fbpx
ಸಮಾಚಾರ

ತಡರಾತ್ರಿಯಲ್ಲಿ ಕಿಡಿಗೇಡಿಗಳ ಹುಚ್ಚಾಟ: ರಸ್ತೆ, ಶಾಲೆ ಗೋಡೆ, ಮೆಟ್ಟಿಲು ಮೇಲೆ ಊರುತುಂಬಾ sorry.. sorry..ಬರಹ

ಪಾಗಲ್ ಪ್ರೇಮಿಯೊಬ್ಬ ಮಾಡಿರುವ ಹುಚ್ಚಾಟ ಇದೀಗ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ಬೆಂಗಳೂರಿನ ಶಾಲೆಯೊಂದರ ಮೆಟ್ಟಿಲು,ಕಾಂಪೌಂಡ್ ಹಾಗೂ ರಸ್ತೆಯುದ್ದಕ್ಕೂ Sorry, Sorry ಎಂದು ಬರೆಯಲಾಗಿದೆ. ಸ್ಪ್ರೇ ಪೈಂಟ್ ನಲ್ಲಿ ಈ ರೀತಿ ಬರೆಯಲಾಗಿದೆ. ಮನೆಯ ಗೋಡೆಯೊಂದರ ಮೇಲೆ Sorry Ma, Sorry Pa ಅಂತಾ ಸಹ ಬರೆಯಲಾಗಿದೆ. ಮತ್ತೊಂದು ಕಡೆ ಹಾರ್ಟ್ ಸಿಂಬಲ್ ಸಹ ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಪಾಗಲ್ ಪ್ರೇಮಿಯೇ ಈ ರೀತಿ ಹುಚ್ಚಾಟ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನ ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಕ್ಷಮಿಸು (Sorry) ಅಂತ ಬರೆದಿದ್ದಾನೆ. ಬರೀ ಶಾಲೆ ಅಷ್ಟೇ ಅಲ್ಲ, ಅಲ್ಲೇ ಪಕ್ಕದಲ್ಲಿದ್ದ ಮನೆಯ ಕಾಂಪೌಂಡ್, ಮೆಟ್ಟಿಲ ಮೇಲೆಲ್ಲಾ ‘Sorry’ ಎಂದು ಆತ ಬರೆದಿದ್ದಾನೆ. ಕಾಲೇಜ್ ಮುಂದಿನ ರಸ್ತೆ ಮೇಲೂ ಸಾರಿ ಅಂತ ನೂರಾರು ಸಾರಿ ಬರೆದಿದ್ದಾನೆ. ಬೆಳಗ್ಗೆ ಎದ್ದು ನೋಡಿದ ಸ್ಥಳೀಯರಿಗೆ ಆಘಾತವಾಗಿದ್ದು, ಇದು ಯಾರು ಯಾರಿಗಾಗಿ ಬರೆದ ಬರಹ ಎಂದು ಕುತೂಹಲಗೊಂಡಿದ್ದಾರೆ.

ತಡ ರಾತ್ರಿ ಸುಮಾರು 11 ರಿಂದ 12 ಗಂಟೆ ಸಮಯದಲ್ಲಿ ಡ್ಯೂಕ್ ಬೈಕ್ ನಲ್ಲಿ ಫುಡ್ ಡೆಲಿವರಿ ಬ್ಯಾಗ್ ನೊಂದಿಗೆ ಬಂದ ಇಬ್ಬರು ಯುವಕರು ಕೆಂಪು ಬಣ್ಣದ ಸ್ಪ್ರೇ ತಂದು ಶಾಲೆ ಗೋಡೆ ಮೇಲೆ, ಮೆಟ್ಟಿಲುಗಳ ಬರೆದಿರುವುದಲ್ಲದೆ ರಸ್ತೆ ತುಂಬೆಲ್ಲಾ sorry.. sorry ಅಂತ (ಕ್ಷಮೆಯಾಚನೆ) ಬರವಣಿಗೆ ಬರೆದಿದ್ದಾರೇ. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top