fbpx
ಸಮಾಚಾರ

“ಈ ಬಾರಿ RCB ಐಪಿಎಲ್ ಕಪ್ ಗೆಲ್ಲಬೇಕು. ಏಕೆಂದರೆ…!” ಹೀಗೆಂದು ಸುರೇಶ್ ರೈನಾ ಹೇಳಲು ಕಾರಣವೇನು ಗೊತ್ತಾ?

ಐಪಿಎಲ್ ಸೀಸನ್ 15 ಇದೀಗ ರೋಚಕ ಹಂತ ತಲುಪಿದ್ದು ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಕಪ್ ಗೆಲ್ಲಲು ಸೆಣಸಾಡುತ್ತಿದೆ. ಇದೆಲ್ಲದರ ಮದ್ಯೆ ಸುರೇಶ್ ರೈನಾ ಮಾತ್ರ ಆರ್ ಸಿ ಬಿ ಈ ಬಾರಿ ಕಪ್ ಗೆಲ್ಲಬೇಕು ಎಂದು ಹೇಳಿದ್ದಾರೆ. ಈ ರೀತಿ ಹೇಳಲು ಅವರು ಕಾರಣ ಸಹ ನೀಡಿದ್ದಾರೆ.

ಆರ್ ಸಿ ಬಿ ಈ ಬಾರಿ ಕಪ್ ಗೆಲ್ಲಲು 3 ಪಂದ್ಯಗಳನ್ನು ಗೆಲ್ಲಬೇಕು. ಮೊದಲು ಎಲಿಮಿನೇಟರ್ ಪಂದ್ಯವನ್ನು ಆಡಲಿದ್ದು, ನಂತರ ಅರ್ಹತಾ ಪಂದ್ಯವನ್ನು ಗೆಲ್ಲಬೇಕು. ಆ ಬಳಿಕವಷ್ಟೇ ಫೈನಲ್ ತಲುಪಲಿದೆ. ಹೀಗಾಗಿ ನಿರ್ಣಾಯಕ 2 ಪಂದ್ಯಗಳನ್ನು ಗೆದ್ದು ಫೈನಲ್ ಪಂದ್ಯವನ್ನು ಗೆಲ್ಲಬೇಕು. ಇದರ ಮದ್ಯೆ ಸುರೇಶ್ ರೈನಾ ಈ ಬಾರಿಯ ಐಪಿಎಲ್ ಕಪ್ ಅನ್ನು ಆರ್ ಸಿ ಬಿ ಅವರೇ ಗೆಲ್ಲಬೇಕು ಎಂದು ಹೇಳಿದ್ದಾರೆ.

ಆರ್‌ಸಿಬಿ ಈ ವರ್ಷ ಐಪಿಎಲ್ ಟ್ರೋಫಿಯನ್ನು ಗೆಲ್ಲಬೇಕೆಂದು ನಾನು ನಿಜವಾಗಿಯೂ ಬಯಸುತ್ತೇನೆ. ಇದಕ್ಕೆ ಮುಖ್ಯ ಕಾರಣ ವಿರಾಟ್ ಕೊಹ್ಲಿ. ಕೊಹ್ಲಿಗಾಗಿ ಆರ್‌ಸಿಬಿ ಈ ಬಾರಿ ಪ್ರಶಸ್ತಿಯನ್ನು ಗೆಲ್ಲಬೇಕು ಎಂದು ರೈನಾ ಹೇಳಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯನ್ನು ಆರ್​ಸಿಬಿ ಚಾಂಪಿಯನ್ ತಂಡದ ಭಾಗವನ್ನಾಗಿಸಬೇಕೆಂದು ಹೇಳಿದ್ದಾರೆ.

ಈ ರೀತಿ ಸುರೇಶ್ ರೈನಾ ಹೇಳಲು ಒಂದು ಬಲವಾದ ಕಾರಣ ವಿದೆ. ಏಕೆಂದರೆ ಇಲ್ಲಿಯವರೆಗೂ ವಿರಾಟ್ ಕೊಹ್ಲಿ ಆರ್ ಸಿ ಬಿ ಪರ ಸತತ 15 ಸೀಸನ್ ಗಳಿಂದ ಆಡುತ್ತಿದ್ದಾರೆ. ಆದರೂ ಒಂದು ಬಾರಿಯೂ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ವಿರಾಟ್ ಗೋಸ್ಕರ ಆರ್ ಸಿ ಬಿ ಕಪ್ ಗೆಲ್ಲಬೇಕೆಂದು ಹಾರೈಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top