fbpx
ಸಮಾಚಾರ

ಪಂದ್ಯ ಆರಂಭಕ್ಕೂ ಮುನ್ನ RCB ನಾಯಕನಿಂದ ಬಂದಿದ್ದ ಮೆಸೇಜ್ ರಿವೀಲ್ ಮಾಡಿದ ಟಿಮ್ ಡೇವಿಡ್​ಗೆ: ಏನಿತ್ತು ಆ ಮೆಸೇಜ್ ನಲ್ಲಿ ಗೊತ್ತೇ?

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ IPL ಟೂರ್ನಿಯ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ದೆಹಲಿ ಕ್ಯಾಪಿಟಲ್ಸ್ ಸೋಲು ಕಂಡಿತು. ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದಿದ್ದ ಮುಂಬೈ ತನ್ನ ಜೊತೆಗೆ ದೆಹಲಿಯನ್ನೂ ಸೀಸನ್‌ನಿಂದ ಹೊರಗೆಳೆಯಿತು. ಡೆಲ್ಲಿ ತಂಡ ಸೋಲುವ ಮೂಲಕ ನಮ್ಮ RCB ತಂಡ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿತು.

ಮುಂಬೈ ವಿರುದ್ಧ ಡೆಲ್ಲಿ ಸೋಲುವುದು ಆರ್​ಸಿಬಿಗೆ ಬಹುಮುಖ್ಯವಾಗಿತ್ತು. ಮುಂಬೈ ಗೆದ್ದರಷ್ಟೆ ಫಾಪ್ ಪಡೆಗೆ ಪ್ಲೇ ಆಫ್​ಗೇರುವ ಅವಕಾಶವಿತ್ತು. ಅಂದುಕೊಂಡಂತೆ ರೋಹಿತ್ ಪಡೆ ಜಯ ಸಾಧಿಸಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಹೊರಬಿದ್ದರೆ ಆರ್​ಸಿಬಿ 16 ಅಂಕದೊಂದಿಗೆ ನಾಲ್ಕನೆ ಸ್ಥಾನಕ್ಕೇರಿದೆ.

 

 

ಮುಂಬೈ ತಂಡ ಸೋಲಿನ ದವಡೆಯಲ್ಲಿದ್ದಾಗ ಮುಂಬೈ ತಂಡಕ್ಕೆ ಆಸರೆಯಾಗಿ ಬಂದವರು ಟಿಮ್ ಡೇವಿಡ್.. ಕಳೆದೆದ ಆವೃತ್ತಿಯಲ್ಲಿ RCB ಪರವಾಗಿ ಆಡಿದ್ದ ಟಿಮ್ ಡೇವಿಡ್ ಈ ಬಾರಿಯ ಮೆಗಾ ಹರಾಜಿನಲ್ಲಿ ಮುಂಬೈ ತಂಡದ ಪಾಲಾಗಿದ್ದರು.. ಇದೀಗ ನೆನ್ನೆಯ ಪಂದ್ಯದಲ್ಲಿ RCB ಅಭಿಮಾನಿಗಳ ಹೃದಯ ಗೆದ್ದಿದ್ದಾರೆ ಟಿಮ್ ಡೇವಿಡ್. ಕೇವಲ 11 ಎಸೆಗಳಲ್ಲಿ 2 ಫೋರ್ ಮತ್ತು 4 ಭರ್ಜರಿ ಸಿಕ್ಸರ್ ಸಿಡಿಸಿ ಡೇವಿಡ್ 34 ರನ್ ಚಚ್ಚಿದ್ದರು,,.

ಪಂದ್ಯ ಮುಗಿದ ಬಳಿಕ ಮಾತನಾಡಿದ ಡೇವಿಡ್ ಪಂದ್ಯ ಆರಂಭಕ್ಕೂ ಮುನ್ನ ಆರ್​ಸಿಬಿ ನಾಯಕನಿಂದ ನನಗೆ ಮೆಸೇಜ್ ಬಂದಿತ್ತು ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. “ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಅವರಿಂದ ಬೆಳಗ್ಗೆ ಒಂದು ಮೆಸೇಜ್ ಬಂದಿತ್ತು. ಅದೊಂದು ಫೋಟೋ. ಅದರಲ್ಲಿ ಮ್ಯಾಕ್ಸ್ ವೆಲ್, ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೇಸಿ ಮುಂಬೈ ಇಂಡಿಯನ್ಸ್ ಜೆರ್ಸಿ ತೊಟ್ಟಿದ್ದಂತೆ ಎಡಿಟ್ ಮಾಡಲಾಗಿತ್ತು. ನಾನು ಮತ್ತೆ ಅದನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡುತ್ತೇನೆ,” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top