fbpx
ಸಮಾಚಾರ

ಖ್ಯಾತ ಗಾಯಕಿ ಸಂಗೀತ ಸಚಿತ್ ನಿಧನ

ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಸುಮಾರು 200 ಹಾಡುಗಳನ್ನು ಹಾಡಿರುವ ಹಿನ್ನೆಲೆ ಗಾಯಕಿ ಸಂಗೀತಾ ಸಚಿತ್ ಅವರು ವಿಧಿವಶರಾಗಿದ್ದಾರೆ. 46 ವರ್ಷ ವಯಸ್ಸಿನ ಸಂಗೀತ ಅವರು ಭಾನುವಾರ ತಮ್ಮ ಸಹೋದರಿಯ ಮನೆಯಲ್ಲಿ ನಿಧನರಾದರು. ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಂಗೀತ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ನಿಧನ ಹೊಂದಿದ್ದಾರೆ.

ತನ್ನ ಸಹೋದರಿ ಮನೆಯಲ್ಲಿ ಸಾವನ್ನಪ್ಪಿದ್ದಾರೆ. 1976ರಲ್ಲಿ ಗಾಯಕಿ ಸಂಗೀತಾ ಅವರು ಕೇರಳದಲ್ಲಿ ಜನಿಸಿದರು. ರಾಜಮ್ಮ ಮತ್ತು ವಿ ಜಿ ಸಚಿತ್ ದಂಪತಿಯ ಮಗಳು ಸಂಗೀತಾ. ಸಂಗೀತಾ ಹೆಸರಿಗೆ ತಕ್ಕ ಹಾಗೆ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದರು. ಗಾಯಕಿ ಸಂಗೀತಾ ಕರ್ನಾಟಿಕ್ ಸಂಗೀತದಲ್ಲಿ ಪರಿಣತಿ ಹೊಂದಿದ್ದರು.

ಸಂಗೀತ ಅವರು ತಮಿಳಿನ ನಾಳೈಯಾ ತೀರ್ಪ್ ಮೂಲಕ ಪಾದಾರ್ಪಣೆ ಮಾಡಿದರು. ಎ.ಆರ್.ರೆಹಮಾನ್ ಸಂಯೋಜಿಸಿದ ತಮಿಳು ಚಲನಚಿತ್ರ ಮಿಸ್ಟರ್ ರೋಮಿಯೋದಲ್ಲಿ ಅವರ ಹಾಡಿದ ತಣ್ಣೀರೈ ಕತಲಿಕ್ಕುಮ್ ಹಾಡು ಸೂಪರ್ ಹಿಟ್ ಆಗಿತ್ತು. ಮಲಯಾಳಂ ಚಿತ್ರದ ಕಕ್ಕುಯಿಲ್‌ನ ಅಲಾರೆ ಗೋವಿಂದಾ, ಎನ್ನ್ ಸ್ವಂತಂ ಜಾನಕಿಕುಟ್ಟಿಯ ಅಂಬಿಲಿಪೂವಟ್ಟಂ ಮತ್ತು ಧುಮ್ ಧುಮ್ ಧುಮ್ ಧುರಯಾತೋ ಸೇರಿದಂತೆ ಅನೇಕ ಹಾಡುಗಳನ್ನು ಸಂಗೀತಾ ಹಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top