fbpx
ಸಮಾಚಾರ

ಐರೆನ್ ಲೆಗ್ ಅಂದವರಿಗೆ ಖಡಕ್ ತಿರುಗೇಟು ಕೊಟ್ಟ ಪೂಜಾ: ಟೀಕಿಸಿದವರಿಗೆ ಕರಾವಳಿ ಬೆಡಗಿ ಹೇಳಿದ್ದೇನು ಗೊತ್ತಾ?

ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ನಟಿಯರಲ್ಲಿ ಪೂಜಾ ಹೆಗಡೆ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗುವುದಿಲ್ಲ ಉತ್ತರದ ಬಾಲಿವುಡ್ ನಿಂದ ಹಿಡಿದು ದಕ್ಷಿಣದ ಕಾಲಿವುಡ್ ಟಾಲಿವುಡ್ ತನಕ ಎಲ್ಲಾ ಸ್ಟಾರ್ ನಟರ ಜೊತೆ ಪೂಜೆಗೆ ನಟಿಸಿ ಮಿಂಚಿದ್ದಾರೆ ಆದರೆ ಅದೇಕೋ ಇತ್ತೀಚಿಗೆ ಪೂಜಾ ಹೆಗಡೆ ನಟಿಸಿರುವ ಯಾವ ಚಿತ್ರಗಳು ಕೂಡ ಬಾಕ್ಸಾಫೀಸ್ ನಲ್ಲಿ ಯಶಸ್ಸು ಕಾಣುತ್ತಿಲ್ಲ

ರಾಧೆ ಶ್ಯಾಮ್, ಬೀಸ್ಟ್, ಆಚಾರ್ಯ ಸೋಲಿಗೆ ಈ ನಟಿನೇ ಕಾರಣ, ಐರೆನ್ ಲೆಗ್ ನಟಿ ಈಕೆ ಅಂತಾ ಅಂದವರಿಗೆ ಪೂಜಾ ಹೆಗ್ಡೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿಗೆ ಟೀಕಿಸಿದವರಿಗೆ ಪೂಜಾ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಐರೆನ್ ಲೆಗ್ ಅಂತಾ ಕರೆದವರಿಗೆ ಬೊಟ್ಟಬೊಮ್ಮ ಸುಂದರಿ ಪೂಜಾ ತಿರುಗೇಟು ಕೊಟ್ಟಿದ್ದಾರೆ.

ಇದಕ್ಕೆ ಇಷ್ಟು ದಿನ ಸುಮ್ಮನಿದ್ದ ಪೂಜಾ, ಇದೀಗ ಮೌನ ಮುರಿದಿದ್ದು, ಪ್ರತಿಕ್ರಿಯೆ ನೀಡಿದ್ದಾರೆ. ಸೋಲು ಮತ್ತು ಗೆಲವು ಜೀವನದ ಒಂದು ಭಾಗ. ಬ್ಯಾಕ್ ಟು ಬ್ಯಾಕ್ 6 ಸಿನಿಮಾಗಳನ್ನು ಹಿಟ್ ಕೊಟ್ಟಿದ್ದೇನೆ. ಈ ಬಗ್ಗೆ ನನಗೆ ಖುಷಿಯಿದೆ ಎಂದಿದ್ದಾರೆ.

ನಮ್ಮ ನಟನೆಯನ್ನ ನೋಡಿ ಮುಂದಿನ ಚಿತ್ರವನ್ನ ಆಫರ್ ಮಾಡುತ್ತಾರೆ. ಎಂಡ್ ಆಫ್ ದಿ ಡೇ ನಾವು ಎಂಟರ್‌ಟೈನರ್ಸ್. ಜನರ ಮುಖದಲ್ಲಿ ನಗು ಅರಳಿಸೋದಷ್ಟೇ ನಮ್ಮ ಕರ್ತವ್ಯ ಎನ್ನುವ ಮೂಲಕ ಟೀಕೆಗಳ ಬಗ್ಗೆ ನಾನು ತಲೆ ಕೆಡೆಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top