ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಾತನಾಡಿದ ಬದರಿನಾಥ್ ಕೆದರನಾಥ್ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್ ಮಾತನಾಡಿ, ಕೋಟಿಗಟ್ಟಲೆ ಜನರು ಬಾಬಾ ಕೇದಾರನಾಥದಲ್ಲಿ ನಂಬಿಕೆ ಹೊಂದಿದ್ದಾರೆ. ಯೂಟ್ಯೂಬರ್ ವಿಕಾಶ್ ತ್ಯಾಗಿಯ ಇಂತಹ ಚಟುವಟಿಕೆಗಳಿಂದ ಅನೇಕರ ಭಾವನೆಗಳಿಗೆ ಘಾಸಿಯಾಗಿದೆ. ಈ ಜನರಿಗೆ ಯಾವುದೇ ಭಕ್ತಿ ಇಲ್ಲ, ಅವರು ಹಿನ್ನೆಲೆಯಲ್ಲಿ ಬಾಲಿವುಡ್ ಹಾಡುಗಳನ್ನು ಪ್ಲೇ ಮಾಡುವ ರೀಲ್‍ಗಳು ಮತ್ತು ವೀಡಿಯೋಗಳನ್ನು ಚಿತ್ರೀಕರಿಸಲು ಮಾತ್ರ ಇಲ್ಲಿಗೆ ಬರುತ್ತಾರೆ. ಬಾಬಾ ಕೇದಾರನಾಥನ ಆಶೀರ್ವಾದ ಪಡೆಯಲು ಬರುವ ಯಾತ್ರಾರ್ಥಿಗಳಿಗೆ ಇದು ಅಡ್ಡಿಯಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top