fbpx
ಸಮಾಚಾರ

ರಿಷಭ್ ಪಂತ್‌ಗೆ 1.63 ಕೋಟಿ ರೂ ಪಂಗನಾಮ ಹಾಕಿದ ಹರಿಯಾಣ ಕ್ರಿಕೆಟರ್: ಕೇಸ್ ದಾಖಲು

ಕ್ರಿಕೆಟಿಗ ರಿಷಭ್‌ ಪಂತ್‌ ಹರ್ಯಾಣ ಕ್ರಿಕೆಟಿಗರೊಬ್ಬರು ಮಂಕುಬೂದಿ ಎರೆಚಿರುವ ಘಟನೆ ಬೆಳಕಿಗೆ ಬಂದಿದೆ.. ಮೃಣಾಂಕ್‌ ಸಿಂಗ್‌ ಎಂಬ ಹರಿಯಾಣ ಕ್ರಿಕೆಟಿಗ ಮಾತಲ್ಲೇ ರಿಷಬ್ ಪ್ಯಾಂಟ್ ಅವರನ್ನು ಮರಳು ಮಾಡಿ ಮೋಸ ಮಾಡಿರುವ ಘಟನೆ ತಡವಾಗಿ ಬಯಲಾಗಿದೆ.

2021ರ ಫೆಬ್ರವರಿಯಲ್ಲಿ ಮೃಣಾಂಕ್‌ ತಾವು ದುಬಾರಿ ವಾಚ್‌, ಬ್ಯಾಗ್‌ಗಳನ್ನು ಮಾರಾಟ ಮತ್ತು ಖರೀದಿ ವ್ಯವಹಾರ ಆರಂಭಿಸಿದ್ದಾಗಿ ಪಂತ್‌ಗೆ ಹೇಳಿದ್ದರು. ವಾಚ್‌ಗಳನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ಮತ್ತು ಬ್ರ್ಯಾಂಡೆಡ್ ವಾಚ್‌ಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ ಹಣ ತೆಗೆದುಕೊಂಡು ಪಂತ್‌ಗೆ ಬೋಗಸ್ ಚೆಕ್ ನೀಡಿ ವಂಚಿಸುತ್ತಿದ್ದ. ತಾನು ಮೋಸ ಹೋಗಿರುವುದನ್ನು ಅರಿತ ರಿಷಬ್ ಪಂತ್ ಹಾಗೂ ಆತನ ಮ್ಯಾನೇಜರ್ ಪುನೀತ್ ಸೋಲಂಕಿ ಪೊಲೀಸರಿಗೆ ದೂರು ನೀಡಿದ್ದಾರೆ.

ಫ್ರಾಂಕ್ ಮುಲ್ಲರ್ ವ್ಯಾನ್‌ಗಾರ್ಡ್ ಯಾಟಿಂಗ್ ಸಿರೀಸ್‌ನಿಂದ ವಾಚ್ ಖರೀದಿಸಲು ಪಂತ್ ಬಯಸಿದ್ದು, ವಾಚ್‌ಗಾಗಿ 36,25,120 ರೂ, ಇದಲ್ಲದೇ ರಿಚರ್ಡ್ ಮಿಲ್ಲೆ ಅವರ ವಾಚ್‌ಗಾಗಿ 62,60,000 ರೂ. ನಂಬಿಸಿದ್ದ. ಹೀಗೆ ಅಗ್ಗದ ಬೆಲೆಯಲ್ಲಿ ಐಷಾರಾಮಿ ಕೈಗಡಿಯಾರಗಳನ್ನು ಖರೀದಿಸಬಹುದು ಎಂದು ಮೃಣಾಕ್ ರಿಷಬ್ ಪಂತ್ ಮತ್ತು ಅವರ ಮ್ಯಾನೇಜರ್ ಸೋಲಂಕಿಯನ್ನು ವಂಚಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top