fbpx
ಸಮಾಚಾರ

ಒಂದು ವೇಳೆ ಪ್ಲೇ ಆಫ್ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ ಮುಂದೇನು? ಇದೇನು ಸೂಪರ್ ಓವರ್ ನಿಯಮ? ಇಲ್ಲಿದೆ ಸಂಪೂರ್ಣ ವಿವರ

2022 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆ ಹಂತಕ್ಕೆ ತಲುಪಿದ್ದು ಇನ್ನೇನು ಮೂರ್ನಾಲ್ಕು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಲೀಗ್ ಪಂದ್ಯಗಳೆಲ್ಲಾ ಮುಗಿದು ಪ್ಲೇ ಆಫ್ ಪಂದ್ಯಗಳನ್ನು ಇನ್ನಷ್ಟೇ ಆರಂಭಿಸಬೇಕಿದ್ದು ಈ ಹೊತ್ತಿನಲ್ಲಿ ದೊಡ್ಡ ವಿಘ್ನವೊಂದು ಎದುರಾಗಿದೆ.. ಎದೆಂದರೆ ಪ್ಲೇ ಆಫ್ ಪ್ರಮುಖ ಪಂದ್ಯಗಳ ಮೇಲೆ ಮಳೆರಾಯನ ಅವಕೃಪೆ..

ಹೌದು, ಪ್ಲೇ ಆಫ್ ನ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದ್ದು ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯ ಅಹಮದಾಬಾದ್ ನಲ್ಲಿ ನಡೆಯಲಿದೆ.. ಕೊಲ್ಕತ್ತಾ ನಡೆಯಲಿರುವ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸದ್ಯ ಹೆಚ್ಚಾಗಿದೆ ಎಂದು ಹವಾಮಾನ ವರದಿಗಳು ಬಂದಿವೆ. ಈಗಾಗಲೇ ಮೂರ್ನಾಲ್ಕು ದಿನಗಳಿಂದ ಕೊಲ್ಕೊತ್ತಾದಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುತ್ತಿದ್ದು ಇನ್ನೂ ಒಂದು ವಾರಗಳ ಕಾಲ ಮಳೆ ಸುರಿಯಲಿದೆ ಎಂದು ವೆದರ್ ರಿಪೋಟ್ ಹೇಳುತ್ತಿದೆ.

ಹೀಗಾಗಿ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳ ಭವಿಷ್ಯ ಸಂಪೂರ್ಣ ಮಳೆಯ ಮೇಲೆ ಅವಲಂಬಿತವಾಗಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಮತ್ತು ರಾಜಸ್ತಾನ ತಂಡ ಸೆಣಸಾಡಲಿದ್ದು ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಮತ್ತು ಲಕ್ನೋ ತಂಡ ಹಣಾಹಣಿ ನಡೆಸಲಿವೆ.. ಈ ಎರಡು ಪಂದ್ಯಗಳಿಗೆ ಆಡಳಿತ ಮಂಡಳಿ ಪ್ರತ್ಯೇಕ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ..

ನಿಗದಿತ 200 ನಿಮಿಷಗಳ ಪಂದ್ಯದ ಸಮಯದಲ್ಲಿ ಹೆಚ್ಚುವರಿ ಎರಡು ಗಂಟೆಗಳ ಭತ್ಯೆಯನ್ನು ಆಟದ ಪರಿಸ್ಥಿತಿಗಳಿಗೆ ಸೇರಿಸಲಾಗಿದೆ. ಪ್ರಾರಂಭವು ವಿಳಂಬವಾದರೆ, ಮೊದಲ ಮೂರು ಪ್ಲೇಆಫ್ ಪಂದ್ಯಗಳು – ಮೇ 27 ರಂದು ಅಹಮದಾಬಾದ್‌ನಲ್ಲಿ ಕ್ವಾಲಿಫೈಯರ್ 2 ಸೇರಿದಂತೆ – ರಾತ್ರಿ 9.40 ಕ್ಕೆ ತಡವಾಗಿ ಪ್ರಾರಂಭವಾಗಬಹುದು ಮತ್ತು ಮೇ 29 ರಂದು ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯವು ರಾತ್ರಿ 10.10 ಕ್ಕೆ ತಡವಾಗಿ ಪ್ರಾರಂಭವಾಗಬಹುದು.

