fbpx
ಸಮಾಚಾರ

“ಕನ್ನಡ ಚಿತ್ರರಂಗದವರು ಹೊಲಸು ಜನ” ನಾಲಿಗೆ ಹರಿಬಿಟ್ಟ ತೆಲುಗು ನಿರ್ದೇಶಕ

ತೆಲುಗು ಯುಟ್ಯೂಬ್ ಚಾನೆಲ್ ಒಂದು ಕೆಟ್ಟ ಪದ್ದತಿಯನ್ನು ಶುರುಮಾಡಿಕೊಂಡಿದೆ. ಅದೇನೆಂದರೆ ಕಿರುತರೆಯಲ್ಲಿ ಬೇಡಿಕೆ ಕಳೆದುಕೊಂಡವರನ್ನು ತಂದು ಕ್ಯಾಮೆರಾ ಮುಂದೆ ನಿಲ್ಲಿಸಿ ಇತರೆ ಚಿತ್ರೋದ್ಯಮದ ಸ್ಟಾರ್ ನಟರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವುದು. ಇದೀಗ ಇದೇ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ತೆಲುಗು ಸಿನಿಮಾದ ನಿರ್ದೇಶಕ ಗೀತ ಕೃಷ್ಣ ಹೇಳಿದ್ದು ಇದು ಕನ್ನಡಿಗರನ್ನು ಕೆರಳಿಸಿದೆ.

ಇತ್ತೀಚಿಗೆ ಯುಟ್ಯೂಬ್ ಚಾನೆಲ್ ಒಂದರ ಸಂಧರ್ಶನದಲ್ಲಿ ಭಾಗಿಯಾಗಿದ್ದ ಗೀತಾ ಕೃಷ್ಣ ಅವರಿಗೆ ನಿರ್ದೇಶಕಿ ಸಿನಿಮಾ ರಂಗದಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರಶ್ನೆ ಕೇಳುತ್ತಾ, ”ತಮಿಳು ಚಿತ್ರರಂಗದಲ್ಲಿ ಕೇವಲ ಪ್ರತಿಭೆ ಇದ್ದರಷ್ಟೆ ಅವಕಾಶ ನೀಡುತ್ತಾರಂತೆ ಹೌದಾ?” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗೀತಾ ಕೃಷ್ಣ “ಈ ಮಾತು ಹೇಳಿದ್ದಕ್ಕೆ ತಮಿಳು ಚಿತ್ರರಂಗದವರು ಬಂದು ನಿನಗೆ ಸನ್ಮಾನ ಮಾಡುತ್ತಾರೆ, ಅಸಲಿಗೆ ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ, ಅವರಂಥಹಾ ಅಸಹ್ಯದ ಜನ ಇನ್ನೆಲ್ಲೂ ಇಲ್ಲ, ಕನ್ನಡದವರಂತೂ ಇನ್ನೂ ಅಸಹ್ಯದವರು, ಕೊಳಕು ಜನ” ಎಂದಿದ್ದಾರೆ.

ಇನ್ನು ಮುಂದುವರಿಸಿ ”ಒಮ್ಮೆ ಒಂದು ಸಿನಿಮಾ ಚಿತ್ರೀಕರಣಕ್ಕೆ ಹೋಗಿದ್ದಾಗ ಒಬ್ಬಳು ಹುಡುಗಿ ಸಿಕ್ಕಿದ್ದಳು, ಆಕೆಗೆ ಹೈದರಾಬಾದ್‌ಗೆ ಬಾ, ನನ್ನ ಅಸಿಸ್ಟೆಂಟ್ ಡೈರೆಕ್ಟರ್‌ ಆಗಿ ಇರು ಎಂದೇ. ಆದರೆ ಆಕೆ ನನ್ನನ್ನೇ ಬಲೆಗೆ ಬೀಳಿಸಿಕೊಳ್ಳಲು ಬಂದಲು, ನಾನು ಅಲ್ಲಿಂದ ಕೂಡಲೇ ವಿಮಾನ ನಿಲ್ದಾಣಕ್ಕೆ ಓಡಿ ಬಂದೆ. ಕನ್ನಡ ಚಿತ್ರರಂಗದ ಸಹವಾಸವೇ ನನಗೆ ಬೇಡ ಎಂದು ಅನಿಸಿತು. ಕನ್ನಡ ಚಿತ್ರರಂಗದವರು ಬಹಳ ಅಸಹ್ಯ, ಅಲ್ಲಿ ವಿಪರೀತ ಕಾಸ್ಟಿಂಗ್ ಕೌಚ್ ಇದೆ” ಎಂದು ಕನ್ನಡ ಚಿತ್ರರಂಗದ ಬಗ್ಗೆ ತೀರಾ ಅಸಹ್ಯವಾಗಿ ಗೀತಾ ಕೃಷ್ಣ ಮಾತನಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top