fbpx
ಸಮಾಚಾರ

ಪುಟ್ಟ ಕಂದಮ್ಮಗಳಿಗೆ ವಿಶೇಷ ಸಂದೇಶ ನೀಡಿದ ಮೇಘನಾ ರಾಜ್: ಏನದು?

ನಟಿ ಮೇಘನಾ ರಾಜ್ ಪತಿಯ ಅಗಲಿಕೆಯ ನೋವಿನಿಂದ ಹೊರಬಂದು ಸಿನಿಮಾ, ರಿಯಾಲಿಟಿ ಷೋ ಹೀಗೆ ಹತ್ತು ಹಲವಾರು ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಬ್ಯುಸಿ ಷೆಡ್ಯೂಲ್ ನಲ್ಲೂ ತಮ್ಮ ಅಭಿಮಾನಿಗಳಿಗೆ ಒಂದು ವಿಶೇಷ ಸಂದೇಶವನ್ನು ತಿಳಿಸಿದ್ದಾರೆ.

ಮೇಘನಾ ರಾಜ್ ಅವರಿಗೆ ಚಿರು ಅಗಲಿಕೆಯ ನೋವನ್ನು ಕಡಿಮೆ ಗೊಳಿಸಿದ್ದು ಅವರ ಮುದ್ದಾದ ಮಗ ರಾಯನ್ ರಾಜ್. ಇದೀಗ ಮೇಘನಾ ತಮ್ಮ ಮುದ್ದಾದ ಮಗನ ವಿಡಿಯೋ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪೋಷಕರಿಗೆ ಒಂದು ಮಹತ್ವದ ಸಂದೇಶವನ್ನು ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ಇಲೆಕ್ಟ್ರಾನಿಕ್ ವಸ್ತುಗಳಿಗೆ ಅತಿ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ಮೊಬೈಲ್ ಗಳಿಗೆ ಹೆಚ್ಚು ಅಟ್ರಾಕ್ಟ್ ಆಗುತ್ತಿದ್ದಾರೆ. ಹೀಗಾಗಿ ಮಕ್ಕಳು ಹೊರಗಿನ ಪ್ರಪಂಚದ ಜೊತೆ ಬೆರೆಯೋದು ಕಮ್ಮಿ ಆಗುತ್ತಿದೆ. ಹೀಗಾಗಿ ಮೇಘನಾ ರಾಜ್ ತಮ್ಮ ಮಗ ಹೊರಗಿನ ಜನರ ಜೊತೆ ಆಟವಾಡುತ್ತಿರುವ ವಿಡಿಯೋ ವೊಂದನ್ನು ಅಪ್ಲೋಡ್ ಮಾಡಿ ಮೊಬೈಲ್ ಬಿಡಿ ಮೈದಾನಕ್ಕೆ ಬನ್ನಿ ಅಂತಾ ಸೋಷಿಯಲ್ ಮೀಡಿಯಾ ಸಂದೇಶ ನೀಡಿದ್ದಾರೆ.

 

 

View this post on Instagram

 

A post shared by Meghana Raj Sarja (@megsraj)

 

ಸ್ಟಾರ್ ಗಳ ಮಕ್ಕಳು ಎಂದರೆ ಕೇವಲ ನಾಲ್ಕು ಗೋಡೆಗಳ ಮದ್ಯೆ ಬದುಕೋದು ಎಂಬ ಅರ್ಥವಲ್ಲ. ಈಗಿಂದಲೇ ನನ್ನ ಮಗ ಹೊರಗಿನ ಪ್ರಪಂಚದ ಜನರ ಜೊತೆ ಬೆರೆಯೋದನ್ನು ಕಲಿಸುತ್ತಿದ್ದೇನೆ. ಇದೇ ರೀತಿ ನಾನು ಮತ್ತು ಚಿರು ಬಾಲ್ಯದಲ್ಲಿ ಬೆಳೆದಿದ್ವಿ. ಅದರಂತೆ ನಮ್ಮ ಮಗ ರಾಯನ್ ಕೂಡ ಹೊರಗಿನ ಜನರ ಜೊತೆ ಬೆರೆತು ಆಟ ವಾಡುತ್ತಿದಾನೆ. ರಾಯನ್ ಆಟ ವಾಡುತ್ತಿರುವ ವಿಡಿಯೋ ಶೇರ್ ಮಾಡಿ ಮೊಬೈಲ್ ಬಿಡಿ ಮೈದಾನಕ್ಕೆ ಬನ್ನಿ ಎಂಬ ಸಂದೇಶವನ್ನು ಮೇಘನಾ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top