ಟೀಸರ್ ಹಾಗೂ ಪೋಸ್ಟರ್ ಮೂಲಕ ಗಮನ ಸೆಳೆದ ‘ವಿಕ್ರಾಂತ್ ರೋಣ’ ಸಿನಿಮಾದ ‘ರಾ ರಾ ರಕ್ಕಮ್ಮ..’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಇದು ಅವರ ಫ್ಯಾನ್ಸ್ಗೆ ಸಖತ್ ಇಷ್ಟವಾಗಿದೆ. ಕಿಕ್ ಕೊಡುವ ರೀತಿಯಲ್ಲಿ ಈ ಹಾಡನ್ನು ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
3 ನಿಮಿಷ 43 ಸೆಕೆಂಡುಗಳ ಗಡಂಗ್ ರಕ್ಕಮ್ಮ..ರಾ…ರಾ ಹಾಡಿನಲ್ಲಿ ಜಾಕ್ವೆಲಿನ್, ಕಿಚ್ಚ ಸುದೀಪ್ ಜತೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದು, ಹಾಡಿನ ನಡುವೆ ಸಿನಿಮಾ ಚಿತ್ರೀಕರಣದ ತುಣುಕುಗಳನ್ನು ತೋರಿಸಲಾಗಿದೆ. ಬಿ.ಅಜನೀಶ್ ಲೋಕನಾಥ್ ಸಂಗೀತ ಕೇಳುಗರನ್ನು ಕುಂತಲ್ಲೇ ಕುಣಿಸಿದೆ. ಅನೂಪ್ ಭಂಡಾರಿ ಸಾಹಿತ್ಯ ಈ ಹಾಡಿಗಿದ್ದು, ಜಾನಿ ಮಾಸ್ಟರ್ ಕಲಾವಿದರಿಂದ ಹೆಜ್ಜೆ ಹಾಕಿಸಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ಕೈಚಳಕ ಈ ಸಿನಿಮಾಗಿದೆ. ಹಾಡಿನ ಸಾಹಿತ್ಯ ಹಾಗೂ ಸಂಗೀತಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ತೆರೆಗೆ ಬರುತ್ತಿದೆ. ಸದ್ಯ, ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಪಾತ್ರದ ಹೆಸರು ಗಡಂಗ್ ರಕ್ಕಮ್ಮ. ಈ ಹೆಸರನ್ನೇ ಬಳಸಿಕೊಂಡು‘ರಾ ರಾ ರಕ್ಕಮ್ಮ..’ ಎಂಬ ಸ್ಪೆಷಲ್ ಸಾಂಗ್ ಮಾಡಲಾಗಿದೆ. ಈ ಹಾಡಿನ ಲಿರಿಕಲ್ ವಿಡಿಯೋ ಹಲ ಚಲ್ ಸೃಷ್ಟಿಸಿದೆ.
ಒಂದೊಂದು ಭಾಷೆಯಲ್ಲಿ ಒಂದೊಂದು ದಿನ ರಿಲೀಸ್
ಸಾಮಾನ್ಯವಾಗಿ ಎಲ್ಲಾ ಭಾಷೆಗಳಲ್ಲಿ ಸಾಂಗ್ ಏಕ ಕಾಲದಲ್ಲಿ ರಿಲೀಸ್ ಮಾಡಲಾಗುತ್ತದೆ. ಆದರೆ, ‘ವಿಕ್ರಾಂತ್ ರೋಣ’ ಬೇರೆ ತಂತ್ರ ಬಳಸಿದೆ. ‘ರಾ ರಾ ರಕ್ಕಮ್ಮ..’ ಲಿರಿಕಲ್ ಸಾಂಗ್ ಒಂದೊಂದು ಭಾಷೆಯಲ್ಲೂ ಒಂದೊಂದು ದಿನಾಂಕದಂದು ಈ ಹಾಡು ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲಿ ಇಂದು ರಿಲೀಸ್ ಆಗಿದ್ದು ಹಿಂದಿಯಲ್ಲಿ ಮೇ 24ಕ್ಕೆ ಮಧ್ಯಾಹ್ನ 01.05 ಕ್ಕೆ ಬಿಡುಗಡೆಯಾಗುತ್ತಿದ್ದು, ತೆಲುಗಿನಲ್ಲಿ ಮೇ 24 ರಂದು ಮಧ್ಯಾಹ್ನ 01.05ಕ್ಕೆ ಈ ಹಾಡು ಬಿಡುಗಡೆಯಾಗಲಿದೆ ಎಂದು ಕಿಚ್ಚ ಮಾಹಿತಿ ನೀಡಿದ್ದಾರೆ. ತಮಿಳಿನಲ್ಲಿ ಮೇ 26ರಂದು ಮಧ್ಯಾಹ್ನ 01.05ಕ್ಕೆ ಹಾಗೂ ಮಲಯಾಳಂನಲ್ಲಿ ಮೇ 27 ರಂದು 01.05ಕ್ಕೆ ಈ ಲಿರಿಕಲ್ ಹಾಡು ರಿಲೀಸ್ ಆಗುತ್ತಿದೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
