fbpx
ಸಮಾಚಾರ

ಶೂಟಿಂಗ್ ವೇಳೆ ಅವಘಡ; ಪ್ರಪಾತಕ್ಕೆ ಉರುಳಿದ ವಾಹನ, ಸಮಂತಾ – ವಿಜಯ್ ದೇವರಕೊಂಡಗೆ ಗಾಯ

ನಟಿ ಸಮಂತಾ ರುತ್ ಪ್ರಭು ಮತ್ತು ಯುವ ನಾಯಕ ವಿಜಯ್ ದೇವರಕೊಂಡ ಅವರ ‘ಕುಶಿ’ ಚಿತ್ರದ ಶೂಟಿಂಗ್ ವೇಳೆ ಅವಘಡ ಜರುಗಿದ್ದು ಇಬ್ಬರೂ ಗಾಯಗೊಂಡಿದ್ದಾರೆ ಎಂಬ ಆಘಾತಕಾರಿ ವರದಿಗಳು ಹೊರಬಿದ್ದಿವೆ. ಆದರೆ, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ, ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದ ಪ್ರಕಾರ, , ‘ಸಮಂತಾ ಮತ್ತು ವಿಜಯ್ ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಸ್ಟಂಟ್ ಸೀಕ್ವೆನ್ಸ್ ಮಾಡುತ್ತಿದ್ದಾಗ ಗಾಯಗೊಂಡಿದ್ದಾರೆ. ಆ ದೃಶ್ಯದ ಚಿತ್ರೀಕರಣ ತುಂಬಾ ಕಷ್ಟಕರವಾಗಿತ್ತು. ಲಿಡ್ಡರ್ ನದಿಯ ಎರಡೂ ಬದಿಗಳಲ್ಲಿ ಕಟ್ಟಲಾದ ಹಗ್ಗದ ಮೇಲೆ ಇಬ್ಬರೂ ಕಾರನ್ನು ಓಡಿಸಬೇಕಾಗಿತ್ತು. ಆದರೆ ದುರದೃಷ್ಟವಶಾತ್, ವಾಹನವು ಆಳವಾದ ನೀರಿನಲ್ಲಿ ಬಿದ್ದು ಇಬ್ಬರ ಬೆನ್ನಿಗೆ ಗಾಯವಾಗಿದೆ. ಆ ದಿನವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ. ಆದರೆ ಈ ಘಟನೆಯ ಕುರಿತು ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.

ಈ ಘಟನೆ ಯಿಂದ ಚಿತ್ರೀಕರಣ ನಿಲ್ಲಿಸಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಚಿತ್ರತಂಡದ ಸಿಬ್ಬಂದಿ ಒಬ್ಬರು ಮಾಹಿತಿ ನೀಡಿದ ಪ್ರಕಾರ, ಇಬ್ಬರನ್ನು ತಕ್ಷಣ ದಾಲ್ ಸರೋವರದ ಪಕ್ಕದಲ್ಲೇ ಇದ್ದ ಹೋಟೆಲ್‌ಗೆ ಸಾಗಿಸಲಾಯಿತು. ಅಲ್ಲಿಗೆ ಫಿಸಿಯೋಥೆರಪಿಸ್ಟ್ ಕರೆಸಿ ಚಿಕಿತ್ಸೆ ನೀಡಲಾಯಿತು ಎಂದು ಹೇಳಿದ್ದಾರೆ. ಈ ಘಟನೆ ನಡೆದು ಎರಡು ದಿನ ಕಳೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ವಿಜಯ್ ದೇವರಕೊಂಡ ಮತ್ತು ಸಮಂತಾ ಇಬ್ಬರೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ತಮ್ಮ ಭಾಗದ ಚಿತ್ರೀಕರಣ ಮುಂದುವರೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top