fbpx
ಸಮಾಚಾರ

ಪತಿ, ಮಾವನ ವಿರುದ್ಧವೇ ದೂರು ದಾಖಲಿಸಿದ ನಟಿ ಚೈತ್ರಾ ಹಳ್ಳಿಕೇರಿ

ಬ್ಯಾಂಕ್ ಖಾತೆ ದುರ್ಬಳಕೆ ಆರೋಪದಡಿ ನಟಿ ಚೈತ್ರ ಹಳ್ಳಿಕೇರಿ ಅವರು ಪತಿ ಮತ್ತು ಮಾವನ ವಿರುದ್ಧ ಇಲ್ಲಿನ ಜಯಲಕ್ಷ್ಮಿಪುರಂ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ. ಗೋಲ್ಡ್ ಲೋನ್ ಪಡೆಯುವಾಗ ತನ್ನ ಸಹಿಯನ್ನು ನಕಲು ಮಾಡಿದ್ದಾರೆ ಎಂದು ಚೈತ್ರಾ ಆರೋಪ ಮಾಡಿದ್ದು, ಈ ಅವ್ಯವಹಾರದಲ್ಲಿ ಬ್ಯಾಂಕ್ ಮ್ಯಾನೇಜರ್ ಕೂಡ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಅಲ್ಲದೇ ನಾನು ಈ ಬಗ್ಗೆ ಪ್ರಶ್ನೆ ಮಾಡಿದ ಕಾರಣ ನನಗೆ ಸುಮ್ಮನಿರುವಂತೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ನಟಿ ಹೇಳಿದ್ದು, ಮೂರು ದಿನಗಳ ಹಿಂದೆಯೇ ಸೂರು ನೀಡಿರುವ ಬಗ್ಗೆ ಮಾಹಿತಿ ಇದೆ.

ಸ್ಯಾಂಡಲ್​ವುಡ್​ನಲ್ಲಿ ಖುಷಿ, ಶಿಷ್ಯ, ಗುನ್ನ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿ ಚೈತ್ರಾ ಅಭಿನಯಿಸಿದ್ದಾರೆ. ಆದರೆ ಖುಷಿ ಚಿತ್ರ ಅವರಿಗೆ ಹೆಸರು ತಂದು ಕೊಟ್ಟ ಸಿನೆಮಾವಾಗಿದ್ದು, ಈ ಮೂಲಕ ಜನರಿಗೆ ಹತ್ತಿರವಾಗಿದ್ದರು.

ನನಗೆ ಜೀವ ಬೆದರಿಕೆ ಇದೆ ಸೂಕ್ತ ರಕ್ಷಣೆ ಕೊಡಿ ಎಂದೂ ಅವರು ಕೋರಿದ್ದಾರೆ. ಗಂಡ, ಮಾವನ ಷಡ್ಯಂತ್ರದ ವಹಿವಾಟಿಗೆ ಜಯಲಕ್ಷ್ಮೀಪುರಂನ ಸೌತ್ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ನೆರವಾಗಿದ್ದಾರೆ ಎಂದು ದೂರಿದ್ದಾರೆ. ನನ್ನ ಖಾತೆ ಮೂಲಕ ₹ 13 ಲಕ್ಷದ ಚಿನ್ನ ಅಡವಿಟ್ಟು ವಂಚಿಸಲಾಗಿದೆ. ಪತಿ ವಿರುದ್ಧ ಈಗಾಗಲೇ ದೈಹಿಕ ಹಲ್ಲೆ ಆರೋಪಿಸಿ ಕೇಸ್ ಹಾಕಿದ್ದೇನೆ. ನನ್ನ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿದ್ದು ಗೊತ್ತಾಗಿ ಈಗ ಮತ್ತೊಂದು ಪ್ರಕರಣ ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.

ವಕೀಲರು ಹೇಳಿದ್ದೇನು?
“ಗಂಡ, ಹೆಂಡತಿ ಮಧ್ಯೆ ಮನಸ್ತಾಪ ಆಗತ್ತೆ, ಚೈತ್ರಾ ಕೌಟುಂಬಿಕ ಹಿಂಸೆ ಕೂಡ ಮಾಡಲಾಗುತ್ತದೆ. ಆಮೇಲೆ ಚೈತ್ರಾ ಅವರು ಬೆಂಗಳೂರಿನ ಬಸವನಗುಡಿ ಠಾಣೆಯಲ್ಲಿ ಪತಿ ವಿರುದ್ಧ ದೂರು ನೀಡುತ್ತಾರೆ. 2018ರಲ್ಲಿ ಚೈತ್ರಾ, ಬಾಲಾಜಿ ಅನ್ಯೋನ್ಯವಾಗಿ ಇರಬೇಕು ಅಂತ ಒಪ್ಪಂದ ಆಗತ್ತೆ. ಈ ಕೇಸ್ ಮುಚ್ಚುಹಾಕಲಾಗುತ್ತದೆ. ಈಗ ಈ ಕೇಸ್ ಮತ್ತೆ ರೀ ಓಪನ್ ಮಾಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ” ಎಂದು ಚೈತ್ರಾ ವಕೀಲ ಕೇಶವ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top