ಐದು ಓವರ್ ಮ್ಯಾಚ್:
ಎಲಿಮಿನೇಟರ್ ಮತ್ತು ಪ್ರತಿ ಕ್ವಾಲಿಫೈಯರ್ ಪ್ಲೇಆಫ್ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲದಿರುದಿಲ್ಲ. ಮಳೆ ಹೆಚ್ಚಾದರೆ ಪ್ಲೇಆಫ್ ಪಂದ್ಯದ ಓವರ್‌ಗಳ ಸಂಖ್ಯೆಯನ್ನು ಕನಿಷ್ಠ ಎಂದರೆ ಐದು ಓವರ್ ಗಳವರೆಗೂ ಕಡಿಮೆ ಮಾಡಬಹುದು,. ಹೀಗೆ ಮಾಡಿದಾಗ ಪ್ರತಿ ತಂಡಕ್ಕೂ ಐದೈದು ಓವರ್ ಬ್ಯಾಟಿಂಗ್ ಅವಕಾಶ ಸಿಗಲಿದೆ.. ಇಲ್ಲಿ ತಂಡಗಳಿಗೆ ಯಾವುದೇ ಟೈಮ್ ಔಟ್ ಸಮಯ ಸಿಗುವುದಿಲ್ಲ.. ಪ್ರತಿ ಇನ್ನಿಂಗ್ಸ್ ಹತ್ತು ನಿಮಿಷಗಳ ಒಳಗೆ ಮುಗಿಸಬೇಕಾಗುತ್ತದೆ.. ಎರಡು ಇನ್ನಿಂಗ್ಸ್ ಗಳ ನಡುವೆ ನಾಲ್ಕು ನಿಮಿಷ ಇನ್ನಿಂಗ್ಸ್ ಬ್ರೇಕ್ ನೀಡಲಾಗುತ್ತದೆ..

ಸೂಪರ್ ಓವರ್:
ಒಂದು ವೇಳೆ ಯಾವುದೇ ಐಪಿಎಲ್ ಪ್ಲೇಆಫ್ ಪಂದ್ಯಗಳು ಹವಾಮಾನದಿಂದ ಅಡ್ಡಿಪಡಿಸಿದರೆ ಮತ್ತು ನಿಯಮಿತ ಸಮಯದಲ್ಲಿ ಯಾವುದೇ ಆಟವು ಸಾಧ್ಯವಾಗದಿದ್ದರೆ ಸೂಪರ್ ಓವರ್ ಆಡಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಒಂದು ವೇಳೆ ಸೂಪರ್ ಓವರ್ ಅನ್ನು ಕೂದಲು ಸಾಧ್ಯವಾಗದ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟರೆ ಲೀಗ್ ಪಾಯಿಂಟ್ಸ್ ಪಟ್ಟಿಯಲ್ಲಿ ಎದುರಾಳಿ ತಂಡಕ್ಕಿಂತ ಮೇಲಿರುವ ತಂಡವನ್ನು ವಿಜೇತ ತಂಡವಾಗಿ ಘೋಷಿಸಲಾಗುತ್ತದೆ.

ಸನ್ನಿವೇಶಗಳು:

ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಬಂದು ತೊಂದರೆಯಾದಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಗುಜರಾತ್ ತಂಡ ನೇರವಾಗಿ ಫೈನಲ್ ಪ್ರವೇಶಿಸುತ್ತದೆ.. ಇನ್ನು ರಾಜಸ್ತಾನ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಆಡಲಿದೆ..

ಹಾಗೆಯೇ ಎಲಿಮಿನೇಟರ್ ಪಂದ್ಯ ಕೂಡ ಮಳೆಯಿಂದ ಕೊಚ್ಚಿಹೋದರೆ ಇಲ್ಲಿ ಲಕ್ನೋ ತಂಡ ಕ್ವಾಲಿಫೈಯರ್ 2 ಪಂದ್ಯಕ್ಕೆ ಟಿಕೆಟ್ ಪಡೆಯಲಿದೆ.. ಬೆಂಗಳೂರು ತಂಡ ಟೂರ್ನಿಯಿಂದ ಎಲಿಮಿನೇಟ್ ಆಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top