fbpx
ಸಮಾಚಾರ

ಭಾಷಾ ವಾರ್​ಗೆ ಮೋದಿ ಎಂಟ್ರಿ: ಹೇಳಿದ್ದೇನು ಕೇಳಿ

ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ಅವರ ಭಾಷಾ ವಿವಾದ ಟ್ವಿಟ್ಟರ್ ನಲ್ಲಿ ಸಕತ್ ಸೌಂಡ್ ಮಾಡಿತ್ತು. ಇದಕ್ಕೆ ಹಲವು ರಾಜಕಾರಣಿಗಳು ಮತ್ತು ಸೆಲೆಬ್ರೆಟಿಗಳು ಕಿಚ್ಚನ ಬೆಂಬಲಕ್ಕೆ ನಿಂತಿದ್ದು ನಮಗೆಲ್ಲ ಗೊತ್ತು. ಇದೀಗ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಂಟ್ರಿ ಆಗಿ ಪ್ರಾದೇಶಿಕ ಭಾಷೆಯ ಬಗ್ಗೆ ಮಾತನಾಡಿದ್ದಾರೆ.

ಕಳೆದ ಕೆಲವು ತಿಂಗಳಿಂದ ಭಾಷೆಯ ಆಧಾರದಮೇಲೆ ವಿವಾದಗಳನ್ನು ಹುಟ್ಟುಹಾಕುತ್ತಿರುವುದನ್ನು ನಾನು ನೋಡಿದ್ದೇನೆ. ಬಿಜಿಪಿಯು ಪ್ರತಿಯೊಂದು ಭಾಷೆಯಲ್ಲೂ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ನೋಡುತ್ತದೆ. ಅವುಗಳನ್ನು ಪೂಜಿಸಲು ಯೋಗ್ಯವೆಂದು ಭಾವಿಸುತ್ತದೆ. NEP ಅಡಿಯಲ್ಲಿ ದೇಶದ ಪ್ರಾದೇಶಿಕ ಭಾಷೆಗೆ ಪ್ರಾಮುಖ್ಯತೆಯನ್ನು ನೀಡಿದ್ದೇವೆ ಎಂದು ಮೋದಿ ಹೇಳಿದರು.

ಬಿಜೆಪಿಯು ಭಾರತೀಯ ಭಾಷೆಯನ್ನು ಭಾರತದ ಆತ್ಮ ಎಂದು ಪರಿಗಣಿಸಿದೆ. ಇದು ರಾಷ್ಟ್ರದ ಉತ್ತಮ ಭವಿಷ್ಯದ ಕೊಂಡಿ ಎಂದು ಹೇಳಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವುದು ಪ್ರತಿಯೊಂದು ಪ್ರಾದೇಶಿಕ ಭಾಷೆಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕುವ ಪ್ರಯತ್ನಗಳ ವಿರುದ್ಧ ಮೋದಿ ಎಚ್ಚರಿಕೆಯನ್ನು ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top