fbpx
ಸಮಾಚಾರ

2008ರಿಂದ ಇಲ್ಲಿಯವರೆಗೆ RCB ಒಟ್ಟು ಎಷ್ಟು ಬಾರಿ ಪ್ಲೇ ಆಫ್ ಪ್ರವೇಶಿಸಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ IPL ಟೂರ್ನಿಯ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ದೆಹಲಿ ಕ್ಯಾಪಿಟಲ್ಸ್ ಸೋಲು ಕಂಡಿತು. ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದಿದ್ದ ಮುಂಬೈ ತನ್ನ ಜೊತೆಗೆ ದೆಹಲಿಯನ್ನೂ ಸೀಸನ್‌ನಿಂದ ಹೊರಗೆಳೆಯಿತು. ಡೆಲ್ಲಿ ತಂಡ ಸೋಲುವ ಮೂಲಕ ನಮ್ಮ RCB ತಂಡ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿತು.

ಮುಂಬೈ ವಿರುದ್ಧ ಡೆಲ್ಲಿ ಸೋಲುವುದು ಆರ್​ಸಿಬಿಗೆ ಬಹುಮುಖ್ಯವಾಗಿತ್ತು. ಮುಂಬೈ ಗೆದ್ದರಷ್ಟೆ ಫಾಪ್ ಪಡೆಗೆ ಪ್ಲೇ ಆಫ್​ಗೇರುವ ಅವಕಾಶವಿತ್ತು. ಅಂದುಕೊಂಡಂತೆ ರೋಹಿತ್ ಪಡೆ ಜಯ ಸಾಧಿಸಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಹೊರಬಿದ್ದರೆ ಆರ್​ಸಿಬಿ 16 ಅಂಕದೊಂದಿಗೆ ನಾಲ್ಕನೆ ಸ್ಥಾನಕ್ಕೇರಿದೆ.

ಈ ಬಾರಿ ಪ್ಲೇಆಫ್ ಪ್ರವೇಶಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಂಟನೇ ಬಾರಿಗೆ ಪ್ಲೇ ಆಫ್ ಗೆ ಲಗ್ಗೆಯಿಟ್ಟಂತಾಗಿದೆ. ಆದರೆ ಎಂಟು ಬಾರಿ ಪ್ಲೇ ಆಫ್‌ ಪ್ರವೇಶಿಸಿದ್ದರೂ ಸಹ ಕಪ್‌ ಗೆಲ್ಲುವಲ್ಲಿ ವಿಫಲವಾಗಿದೆ. ಈ ಬಾರಿಯೂ ಐಪಿಎಲ್‌ನ ಪ್ಲೇ ಆಫ್‌ ಹಂತಕ್ಕೆ ಪ್ರವೇಶ ಪಡೆದಿರುವ ಆರ್‌ಸಿಬಿ ಕಪ್‌ ಗೆಲ್ಲುತ್ತಾ ಎಂಬುದನ್ನು ಕಾದುನೋಡಬೇಕಿದೆ.

೨ಅನಿಲ್ ಕುಂಬ್ಳೆ ನಾಯಕತ್ವದಲ್ಲಿ 2009 ಮತ್ತು 2010ರಲ್ಲಿ, ಡ್ಯಾನಿಯಲ್ ವೆಟ್ಟೋರಿ ನಾಯಕತ್ವದಲ್ಲಿ 2011ರಲ್ಲಿ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2015, 2016 ,2020 ,2021 ರಲ್ಲಿ ಪ್ಲೇ ಆಫ್ ಪ್ರವೇಶ ಮಾಡಿತ್ತು. ಈಗ ಫಾಫ್ ಡುಪ್ಲೆಸಿ ನಾಯಕತ್ವದಲ್ಲಿ 2022 ರ ಆವೃತ್ತಿಯಲ್ಲಿಯೂ ಪ್ಲೇ ಆಫ್ ಪ್ರವೇಶ ಮಾಡಿದೆ…. ಅಂದಹಾಗೆ 2009, 2011,ಮತ್ತು 2016 ರ ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿತ್ತು ಆದರೆ ಆ ಯಾವ ಬಾರಿಯೂ ಟ್ರೋಫಿ ಗೆಲ್ಲಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top